ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ್ಯಾಕ್ ಬಳಕೆದಾರರಿಗೆ ಲಭ್ಯವಿರುವ ಆಫೀಸ್ 2016 ವೈಶಿಷ್ಟ್ಯಗಳು

By Mahesh
|
Google Oneindia Kannada News

ಬೆಂಗಳೂರು, ಜುಲೈ.17: ಮೈಕ್ರೊಸಾಫ್ಟ್ ಸಂಸ್ಥೆ ತನ್ನ ಹೊಚ್ಚ ಹೊಸ ಉತ್ಪನ್ನ ಆಫೀಸ್ 2016 ಪ್ಯಾಕೇಜನ್ನು ಆಪಲ್ ಆಪರೇಟಿಂಗ್ ಸಿಸ್ಟಮ್ ಆಧಾರಿತ ಮ್ಯಾಕ್ ಗಾಗಿ ಬಿಡುಗಡೆಗೊಳಿಸಿದೆ. ಸುಮಾರು 139 ದೇಶಗಳು ಮತ್ತು 16 ಭಾಷೆಗಳಲ್ಲಿ ಹೊಸ ಆಫೀಸ್ ಅಪ್ಡೇಟ್ ಆಗಿರುವ ವರ್ಡ್, ಎಕ್ಸೆಲ್, ಪವರ್ ಪಾಯಿಂಟ್, ಒನ್ ನೋಟ್ ಮತ್ತು ಔಟ್ ಲುಕ್ ಗಳನ್ನು ಹೊಂದಬಹುದಾಗಿದೆ.

ಮ್ಯಾಕ್ ದಕ್ಷತೆಗೆ ಅನುಗುಣವಾಗಿ ಅಭಿವೃದ್ಧಿಗೊಂಡಿದೆ. ಈಗಿನ ಆಫೀಸ್ 365 ಗ್ರಾಹಕರು ಹೊಸ ಆವೃತಿಯನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಮೊದಲು ಪಡೆಯಲಿದ್ದಾರೆ. [ಮೈಕ್ರೋಸಾಫ್ಟ್ ಹ್ಯಾಕಿಂಗ್ ಸ್ಪರ್ಧೆ ಗೆದ್ದ ಬೆಂಗಳೂರಿಗರು]

ಇದು ಬಹುಸಾಧನಗಳಲ್ಲಿ ಆಫೀಸ್, ಒಂದು ಟಿವಿ ಕ್ಲೌಡ್ (ಒನ್ ಡ್ರೈವ್) ಸಂಗ್ರಹಗಳನ್ನು ಹೊಂದಿರುತ್ತದೆ. ಇತರೆ ಮ್ಯಾಕ್ ಬಳಕೆದಾರರು ಆಫೀಸ್ 2016 ಒಂದು ಸಲ ಖರೀದಿ ಆವೃತಿಯನ್ನು ಸೆಪ್ಟೆಂಬರ್ ನಂತರ ಪಡೆಯಲಿದ್ದಾರೆ. [ನೋಕಿಯಾ ಹೆಸರು ಕೈಬಿಟ್ಟ ಮೈಕ್ರೋಸಾಫ್ಟ್]

ಮ್ಯಾಕ್ ಗಾಗಿ ಆಫೀಸ್ ಕ್ಲೌಡ್ ನಿಂದ ಕೂಡಿದ್ದು, ಬಳಕೆದಾರರು ತಮ್ಮ ದಾಖಲೆಗಳನ್ನು ಒನ್ ಡ್ರೈವ್ ನಲ್ಲೂ ಪಡೆಯಬಹುದಾಗಿದೆ. ಇದು ಯಾವುದೇ ತಪ್ಪಿಲ್ಲದ ಆಫೀಸ್ ಅನುಭವವನ್ನು ಹಂಚುತ್ತದೆ ಮತ್ತು ಮ್ಯಾಕ್ ನ ಭಿನ್ನ ಆಯ್ಕೆಗಳ ಲಾಭ ಪಡೆಯುವಂತೆ ಯೋಚಿಸಿ ವಿನ್ಯಾಸಗೊಳಿಸಲಾಗಿದೆ. ಹೊಸ ಆಪ್ ರೆಟಿನಾ ಡಿಸ್ ಪ್ಲೇ ಬೆಂಬಲ, ಫುಲ್‍ಸ್ಕ್ರೀನ್ ವ್ಯೂ, ಮಲ್ಟಿ ಟಚ್ ಆಯ್ಕೆಗಳನ್ನು ಹೊಂದಿದೆ.

ಮ್ಯಾಕ್ ನಲ್ಲಿ 5 ಅತ್ಯಾಧುನಿಕ, ಪ್ರಥಮ ದರ್ಜೆ ಆಪ್

ಮ್ಯಾಕ್ ನಲ್ಲಿ 5 ಅತ್ಯಾಧುನಿಕ, ಪ್ರಥಮ ದರ್ಜೆ ಆಪ್

ವರ್ಡ್ ಫಾರ್ ಮ್ಯಾಕ್: ಅತ್ಯಂತ ದಕ್ಷಯುತ ಬರೆಯುವ ಮತ್ತು ಪರಿಶೀಲಿಸುವ ಸಾಧನಗಳು ವರ್ಡ್‍ನಲ್ಲಿ ಲಭ್ಯವಿದ್ದು, ಇದು ದಾಖಲೆಗಳ ನೋಡುವಿಕೆ ಸುಲಭವಾಗಿಸುತ್ತದೆ. ಹೊಸತಾಗಿ ವಿನ್ಯಾಸಗೊಂಡ ಟ್ಯಾಬ್ಲೆಟ್ ಗಳಲ್ಲಿ ಸುಲಭವಾಗಿ ವಿನ್ಯಾಸದ ಲೇ ಔಟ್, ಕಲರ್ ಮತ್ತು ಫಾಂಟ್ ಗಳನ್ನು ನಿಮ್ಮ ಡಾಕ್ಯುಮೆಂಟ್ ನಲ್ಲಿ ಅಳವಡಿಸಿಕೊಳ್ಳಬಹುದು. ನೀವು ಅದೇ ಡಾಕ್ಯುಮೆಂಟ್ ಮೇಲೆ ತಂಡದ ಸದಸ್ಯರೊಂದಿಗೆ ಸಹ ಕೆಲಸ ಮಾಡುವ ಆಯ್ಕೆ ಲಭ್ಯವಿದೆ.

ಎಕ್ಸೆಲ್ ಫಾರ್ ಮ್ಯಾಕ್

ಎಕ್ಸೆಲ್ ಫಾರ್ ಮ್ಯಾಕ್

ಮ್ಯಾಕ್ ಗಾಗಿನ ಹೊಸ ಎಕ್ಸೆಲ್ ನಿಮ್ಮ ದಾಖಲೆಗೆ ಸೂಕ್ತವಾಗುವ ಚಾರ್ಟ್ ಪ್ರಿವ್ಯೂನೊಂದಿಗೆ ಶಿಫಾರಸ್ಸು ಮಾಡಿದ ಮಾಹಿತಿ ನೀಡುತ್ತದೆ. ಗೊತ್ತಿರುವ ಕೀಬೋರ್ಡ್ ಶಾರ್ಟ್‍ಕಟ್, ಆಟೊಕಂಪ್ಲೀಟ್ ಮತ್ತು ಅಭಿವೃದ್ಧಿಗೊಂಡ ಫಾರ್ಮುಲಾಗಳು ಬಳಕೆಯನ್ನು ಇನ್ನಷ್ಟು ಸುಲಭವಾಗಿಸುತ್ತವೆ.

ಪವರ್ ಪಾಯಿಂಟ್ ಫಾರ್ ಮ್ಯಾಕ್

ಪವರ್ ಪಾಯಿಂಟ್ ಫಾರ್ ಮ್ಯಾಕ್

ಪವರ್ ಪಾಯಿಂಟ್ ಫಾರ್ ಮ್ಯಾಕ್:ಅಭಿವೃದ್ಧಿಯುತ ಪವರ್ ಪಾಯಿಂಟ್ ಪ್ರೆಸೆಂಟರ್ ವ್ಯೂ ನೀವು ಪ್ರೆಸೆಂಟೆಷನ್ ಮಾಡುವಾಗ ಸಂಪೂರ್ಣ ನಿಯಂತ್ರಣ ನೀಡುತ್ತದೆ. ಹೊಸ ಆನಿಮೇಷನ್ ವ್ಯವಸ್ಥೆ ಅತ್ಯುತ್ತಮ ಸ್ಲೈಡ್ ಗಳ ವಿನ್ಯಾಸಕ್ಕೆ ಸಹಾಯ ಮಾಡುತ್ತದೆ.

ಔಟ್ ಲುಕ್ ಫಾರ್ ಮ್ಯಾಕ್

ಔಟ್ ಲುಕ್ ಫಾರ್ ಮ್ಯಾಕ್

ನಿಮ್ಮ ಇ-ಮೇಲ್, ಕ್ಯಾಲೆಂಡರ್, ಕಾಂಟ್ಯಾಟ್ ಮತ್ತು ಟಾಸ್ಕ್ ಗಳನ್ನು ಸುಲಭವಾಗಿ ನಿಯಂತ್ರಿಸಿಕೊಳ್ಳಬಹುದು. ಮ್ಯಾಕ್ ಗಾಗಿನ ಹೊಸ ಔಟ್‍ಲುಕ್ ಪುಶ್ ಮೇಲ್ ಬೆಂಬಲ ಹೊಂದಿದ್ದು, ನಿಮ್ಮ ಇನ್‍ಬಾಕ್ಸ್ ಅಪ್ಡೇಟ್ ಗೆ ಸದಾ ಬೆಂಬಲ ನೀಡುತ್ತದೆ. ಸಂವಹನ ವ್ಯೂ ಕೂಡ ಅಭಿವೃದ್ಧಿಗೊಂಡಿದೆ.

ಒನ್ ನೋಟ್ ಫಾರ್ ಮ್ಯಾಕ್

ಒನ್ ನೋಟ್ ಫಾರ್ ಮ್ಯಾಕ್

ಒನ್ ನೋಟ್ ಆಫೀಸ್ ಫಾರ್ ಮ್ಯಾಕ್ ಗೆ ಹೊಸ ಸೇರ್ಪಡೆ. ನೀವು ನಿಮ್ಮ ಆಲೋಚನೆಗಳನ್ನು ಡಿಜಿಟಲ್ ನೋಟ್‍ಬುಕ್ ನಲ್ಲಿ ಸೆರೆ ಹಿಡಿದಿಟ್ಟುಕೊಳ್ಳಬಹುದು ಮತ್ತು ಯಾವುದೇ ಸಾಧನದಲ್ಲಿ ಅದನ್ನು ಪಡೆದುಕೊಳ್ಳಬಹುದು. ಒನ್ ನೋಟ್ ಸರ್ಚ್‍ಎಂಜಿನ್ ಮೂಲಕ ಸೆರೆ ಹಿಡಿದಿಟ್ಟ ಸಂಗತಿಗಳನ್ನು ತ್ವರಿತವಾಗಿ ಹುಡುಕಿಕೊಳ್ಳಬಹುದು. ಅಲ್ಲಿನ ಟ್ಯಾಗ್, ಇಂಡೆಕ್ಸ್ ಗಳು ಇದಕ್ಕೆ ಸಹಕಾರಿಯಾಗಿವೆ. ನೀವು ನಿಮಗೆ ಬೇಕಾದಂತೆ ನೋಟ್‍ಗಳನ್ನು ವಿನ್ಯಾಸಗೊಳಿಸಿಕೊಳ್ಳಬಹುದು. ನಿಮ್ಮ ಸ್ನೇಹಿತರು, ಕುಟುಂಬ, ಸಹೋದ್ಯೋಗಿಗಳೊಂದಿಗೂ ನೀವು ನಿಮ್ಮ ನೋಟ್‍ಗಳನ್ನು ಹಂಚಿಕೊಳ್ಳಬಹುದು.

ಆಫೀಸ್: 4 ತಿಂಗಳಲ್ಲಿ 7 ಅಪ್‍ಡೇಟ್ಸ್

ಆಫೀಸ್: 4 ತಿಂಗಳಲ್ಲಿ 7 ಅಪ್‍ಡೇಟ್ಸ್

ಆಫೀಸ್ 2016 ಫಾರ್ ಮ್ಯಾಕ್ಸ್ ಗಾಗಿನ ಗ್ರಾಹಕ ಪ್ರತಿಕ್ರಿಯೆಯ ಆವೃತಿಯನ್ನು ಮಾರ್ಚ್ ನಲ್ಲಿ ಬಿಡುಗಡೆಗೊಳಿಸಲಾಗಿತ್ತು. ಪ್ರಿವ್ಯೂ ಆವೃತಿಗೆ ಲಕ್ಷ ಪ್ರತಿಕ್ರಿಯೆಗಳನ್ನು ಪಡೆದಿದೆ. ಈ ಪ್ರತಿಕ್ರಿಯೆ ಆಧರಿಸಿ ಕಂಪನಿ 4 ತಿಂಗಳಲ್ಲಿ 7 ಅಪ್‍ಡೇಟ್ಸ್ ಗಳೊಂದಿಗೆ ಅಭಿವೃದ್ಧಿಯುತ ಆವೃತ್ತಿ ಬಿಡುಗಡೆಗೊಳಿಸಿದೆ. ವರ್ಡ್ ನ ಇ ಮೇಲ್ ಸೇರ್ಪಡೆ, ಔಟ್ ಲುಕ್ ನಲ್ಲಿ ಹೊಸ ಸಮಯ, ಎಕ್ಸಲ್ ಗೆ ಹೊರಗಡೆ ಡಾಟಾ ಸಂಪರ್ಕ ಇತ್ಯಾದಿಗಳು ಗ್ರಾಹಕ ಪ್ರತಿಕ್ರಿಯೆಯಿಂದ ಅಭಿವೃದ್ಧಿಗೊಂಡವು.

ಚಂದಾದಾರಿಕೆ ಹೊಂದಿರಬೇಕು

ಚಂದಾದಾರಿಕೆ ಹೊಂದಿರಬೇಕು

ಮೈಕ್ರೊಸಾಫ್ಟ್, ತನ್ನ ಆಫೀಸ್ 365ನ್ನು ಕನಿಷ್ಠ ತ್ರೈಮಾಸಿಕಕ್ಕೊಮ್ಮೆ ಹೊಸ ಆಯ್ಕೆಗಳೊಂದಿಗೆ ಅಪ್‍ಡೇಟ್ ಮಾಡಲು ಆಲೋಚಿಸಿದೆ. ಆಫೀಸ್ 365 ಚಂದಾದಾರರು ಆಫೀಸ್ ಫಾರ್ ಮ್ಯಾಕ್ಸ್ ನ ಹೊಸ ಆವೃತಿಯನ್ನು ಇಂದಿನಿಂದಲೇ ಪಡೆಯಬಹುದು. ಅದಕ್ಕೆ ಅರ್ಹ ಮ್ಯಾಕ್, ವಿಂಡೋಸ್, ಐಒಎಸ್ ಮತ್ತು ಆಂಡ್ರಾಯ್ಡ್ ನಲ್ಲಿ ಬಳಕೆಗೆ ಅರ್ಹ ಆಫೀಸ್ ಚಂದಾದಾರಿಕೆ ಹೊಂದಿರಬೇಕು (ಆಫೀಸ್ 365 ಹೋಂ, ಪಸರ್ನಲ್, ಬಿಸಿನೆಸ್, ಇ3 ಅಥವಾ ಪ್ರೊಪ್ಲಸ್).

English summary
Microsoft Office 2016 for Mac is now available in 139 countries and 16 languages. Office 2016 versions of Word, Excel, PowerPoint, and Outlook. Office 2016 for Mac requires Mac OS X 10.10 or later.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X