ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಮೊದಲ ಪಾರದರ್ಶಕ ಟಿವಿ: ಬೆಲೆ ಕೇಳಿದ್ರೆ ದಂಗಾಗ್ತೀರಾ..!

|
Google Oneindia Kannada News

ನವದೆಹಲಿ, ಆಗಸ್ಟ್‌ 12: ಚೀನಾದ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ತಯಾರಕ ಎಕ್ಸೋಮಿ ವಿಶ್ವದ ಮೊದಲ ಪಾರದರ್ಶಕ ಟಿವಿಯನ್ನು ತಯಾರಿಸಿದ್ದು, ಸದ್ಯದಲ್ಲೇ ಮಾರುಕಟ್ಟೆಗೆ ಬಿಡುವ ಯೋಚನೆಯಲ್ಲಿದೆ.

ಹೊಸ ರೀತಿಯಲ್ಲಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಎಕ್ಸೋಮಿ ಊಹಿಸಲು ಕಷ್ಟಸಾಧ್ಯವಾದ ಟಿವಿಯನ್ನು ಉತ್ಪಾದನೆ ಮಾಡುತ್ತಿದೆ. ಹಾಗಿದ್ರೆ ಈ ಟಿವಿ ಹೇಗಿರುತ್ತೆ ಎಂಬುದು ಸಹ ಕುತೂಹಲ ಮೂಡಿಸಿದೆ. ಇದು ಬಹುತೇಕ ಕನ್ನಡಿಯ ರೀತಿಯಲ್ಲಿ ಡಿಸ್‌ಪ್ಲೇ ಅನ್ನು ಹೊಂದಿರಲಿದೆ. ಎಂಐ ಟಿವಿ ಲಕ್ಸೂರಿಯಸ್ ಟ್ರಾನ್ಸ್‌ಪರೆಂಟ್ ಎಡಿಶನ್ ಇದಾಗಿದ್ದು, ಸೆಲ್ಫ್ ಲುಮೀನಿಯಸ್ ಡಿಸ್‌ಪ್ಲೇಯನ್ನು ಹೊಂದಿದೆ.

ಸ್ಯಾಮ್‌ಸಂಗ್ ಸ್ವಾತಂತ್ರ್ಯ ದಿನಾಚರಣೆ ಆಫರ್: ಟಿವಿ ಖರೀದಿಸಿ ಉಚಿತವಾಗಿ ಮೊಬೈಲ್ ಪಡೆಯಿರಿ..!ಸ್ಯಾಮ್‌ಸಂಗ್ ಸ್ವಾತಂತ್ರ್ಯ ದಿನಾಚರಣೆ ಆಫರ್: ಟಿವಿ ಖರೀದಿಸಿ ಉಚಿತವಾಗಿ ಮೊಬೈಲ್ ಪಡೆಯಿರಿ..!

ಇನ್ನು ಈ ವಿಭಿನ್ನ ಟಿವಿಯ ಬೆಲೆಯನ್ನು ಕೇಳಿದ್ರೆ ಒಮ್ಮೆ ನೀವು ದಂಗಾಗೋದ್ರಲ್ಲಿ ಅನುಮಾನವಿಲ್ಲ. ಏಕೆಂದರೆ ಈ ಪಾರದರ್ಶಕ ಟಿವಿ ಬೆಲೆ ಚೀನಾದ ಕರೆನ್ಸಿ RMB 49,999 ಆಗಿದ್ದು, ಭಾರತದ ರೂಪಾಯಿಗಳಲ್ಲಿ ಬರೋಬ್ಬರಿ 5.38 ಲಕ್ಷ ರೂಪಾಯಿ.

 Mi TV LUX OLED Transparent Edition, The Worlds First Mass-Produced Transparent TV

ವಿಶ್ವದಲ್ಲೇ ಮೊದಲ ಸಾಮೂಹಿಕ ಉತ್ಪಾದಿತ ಪಾರದರ್ಶಕ ಟಿವಿ ತಯಾರಿಸುತ್ತಿರುವ ಎಕ್ಸೋಮಿ ಈ ಉತ್ಪನ್ನವನ್ನು ಯಾವಾಗ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ಪ್ರಕಟಿಸಿಲ್ಲ. ಆದರೆ ಈ ಟಿವಿ ಬಿಡುಗಡೆ ಬಳಿಕ ಟಿವಿ ಇತಿಹಾಸದಲ್ಲೇ ಮತ್ತೊಂದು ಮೈಲುಗಲ್ಲು ಸಾಧಿಸಲಿದೆ.

English summary
Chinese electronics company Xiaomi Has Introduced the world's first mass produced transparent tv
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X