ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್19 ಪರಿಣಾಮ: ಮೈಕ್ರೋಸಾಫ್ಟ್ ನೇಮಕಾತಿಯಲ್ಲಿ ಶೇ 46ರಷ್ಟು ಕುಸಿತ

|
Google Oneindia Kannada News

ಬೆಂಗಳೂರು, ಏಪ್ರಿಲ್ 22: ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಸಂಸ್ಥೆ ಮೈಕ್ರೋಸಾಫ್ಟ್ ಕೂಡಾ ಕೊರೊನಾವೈರಸ್ ನಿಂದ ಉಂಟಾಗಿರುವ ಆರ್ಥಿಕ ಹೊಡೆತಕ್ಕೆ ಸಿಲುಕಿದೆ. ಭಾರತ ಮೂಲದ ಸತಯ್ ನಾಡೆಲ್ಲಾ ನೇತೃತ್ವದ ಮೈಕ್ರೋಸಾಫ್ಟ್ ಸಂಸ್ಥೆಯಲ್ಲಿ ಶೇ 46ರಷ್ಟು ನೇಮಕಾತಿಯನ್ನು ಕಡಿತಗೊಳಿಸಲಾಗಿದೆ.

ಮಾರ್ಚ್ ತಿಂಗಳಲ್ಲಿ 5,580 ಉದ್ಯೋಗ ಅವಕಾಶ ಇರುವ ಬಗ್ಗೆ ಪ್ರಕಟಣೆ ಹೊರಡಿಸಿದ್ದ ಮೈಕ್ರೋಸಾಫ್ಟ್ ಈಗ ಅರ್ಧದಷ್ಟು ನೇಮಕಾತಿಯನ್ನು ಸ್ಥಗಿತಗೊಳಿಸುವ ಪರಿಸ್ಥಿತಿಗೆ ಬಂದಿದೆ. ಮಾರ್ಚ್ 22 ರಂದು ನೀಡಿದ್ದ ಪ್ರಕಟಣೆಯ ಶೇ 46ರಷ್ಟು ಸುಮಾರು 3028 ನೇಮಕಾತಿ ಮಾತ್ರ ಮಾಡಿಕೊಳ್ಳುವುದಾಗಿ ಏಪ್ರಿಲ್ 20ರಂದು ಹೇಳಿದೆ.

ಜನರ ಪ್ರೀತಿಗೆ ತಲೆ ಬಾಗಿದ ಮೈಕ್ರೋಸಾಫ್ಟ್, MS Paint ಜೀವಂತಜನರ ಪ್ರೀತಿಗೆ ತಲೆ ಬಾಗಿದ ಮೈಕ್ರೋಸಾಫ್ಟ್, MS Paint ಜೀವಂತ

ಇದೇ ರೀತಿ ಮೈಕ್ರೋಸಾಫ್ಟ್ ಒಡೆತನದ ಲಿಂಕ್ಡಿನ್ ಮಾರ್ಚ್ 1ರಂದು 550 ಹುದ್ದೆಗಳಿಗೆ ಕರೆ ನೀಡಿತ್ತು. ಈಗ 3 ಹುದ್ದೆಗಳಿಗೆ ಮಾತ್ರ ನೇಮಕಾತಿ ನಡೆಸಲಿದೆ. ಗೂಗಲ್ ಕೂಡಾ ಜಾಗತಿಕವಾಗಿ ನೇಮಕಾತಿಯನ್ನು ನಿಲ್ಲಿಸಿದೆ. 2019ರಲ್ಲಿ ಇದೇ ಅವಧಿಯಲ್ಲಿ 20, 000 ನೇಮಕಾತಿ ಮಾಡಿಕೊಂಡಿದ್ದ ಗೂಗಲ್ ಈ ವರ್ಷಾಂತ್ಯದವರೆಗೂ ಯಾವುದೇ ಹೊಸ ನೇಮಕಾತಿ ಇಲ್ಲ ಎಂದು ಹೇಳಿದೆ.

ಲಿಂಕ್ಡಿನ್ ಸಮೀಕ್ಷೆಯಂತೆ ಭಾರತದಲ್ಲಿ ಶೇ 25ರಷ್ಟು ಉದ್ಯೋಗಿಗಳು ಸಂಬಳ ಕಡಿತಕ್ಕೆ ಒಳಗಾಗಿದ್ದರೆ, ಶೇ 39ರಷ್ಟು ಮಂದಿ ವೈಯಕ್ತಿಕ ಹಣ ಉಳಿಕೆ ಸಾಧ್ಯವಾಗಿಲ್ಲ ಎಂದಿದ್ದಾರೆ.

English summary
Tech giant Microsoft has seen nearly 46 per cent drop in hiring activity while its professional career website LinkedIn has listed even worse - just 3 openings for its entire operation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X