• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಕ್ರೋಸಾಫ್ಟ್ ನಿಂದ 'ತರಬೇತುದಾರರಿಗೆ ತರಬೇತಿ’ ಕಾರ್ಯಕ್ರಮ

|
Google Oneindia Kannada News

ಬೆಂಗಳೂರು, ಆಗಸ್ಟ್ 24, 2020: ಭಾರತದ ಶೈಕ್ಷಣಿಕ ಸಮುದಾಯದಲ್ಲಿ ಕ್ವಾಂಟಮ್ ಕಂಪ್ಯೂಟಿಂಗ್ ಕೌಶಲ್ಯಗಳು ಮತ್ತು ಸಾಮರ್ಥ್ಯಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮೈಕ್ರೋಸಾಫ್ಟ್ ಹೊಸ ಕಾರ್ಯಕ್ರಮವನ್ನು ರೂಪಿಸುತ್ತಿದೆ. ಈ ಉಪಕ್ರಮದ ಭಾಗವಾಗಿ ಮೈಕ್ರೋಸಾಫ್ಟ್ 'ಗೆರೇಜ್ ತರಬೇತುದಾರರಿಗೆ ತರಬೇತಿ' ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

   ದುಬೈನ ಕೋಣೆಗಳಲ್ಲಿ ಬಂಧಿಯಾದ RCB ಆಟಗಾರರು | Oneindia Kannada

   ಜೈಪುರದ ಮಾಳವೀಯ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ(ಎಂಎನ್ಐಟಿ)ಯಲ್ಲಿನ ಎಲೆಕ್ಟ್ರಾನಿಕ್ಸ್ ಮತ್ತು ಐಸಿಟಿ ಅಕಾಡೆಮಿಗಳು ಹಾಗೂ ಪಾಟ್ನಾದ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.

   ಶೇರ್‌ಚಾಟ್‌ನಲ್ಲಿ ಹೂಡಿಕೆಗೆ ಮುಂದಾದ ಮೈಕ್ರೋಸಾಫ್ಟ್‌ಶೇರ್‌ಚಾಟ್‌ನಲ್ಲಿ ಹೂಡಿಕೆಗೆ ಮುಂದಾದ ಮೈಕ್ರೋಸಾಫ್ಟ್‌

   ಐಐಟಿ ಕಾನ್ಪುರ, ಐಐಟಿ ಗುವಾಹತಿ, ಐಐಟಿ ರೂರ್ಕಿ, ಎಂಎನ್ಐಟಿ ಜೈಪುರ, ಎನ್ಐಟಿ ಪಾಟ್ನಾ, ಐಐಐಟಿ-ಡಿ ಜಬಲ್ಪುರ ಮತ್ತು ಎನ್ಐಟಿ ವಾರಂಗಲ್ ನಂತಹ ಇ&ಐಸಿಟಿ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ 900 ಕ್ಕೂ ಹೆಚ್ಚು ಬೋಧಕ ಸಿಬ್ಬಂದಿಗೆ ಈ ಕಾರ್ಯಕ್ರಮದಲ್ಲಿ ಅವರ ಭವಿಷ್ಯದ ಕ್ವಾಂಟಮ್ ಗೆ ಸಂಬಂಧಿಸಿದಂತೆ ಅಗತ್ಯವಿರುವ ಕೌಶಲ್ಯಗಳ ಬಗ್ಗೆ ತರಬೇತಿ ನೀಡಲಾಗುತ್ತದೆ.

   ಕ್ವಾಂಟಮ್ ಕಂಪ್ಯೂಟಿಂಗ್ ಮಾಹಿತಿಗಳನ್ನು ಪ್ರಕ್ರಿಯೆಗೊಳಿಸುವ ನಿಟ್ಟಿನಲ್ಲಿ ಕ್ವಾಂಟಂ ಭೌತಶಾಸ್ತ್ರದ ಗುಣಲಕ್ಷಣಗಳನ್ನು ಅನ್ವಯಿಸುತ್ತದೆ. ಆರೋಗ್ಯ ರಕ್ಷಣೆ, ಇಂಧನ, ಪರಿಸರ ವ್ಯವಸ್ಥೆಗಳು, ಸ್ಮಾರ್ಟ್ ಮಟೀರಿಯಲ್ ಗಳು ಮತ್ತು ಇತ್ಯಾದಿಗಳ ಕ್ಷೇತ್ರಗಳಲ್ಲಿ ಕ್ವಾಂಟಮ್ ಕಂಪ್ಯೂಟರ್ ಗಳು ಹೊಸ ಹೊಸ ಆವಿಷ್ಕಾರಗಳಿಗೆ ಅನುವು ಮಾಡಿಕೊಡುತ್ತವೆ. ಮೈಕ್ರೋಸಾಫ್ಟ್ ಇಂತಹ ಕ್ವಾಂಟಮ್ ಭವಿಷ್ಯಗಳನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯಗಳನ್ನು ನಿರ್ಮಾಣ ಮಾಡುತ್ತಿದೆ.

   ಅಂದರೆ, ಅಝ್ಯೂರ್ ಕ್ವಾಂಟಮ್ ನೊಂದಿಗೆ ಕ್ಲೌಡ್ ನಂತಹ ಭವಿಷ್ಯವನ್ನು ರೂಪಿಸಲಿದೆ. ಅಝ್ಯೂರ್ ಕ್ವಾಂಟಮ್ ಒಂದು ಕ್ಲೌಡ್ ಇಕೋಸಿಸ್ಟಂ ಆಗಿದ್ದು, ಮೈಕ್ರೋಸಾಫ್ಟ್ ಮತ್ತು ಅದರ ಪಾಲುದಾರರಿಂದ ವೈವಿಧ್ಯಮಯ ಕ್ವಾಂಟಮ್ ಸಾಫ್ಟ್ ವೇರ್, ಹಾರ್ಡ್ ವೇರ್ ಮತ್ತು ಸಲ್ಯೂಶನ್ ಗಳನ್ನು ಪಡೆದುಕೊಳ್ಳಲು ಡೆವಲಪರ್ ಗಳಿಗೆ ನೆರವಾಗಲಿದೆ. ಇದು ಬಿಲ್ಟ್ ಆನ್ ಅಝ್ಯೂರ್ ಆಗಿದ್ದು, ವಿಶ್ವಾಸಾರ್ಹತೆ, ಸ್ಕೇಲೇಬಲ್ ಮತ್ತು ಸುರಕ್ಷಿತವಾಗಿ ಪ್ಲಾಟ್ ಫಾರ್ಮ್ ಆಗಿದೆ.

   ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಐಇಇಇ ಕ್ವಾಂಟಮ್ ಎಸ್ಐಜಿಯ ಅಧ್ಯಕ್ಷೆ ಮತ್ತು ಮೈಕ್ರೋಸಾಫ್ಟ್ ಗೆರೇಜ್ ಇಂಡಿಯಾದ ನಿರ್ದೇಶಕಿ ರೀನಾ ದಯಾಳ್ ಅವರು, ಜಗತ್ತು ಇಂದು ಎದುರಿಸುತ್ತಿರುವ ಹಲವಾರು ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ವಾಂಟಮ್ ಕಂಪ್ಯೂಟಿಂಗ್ ಸಹಕಾರಿಯಾಗುತ್ತದೆ. ಈ ಕಾರ್ಯಕ್ರಮದ ಮೂಲಕ ನಾವು ಭಾರತದಲ್ಲಿನ ಶಿಕ್ಷಣ ಕ್ಷೇತ್ರವನ್ನು ಸಮಗ್ರ ಕ್ವಾಂಟಮ್ ಕಲಿಕೆಗೆ ಅಗತ್ಯವಿರುವ ಜ್ಞಾನಾರ್ಜನೆ ಮಾಡುವ ಸಜ್ಜುಗೊಳಿಸುವ ಉದ್ದೇಶವನ್ನು ಹೊಂದಿದ್ದೇವೆ. ಈ ಮೂಲಕ ಬೋಧಕ ಸಿಬ್ಬಂದಿ ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಕ್ವಾಂಟಮ್ ಕಲಿಕಾ ಕೌಶಲ್ಯಗಳನ್ನು ಹೆಚ್ಚಿಸಬಹುದಾಗಿದೆ ಮತ್ತು ದೇಶದ ಪ್ರಜ್ವಲ ಮನಸುಗಳಲ್ಲಿ ಈ ಕೌಶಲ್ಯಗಳನ್ನು ಕರಗತ ಮಾಡಿಸಲು ನೆರವಾಗಲಿದೆ'' ಎಂದು ತಿಳಿಸಿದರು.

   ಈ ತರಬೇತಿ ಕಾರ್ಯಕ್ರಮ ಆಗಸ್ಟ್ 24 ರಂದು ಆರಂಭವಾಗಿದ್ದು, ಆಗಸ್ಟ್ 29 ರವರೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮೈಕ್ರೋಸಾಫ್ಟ್ ಕ್ಯ# ಮತ್ತು ಕ್ವಾಂಟಮ್ ಡೆವಲಪ್ ಮೆಂಟ್ ಕಿಟ್ ಬಳಸಿಕೊಂಡು ಪ್ರಾಯೋಗಿಕ ಕೋಡಿಂಗ್ ತರಬೇತಿಯನ್ನೂ ನೀಡಲಾಗುತ್ತದೆ.

   English summary
   New Microsoft program to help develop the quantum computing workforce of the future in India. 900 Faculty from top Indian institutes to be trained.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X