ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಯಾಮ್ ಸಂಗ್ ದಬ್ಬಿ ಅಗ್ರಪಟ್ಟಕ್ಕೇರಿದ ಮೈಕ್ರೋಮ್ಯಾಕ್ಸ್

By Mahesh
|
Google Oneindia Kannada News

ನವದೆಹಲಿ, ಫೆ.4: ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಎಫೆಕ್ಟಿಗೋ ಏನೋ ದೇಶಿ ನಿರ್ಮಾಣ ಮೊಬೈಲ್ ಹ್ಯಾಂಡ್ ಸೆಟ್ ಸಂಸ್ಥೆ ಮೈಕ್ರೋಮ್ಯಾಕ್ಸ್ ಈಗ ದೇಶದ ನಂ.1 ಸ್ಮಾಟ್ ಫೋನ್ ಸಂಸ್ಥೆಯಾಗಿ ಹೊರ ಹೊಮ್ಮಿದೆ. ಕೊರಿಯಾ ಮೂಲದ ಸ್ಯಾಮ್ ಸಂಗ್ ಎರಡನೇ ಸ್ಥಾನಕ್ಕೆ ಕುಸಿದಿದೆ.

ಫೆ.4 ಅನ್ವಯವಾಗುವಂತೆ ಭಾರತೀಯ ಮೊಬೈಲ್ ಫೋನ್ ಮಾರುಕಟ್ಟೆಯಲ್ಲಿ ಮೈಕ್ರೋಮ್ಯಾಕ್ಸ್ ಅತಿ ಹೆಚ್ಚು ಬೇಡಿಕೆಯ ಸಂಸ್ಥೆಯಾಗಿದ್ದು, ಸ್ಯಾಮ್ ಸಂಗ್ ಎರಡನೇ ಸ್ಥಾನದಲ್ಲಿದೆ ಎಂದು ಸಂಶೋಧನಾ ಸಂಸ್ಥೆ ಕಾನಾಲಿಸಿಸ್ ಹೇಳಿದೆ.

ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದ ಅಂತ್ಯಕ್ಕೆ ಗುರ್ ಗಾಂವ್ ಮೂಲದ ಮೈಕ್ರೋಮ್ಯಾಕ್ಸ್ ಸಂಸ್ಥೆ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಶೇ 22ರಷ್ಟು ಪಾಲು ಹೊಂದಿದೆ. ಈ ಮೂಲಕ ವಿಶ್ವದ ಅಗ್ರಗಣ್ಯ ಸಂಸ್ಥೆಗಳಲ್ಲಿ ಒಂದೆನಿಸಿರುವ ಸ್ಯಾಮ್ ಸಂಗ್ ಶೇ 20ರಷ್ಟು ಪಾಲು ಹೊಂದಿದ್ದು ಎರಡನೇ ಸ್ಥಾನದಲ್ಲಿದೆ.

ಅದರೆ, ಈ ಸುದ್ದಿಯನ್ನು ಅಲ್ಲಗೆಳೆದಿರುವ ಸ್ಯಾಮ್ ಸಂಗ್ ಸಂಸ್ಥೆ ಉಪಾಧ್ಯಕ್ಷ(ಮಾರ್ಕೆಟಿಂಗ್) ಆಸೀಮ್ ವಾರ್ಸಿ, 2014ರಲ್ಲಿ ಸ್ಯಾಮ್ ಸಂಗ್ ಸಂಸ್ಥೆಯೇ ನಂ.1 ಸ್ಥಾನದಲ್ಲಿತ್ತು. ಶೇ 35.7ರಷ್ಟು ಮಾರುಕಟ್ಟೆ ಪಾಲು ಹೊಂದಿತ್ತು ಎಂದಿದ್ದಾರೆ.

'Micromax ousts Samsung as India's largest smartphone firm'

ನಾಲ್ಕನೇ ತ್ರೈಮಾಸಿಕದಲ್ಲಿ ಕ್ರಮವಾಗಿ ಮೈಕ್ರೋಮ್ಯಾಕ್ಸ್, ಸ್ಯಾಮ್ ಸಂಗ್, ಕಾರ್ಬನ್ ಹಾಗೂ ಲಾವಾ ಮೊಬೈಲ್ ಗಳು ಹೆಚ್ಚಿನ ಬೇಡಿಕೆ ಹುಟ್ಟಿಸಿತ್ತು. ದೇಶಿ ಮೊಬೈಲ್ ಫೋನ್ ಗಳ ಮಾರುಕಟ್ಟೆ ಶೇ 90ರಷ್ಟು ಹೆಚ್ಚಾಗಿದೆ.

ಕಡಿಮೆ ಮೊತ್ತ ಮೊಬೈಲ್ ಗಳು 6 ಸಾವಿರ(ಯುಎಸ್ ಡಿ 100ರೊಳಗೆ) ಶೇ 23ರಷ್ಟು ಹಾಗೂ 6 ರಿಂದ 12 ಸಾವಿರ ಮುಖಬೆಲೆಯ ಮೊಬೈಲ್ ಗಳು ಶೇ 41ರಷ್ಟು ಮಾರಾಟವಾಗಿದೆ.

ಜಾಗತಿಕವಾಗಿ ಕೂಡಾ ಸ್ಯಾಮ್ ಸಂಗ್ ಸಾಕಷ್ಟು ಪೈಪೋಟಿ ಎದುರಿಸುತ್ತಿದ್ದು 2013ರಲ್ಲಿ ಶೇ 31.3ರಷ್ಟಿದ್ದ ಮಾರುಕಟ್ಟೆ ಪಾಲು, 2014ರಲ್ಲಿ ಶೇ 24.5ಕ್ಕೆ ಕುಸಿದಿದೆ. ಶಿಯೋಮಿ ರೆಡ್ಮಿ, ಆಪಲ್, ಮೋಟರೋಲಾ ಸಂಸ್ಥೆಗಳಿಂದ ಸ್ಯಾಮ್ ಸಂಗ್ ಹೆಚ್ಚಿನ ಸ್ಪರ್ಧೆ ಎದುರಿಸುತ್ತಿದೆ.(ಪಿಟಿಐ)

English summary
Homegrown handset maker, Micromax has become India's biggest smartphone vendor, replacing Korean electronics giant Samsung, research firm Canalys said on Feb 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X