ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಕ್ರೋಸಾಫ್ಟ್ ನಿಂದ ಕಮರ್ಷಿಯಲ್ ಕ್ಲೌಡ್ ಸೇವೆ, ಏನಿದರ ಲಾಭ?

By Mahesh
|
Google Oneindia Kannada News

ಬೆಂಗಳೂರು, ಸೆ.30: ಮೈಕ್ರೋಸಾಫ್ಟ್ ಭಾರತದಲ್ಲಿ ಸ್ಥಳೀಯ ಡಾಟಾ ಸೆಂಟರ್ ಪ್ರದೇಶಗಳ ಮೂಲಕ ಮೈಕ್ರೋಸಾಫ್ಟ್ ಎಝ್ಯೂರ್ (Azure) ಸೇವೆಯನ್ನು ಒದಗಿಸುವ ಬಗ್ಗೆ ಘೋಷಿಸಿದೆ. ಮಧ್ಯ ಭಾರತದಲ್ಲಿ ಪುಣೆ, ದಕ್ಷಿಣ ಭಾರತದಲ್ಲಿ ಚೆನ್ನೈ ಮತ್ತು ಪಶ್ಚಿಮ ಭಾರತದಲ್ಲಿ ಮುಂಬೈನಲ್ಲಿ ಮೂರು ಹೊಸ ವಲಯಗಳನ್ನು ತೆರಯಲಾಗಿದೆ.

ಕಮರ್ಷಿಯಲ್ ಕ್ಲೌಡ್ ಸೇವೆಯಿಂದ ಸ್ಥಳೀಯವಾಗಿ ಲಭ್ಯವಿರುವ ವ್ಯಾಪಕ ಕಂಪ್ಯೂಟಿಂಗ್ ಶಕ್ತಿಯನ್ನು ಸರ್ಕಾರಗಳು, ದೊಡ್ಡ ಉದ್ದಿಮೆಗಳು, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು(ಎಸ್ ಎಂಬಿ) ಮತ್ತು ನಾಗರಿಕರು ಬಳಸಿಕೊಳ್ಳಬಹುದಾಗಿದೆ. ಈ ಮೂಲಕ ಭಾರತದ ಎಲ್ಲರನ್ನೊಳಗೊಂಡ ಅಭಿವೃದ್ಧಿಗೆ ಒತ್ತು ನೀಡಬಹುದು, ಸಂಶೋಧನೆ ಮತ್ತು ಡಿಜಿಟಲ್ ಪರಿವರ್ತನೆಯ ವೇಗ ವರ್ಧಿಸಬಹುದು. [ವಿಂಡೋಸ್ 10 ಉಚಿತ ಅಪ್ಗ್ರೇಡ್, ಏನಿದರ ವಿಶೇಷ?]

ಮೈಕ್ರೋಸಾಫ್ಟ್ ಎಝ್ಯೂರ್ ಸೇವೆಯ ಜೊತೆಗೆ, ಅಕ್ಟೋಬರ್ 2015ರಲ್ಲಿ ಆಫೀಸ್ 365 ಸೇವೆಗಳು ಲಭ್ಯವಾಗಲಿದೆ. 2016ರ ಮೊದಲಾರ್ಧದಲ್ಲಿ ಡೈನಾಮಿಕ್ಸ್ ಸಿಆರ್ ಎಂ ಆನ್ ಲೈನ್ ಸೇವೆಯೂ ದೊರೆಯಲಿದೆ.[ಆಫೀಸ್ 2016 ವೈಶಿಷ್ಟ್ಯಗಳು]

ಭಾರತದ ಲಕ್ಷಾಂತರ ಮಂದಿ ಈಗಾಗಲೇ ಮೈಕ್ರೋಸಾಫ್ಟ್ ಕ್ಲೌಡ್ ಅನ್ನು ಬಳಸುತ್ತಿದ್ದು, ಕಳೆದ ಎರಡು ವರ್ಷಗಳಲ್ಲಿ ಕ್ಲೌಡ್ ಉದ್ಯಮವು ವರ್ಷದಿಂದ ವರ್ಷಕ್ಕೆ ಶೇಕಡಾ 100ಕ್ಕಿಂತಲೂ ಹೆಚ್ಚು ಬೆಳೆಯುತ್ತಿದೆ. [ಮೋದಿ ಕೈಕುಲುಕಿ ಕೈ ಒರೆಸಿಕೊಂಡ ಮೈಕ್ರೋಸಾಫ್ಟ್ ಸಿಇಒ!]

ಈಗ ಸ್ಥಳೀಯ ಕ್ಲೌಡ್ ಸೇವೆಯಿಂದಾಗಿ, ಬಿಎಫ್‍ಎಸ್‍ಐ, ಸರ್ಕಾರಿ ಇಲಾಖೆಗಳು ಮತ್ತು ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಂತಹ ನಿಯಂತ್ರಿತ ಕೈಗಾರಿಕೆಗಳು ಸಾರ್ವಜನಿಕ ಕ್ಲೌಡ್ ಸೇವೆಗಳ ಪ್ರಯೋಜನವನ್ನೂ ಪಡೆಯಬಹುದು ಮತ್ತು ಸ್ಥಳೀಯ ಡಾಟಾ ರೆಸಿಡೆನ್ಸಿಯ ಅನುಕೂಲತೆಯನ್ನೂ ಬಳಸಿಕೊಳ್ಳಬಹುದು.

ಬೃಹತ್ ಪ್ರಮಾಣದ ಡಾಟಾವನ್ನು ಸಂಗ್ರಹಿಸಿಕೊಳ್ಳುವ, ಉದಾಹರಣೆಗೆ ಮಾಧ್ಯಮ ಕಂಪನಿಗಳು, ಡಾಟಾ ರೆಪ್ಲಿಕೇಷನ್ ನ ಪ್ರಯೋಜನ ಪಡೆಯಬಹುದು. ಭಾರತದೊಳಗೇ ಹಲವು ಪ್ರದೇಶಗಳಲ್ಲಿ ಬ್ಯಾಕ್ ಅಪ್ ಮತ್ತು ರಿಕವರಿ, ಕಡಿಮೆಗೊಂಡ ನೆಟ್‍ವರ್ಕ್ ಅಂತರ, ಕಡಿಮೆ ಸುಪ್ತತೆ ಮತ್ತು ಕ್ಲೌಡ್ ಗೆ ಖಾಸಗಿ ಸಂಪರ್ಕ ಪಡೆಯುವ ಅವಕಾಶವೂ ಇದೆ.

ಸರ್ಕಾರಗಳು ಮತ್ತು ಐಟಿ ಮೂಲಸೌಕರ್ಯಗಳಲ್ಲಿ ಗಮನಾರ್ಹ ಹೂಡಿಕೆ ಮಾಡಿರುವ ಉದ್ದಿಮೆಗಳಿಗೆ ಮೈಕ್ರೋಸಾಫ್ಟ್ ನ ಸ್ಥಳೀಯ ಕ್ಲೌಡ್ ಸೇವೆ ಸೂಕ್ತವಾಗಿ ಹೊಂದಾಣಿಕೆಯಾಗುತ್ತದೆ.

ಡಿಜಿಟಲ್ ಲಾಕರ್ ಮತ್ತು ಡಿಜಿಟಲ್ ಐಡೆಂಟಿಟಿ

ಡಿಜಿಟಲ್ ಲಾಕರ್ ಮತ್ತು ಡಿಜಿಟಲ್ ಐಡೆಂಟಿಟಿ

ಕಂಪ್ಯೂಟಿಂಗ್ ನ ಹೊಸ ಮತ್ತು ಪರಿವರ್ತನೀಯ ನೋಟಗಳನ್ನೂ ಇಲ್ಲಿ ಕಾಣಬಹುದು. ಸ್ಥಳೀಯ ಡಾಟಾ ರೆಸಿಡೆನ್ಸಿ ಸೇವೆ ಒದಗಿಸುವುದರಿಂದ ಡಿಜಿಟಲ್ ಲಾಕರ್ ಗಳು ಮತ್ತು ಡಿಜಿಟಲ್ ಐಡೆಂಟಿಟಿಯಂಥ ಕಾರ್ಯಕ್ರಮಗಳೂ ಬೇಗನೇ ಆಗುತ್ತವೆ ಮತ್ತು ಉತ್ತಮ ನಾಗರಿಕ ಸೇವೆ ಒದಗಿಸಲು ಸಹಕಾರಿಯಾಗುತ್ತವೆ. ಕಳೆದ ವರ್ಷ ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನದೆಲ್ಲಾ ಅವರು ಕಮರ್ಷಿಯಲ್ ಕ್ಲೌಡ್ ಸೇವೆಯನ್ನು ಭಾರತದಲ್ಲಿ ಆರಂಭಿಸುವುದಾಗಿ ಘೋಷಿಸಿದ್ದರು. ಈಗ ಸಾಕಾರಗೊಂಡಿದೆ.

 60 ಲಕ್ಷ ವಿದ್ಯಾರ್ಥಿಗಳಿಗೆ ನೆರವಾಗಲಿದೆ

60 ಲಕ್ಷ ವಿದ್ಯಾರ್ಥಿಗಳಿಗೆ ನೆರವಾಗಲಿದೆ

ಒಂದೇ ಒಂದು ಮೈಕ್ರೋಸಾಫ್ಟ್ ಎಜು-ಕ್ಲೌಡ್ - ಸ್ಥಳೀಯ ಮೈಕ್ರೋಸಾಫ್ಟ್ ಕ್ಲೌಡ್ ಮೂಲಕ ಮುಂದಿನ 18 ತಿಂಗಳಲ್ಲಿ 1500 ಸಂಸ್ಥೆಗಳ ಸುಮಾರು 10 ಲಕ್ಷ ಶಿಕ್ಷಕರು ಮತ್ತು 60 ಲಕ್ಷ ವಿದ್ಯಾರ್ಥಿಗಳಿಗೆ ನೆರವಾಗಲಿದೆ.

ಸ್ಟಾರ್ಟ್ ಅಪ್ ಗಳು ಮತ್ತು ಎಸ್‍ಎಂಬಿಗಳು ಎಂಟರ್ ಪ್ರೈಸ್ ದರ್ಜೆಯ ತಂತ್ರಜ್ಞಾನಗಳ ಮೂಲಕ ಸ್ಪರ್ಧಾತ್ಮಕ ಪ್ರಯೋಜನವನ್ನು ಪಡೆಯಲಿದ್ದು, ಇದು ಅವರ ಸಂಶೋಧನೆ ಮತ್ತು ಉದ್ದಿಮೆಯನ್ನು ಜಾಗತಿಕ ಮಟ್ಟಕ್ಕೇರಿಸಲು ನೆರವಾಗಲಿದೆ ಶೈಕ್ಷಣಿಕ ವಲಯವು ಪರಿವರ್ತನೀಯ ಡಿಜಿಟಲ್ ಕಲಿಕೆಗೆ ಸಾಕ್ಷಿಯಾಗಲಿದೆ.

ಇಂಟೆಲಿಜೆಂಟ್ ಕ್ಲೌಡ್ ನಿರ್ಮಾಣ

ಇಂಟೆಲಿಜೆಂಟ್ ಕ್ಲೌಡ್ ನಿರ್ಮಾಣ

ವಿಶ್ವದ ಅತಿದೊಡ್ಡ ಕ್ಲೌಡ್ ಆಪರೇಟರ್ ಗಳಲ್ಲಿ ಒಂದಾದ ಮೈಕ್ರೋಸಾಫ್ಟ್, ಸ್ಥಿತಿಸ್ಥಾಪಕತ್ವವುಳ್ಳ ಕ್ಲೌಡ್ ಮೂಲಸೌಕರ್ಯ ಮತ್ತು ಕ್ಲೌಡ್ ಸೇವೆಗಳನ್ನು ನಿರ್ಮಿಸಲೆಂದು 15 ಶತಕೋಟಿ ಡಾಲರ್ ಅನ್ನು ಹೂಡಿಕೆ ಮಾಡಿದೆ.

ವಿಶ್ವದ ಸುಮಾರು 40 ದೇಶಗಳಲ್ಲಿ 100ಕ್ಕೂ ಹೆಚ್ಚು ಡಾಟಾ ಸೆಂಟರ್ ಗಳನ್ನು ಹೊಂದಿದೆ. ಅಲ್ಲದೆ, ಕಂಪನಿಯು ವಿಶ್ವದಾದ್ಯಂತದ ಗ್ರಾಹಕರಿಗೆ ಸೇವೆ ಸಲ್ಲಿಸಲೆಂದು ತನ್ನ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸುತ್ತಾ ಸಾಗುತ್ತಿದೆ.

ಯಾವುದೇ ಡಾಟಾಬೇಸ್ ಬಳಕೆ ಓಎಸ್ ಬಳಕೆ

ಯಾವುದೇ ಡಾಟಾಬೇಸ್ ಬಳಕೆ ಓಎಸ್ ಬಳಕೆ

ಯಾವುದೇ ಪಿಸಿ ಅಥವಾ ಮೊಬೈಲ್ ಸಾಧನದ ಮೂಲಕ ಅಂತಿಮ ಬಳಕೆದಾರರಿಗೆ ಸೇವೆಗಳನ್ನು ಒದಗಿಸುವ ಅವಕಾಶವನ್ನು ನೀಡುತ್ತದೆ.

ಅಝ್ಯೂರ್ ನಲ್ಲಿರುವ ಶೇ.20ಕ್ಕೂ ಹೆಚ್ಚು ವರ್ಚುವಲ್ ಯಂತ್ರಗಳು ಲಿನಾಕ್ಸ್ ಮತ್ತು ವಿಎಂ ಡಿಪೋ ಆಗಿದ್ದು, ಇವುಗಳಲ್ಲಿ 1,000ಕ್ಕೂ ಅಧಿಕ ಲಿನಾಕ್ಸ್ ಇಮೇಜ್ ಗಳನ್ನು ಹೊಂದಿವೆ. ಜಾವಾ, ನೋಡ್.ಜೆಎಸ್, ಪೈಥಾನ್, ರೂಬಿ ಮತ್ತು ಪಿಎಚ್‍ಪಿಗೆ ಫಸ್ಟ್ ಕ್ಲಾಸ್ ಸಪೋರ್ಟ್ ಅನ್ನೂ ಅಝ್ಯೂರ್ ಒದಗಿಸುತ್ತದೆ

ಮೈಕ್ರೋಸಾಫ್ಟ್ ಸ್ಥಳೀಯ ಕ್ಲೌಡ್ ಮೊಮೆಂಟಮ್

ಮೈಕ್ರೋಸಾಫ್ಟ್ ಸ್ಥಳೀಯ ಕ್ಲೌಡ್ ಮೊಮೆಂಟಮ್

ಸ್ಥಳೀಯ ಡಾಟಾಕೇಂದ್ರಗಳಿಂದ ಕ್ಲೌಡ್ ಸೇವೆಗಳನ್ನು ಒದಗಿಸುವ ಸಿದ್ಧತೆಯಲ್ಲಿ ಮೈಕ್ರೋಸಾಫ್ಟ್ ವಿಶೇಷ ಖಾಸಗಿ ಪ್ರೀವ್ಯೂ ಪೋಗ್ರಾಂ ಅನ್ನು ಸೃಷ್ಟಿಸಿದೆ. ಇದು ಆರಂಭಿಕ ಗ್ರಾಹಕರಿಗೆ ಹೊಸ ಸ್ಥಳೀಯ ಕ್ಲೌಡ್ ಸೇವೆಗಳ ಬಳಕೆಯ ಪ್ರೀವ್ಯೂ ನೋಡಲು ಸಾಧ್ಯವಾಗಿಸಿದೆ. ಬಿಎಫ್ ಎಸ್ ಐ, ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳು, ಐಎಸ್ ವಿಗಳು, ಇ-ವಾಣಿಜ್ಯ ಸಂಸ್ಥೆಗಳು ಮತ್ತು ಸ್ಟಾರ್ಟ್ ಅಪ್ ಗಳು ಇದರತ್ತ ಆಸಕ್ತಿ ವಹಿಸಿದ್ದು, ಸುಮಾರು 125 ಗ್ರಾಹಕರು ಪಾಲ್ಗೊಂಡಿದ್ದಾರೆ.

ಕ್ಲೌಡ್ ಸೇವೆಯ ಗ್ರಾಹಕರ ಪಟ್ಟಿ

ಕ್ಲೌಡ್ ಸೇವೆಯ ಗ್ರಾಹಕರ ಪಟ್ಟಿ

ಮಹೀಂದ್ರಾ, ಆದಿತ್ಯ ಬಿರ್ಲಾ ಗ್ರೂಪ್, ಇಂಡಸ್ ಇಂಡ್ ಬ್ಯಾಂಕ್, ಕೋಟಕ್ ಬ್ಯಾಂಕ್, ಬಿಪಿಸಿಎಲ್, ಏಮ್ಸ್, ಫೋರ್ಟಿಸ್ ಹೆಲ್ತ್ ಕೇರ್, ನಾರಾಯಣ ಹೆಲ್ತ್ ಕೇರ್, ಅಪೊಲೋ ಹಾಸ್ಪಿಟಲ್ಸ್, ಹರ್ಯಾಣ ಸ್ಟೇಟ್ ಎಲೆಕ್ಟ್ರಾನಿಕ್ಸ್ ಡೆವಲಪ್ ಮೆಂಟ್ ಕಾಪೆರ್Çರೇಷನ್, ಎಂಐಡಿಸಿ, ಟಿಎನ್ ಇಪಿಡಿಎಸ್, ಯುಪಿ ಪವರ್ ಕಾರ್ಪೊರೇಷನ್, ವಿಪ್ರೋ, ಇನ್ಫೋಸಿಸ್, ರೆಡಿಫ್, ಬುಕ್ ಮೈ ಶೋ, ಸೋನಿ, ನ್ಯಾನೋಬಿ ಡಾಟಾ ಮತ್ತು ಅನಾಲಿಟಿಕ್ಸ್ ಇತ್ಯಾದಿ ಸಂಸ್ಥೆಗಳು

ಕ್ಲೌಡ್ ಸೇವೆಯ ಬಗ್ಗೆ ಒಂದು ಪ್ರಾತ್ಯಕ್ಷಿಕೆ

ಕ್ಲೌಡ್ ಸೇವೆಯ ಬಗ್ಗೆ ಒಂದು ಪ್ರಾತ್ಯಕ್ಷಿಕೆ ವಿಡಿಯೋ ಇಲ್ಲಿದೆ

English summary
Microsoft launched its local data centres in India, which will offer its Azure cloud services, much earlier than its deadline of December this year, a move that will help it build more confidence among the government, Indian companies and small and medium businesses in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X