ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋಕಿಯಾ ಹೆಸರು ಕೈಬಿಟ್ಟ ಮೈಕ್ರೋಸಾಫ್ಟ್

By Mahesh
|
Google Oneindia Kannada News

ಬೆಂಗಳೂರು, ಅ.23: ಮೈಕ್ರೋಸಾಫ್ಟ್ ಕಾರ್ಪ್ ಸಂಸ್ಥೆ ತನ್ನ ಲೂಮಿಯಾ ಸರಣಿ ಮೊಬೈಲ್ ಫೋನ್ ಗಳಿಂದ ನೋಕಿಯಾ ಹೆಸರನ್ನು ಕೈಬಿಡುತ್ತಿದೆ. ಅದರೆ, ನೋಕಿಯಾ ಉತ್ಪನ್ನಗಳ ಬಳಕೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿಕೊಂಡಿದೆ.

ಕಾಕತಾಳೀಯ ಎಂಬಂತೆ ಫಿನ್ ಲ್ಯಾಂಡ್ ನ ನೋಕಿಯಾ ಸಂಸ್ಥೆ ಗುರುವಾರ ತನ್ನ ಮೂರನೇ ತ್ರೈಮಾಸಿಕ ವರದಿ ಪ್ರಕಟಿಸಿದ್ದು, ಭರ್ಜರಿ ಲಾಭ ದಾಖಲಿಸಿದೆ. ಶೇ 13.5 ರಷ್ಟು ಲಾಭ ಗಳಿಸಿದೆ. [ನೋಕಿಯಾ ಬಂದ್, ತಿರುಗಿ ಬಿದ್ದ ಉದ್ಯೋಗಿಗಳು]

ಮೈಕ್ರೋಸಾಫ್ಟ್ ಸಂಸ್ಥೆಗೆ ತನ್ನ ಮೊಬೈಲ್ ತಂತ್ರಜ್ಞಾನವನ್ನು ನೋಕಿಯಾ ಈಗಾಗಲೇ ಮಾರಿಕೊಂಡಿದೆ. ಅದರೆ, ನಾವಿಗೇಷನ್, ನೆಟ್ವರ್ಕ್ ಘಟಕ ಇನ್ನಿತರ ಸ್ಮಾರ್ಟ್ ಫೋನ್ ಪೇಟೆಂಟ್ ಗಳನ್ನು ನೋಕಿಯಾ ತನ್ನಲ್ಲೇ ಉಳಿಸಿಕೊಂಡಿದೆ.

2013ರ ಏಪ್ರಿಲ್ ನಲ್ಲಿ 7.2 ಬಿಲಿಯನ್ ಡಾಲರ್ ಡೀಲ್ ಕುದುರಿಸಿ ನೋಕಿಯಾ ಸಂಸ್ಥೆ ಹ್ಯಾಂಡ್ ಸೆಟ್ ವ್ಯವಹಾರವನ್ನು ಮೈಕ್ರೋಸಾಫ್ಟ್ ತನ್ನದಾಗಿಸಿಕೊಂಡಿತ್ತು. ಅದರೆ, ಹೊಸ ಸರಣಿಯ ಫೋನ್ ಗಳಿಗೂ ನೋಕಿಯಾ ಹೆಸರನ್ನು ಬಳಸಿಕೊಳ್ಳುತ್ತಿತ್ತು. ಅದರೆ, ಅ.23ರ ಮೈಕ್ರೋಸಾಫ್ಟ್ ಫೇಸ್ ಬುಕ್ ಪ್ರಕಟಣೆಯಂತೆ ನೋಕಿಯಾ ಹೆಸರನ್ನು ಕೈಬಿಡಲಾಗಿದೆ. [ಮೈಕ್ರೋಸಾಫ್ಟ್ ನಿಂದ 18 ಸಾವಿರ ಉದ್ಯೋಗ ಕಡಿತ]

 Microsoft drops Nokia name, Nokia Q3 results profit growth

ಹೊಸ ಸಿಇಒ ಸತ್ಯ ನಡೆಲ್ಲಾ ಅವರು ಈಗಾಗಲೇ ಫೋನ್ ತಯಾರಿಕೆಯನ್ನು ಕಡಿಮೆಗೊಳಿಸುವಂತೆ ಸೂಚಿಸಿದ್ದಾರೆ. ಜುಲೈನಲ್ಲಿ ಪ್ರಕಟಿಸಿದಂತೆ ಸುಮಾರು 18,000 ಉದ್ಯೋಗಿಗಳನ್ನು ಮೈಕ್ರೋಸಾಫ್ಟ್ ನಿಂದ ಹೊರಕ್ಕೆ ಕಳಿಸಲಾಗಿದೆ. ಇವರಲ್ಲಿ 12,500 ಉದ್ಯೋಗಿಗಳು ನೋಕಿಯಾ ಘಟಕಕ್ಕೆ ಸೇರಿದವರಾಗಿದ್ದಾರೆ.

ವರ್ಷಾಂತ್ಯಕ್ಕೆ ಮಾರುಕಟ್ಟೆಗೆ ಬರಲಿರುವ ಲೂಮಿಯಾ 730,830 ಹಾಗೂ 930 ಮೊಬೈಲ್ ಫೋನ್ ಗಳು ನೋಕಿಯಾ ಹೆಸರಿನ ಬದಲು ಮೈಕ್ರೋಸಾಫ್ಟ್ ಲೂಮಿಯಾ ಎಂದೇ ಕರೆಯಲ್ಪಡಲಿದೆ. [ಮೈಕ್ರೋಸಾಫ್ಟ್ ಗರ್ಭ ಸೇರಿದ ನೋಕಿಯಾ ಬಗ್ಗೆ]

ನೋಕಿಯಾ ಅಶಾ ಸರಣಿ, ಎಕ್ಸ್ ಸರಣಿಯನ್ನು ಅಂತ್ಯಗಾಣಿಸಲಾಗಿದೆ. ಜಾಗತಿಕವಾಗಿ ವಿಂಡೋಸ್ ಆಧಾರಿತ ಮೊಬೈಲ್ ಫೋನ್ ಜನಪ್ರಿಯತೆ ಹೆಚ್ಚಿಸಲು ಮೈಕ್ರೋಸಾಫ್ಟ್ ಯತ್ನಿಸುತ್ತಿದೆ. ಗೂಗಲ್ ನ ಆಂಡ್ರಾಯ್ಡ್ ಹಾಗೂ ಆಪಲ್ ಐಓಸ್ ನಂತರದ ಸ್ಥಾನದಲ್ಲಿ ವಿಂಡೋಸ್ ಫೋನ್ ಗಳು ಮಾರುಕಟ್ಟೆ ಪಾಲು ಹೊಂದಿವೆ.

English summary
Finland's Nokia on Thursday reported stronger-than-expected profitability at its core networks business in the third quarter. Microsoft Corp looks set to ditch the Nokia name from its Lumia range of smartphones just months after buying the Finnish company's handset business.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X