ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಐ ಪವರ್ ಬ್ಯಾಂಕ್ 3i ಭಾರತದಲ್ಲಿ ಬಿಡುಗಡೆ: 20,000mAh ಬ್ಯಾಟರಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 22: ಶಿಯೋಮಿ ಇಂದು ಪವರ್ ಬ್ಯಾಂಕ್ 3ಐ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, 10,000mAh ಮತ್ತು 20,000mAh ಸಾಮರ್ಥ್ಯ ಹೊಂದಿರುವ ಮಿ ಪವರ್ ಬ್ಯಾಂಕ್ 3i ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಎರಡೂ ಪವರ್ ಬ್ಯಾಂಕ್ ರೂಪಾಂತರಗಳು ಯುಎಸ್‌ಬಿ ಟೈಪ್-ಸಿ ಮತ್ತು ಮೈಕ್ರೋ-ಯುಎಸ್‌ಬಿ ಪೋರ್ಟ್‌ಗಳ ಮೂಲಕ ಡ್ಯುಯಲ್ ಇನ್‌ಪುಟ್ ಅನ್ನು ಹೊಂದಿವೆ.

ಪವರ್ ಬ್ಯಾಂಕುಗಳು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ ಮತ್ತು ಸುಧಾರಿತ 12-ಲೇಯರ್ ಸರ್ಕ್ಯೂಟ್ ಪ್ರೊಟೆಕ್ಷನ್ ಜೊತೆಗೆ ಸ್ಮಾರ್ಟ್ ಪವರ್ ಮ್ಯಾನೇಜ್ಮೆಂಟ್ ವೈಶಿಷ್ಟ್ಯವನ್ನು ಹೊಂದಿವೆ. ಚೀನಾದ ಟೆಕ್ ದೈತ್ಯ ತನ್ನ ರೆಡ್‌ಮಿ ಪವರ್ ಬ್ಯಾಂಕ್‌ನ ಬೆಲೆಯನ್ನು 20,000 ಎಂಎಹೆಚ್ ಸಾಮರ್ಥ್ಯದೊಂದಿಗೆ ಕಡಿತಗೊಳಿಸಿದೆ. ಕಡಿಮೆ ಬೆಲೆಯ ಈ ಪವರ್‌ಬ್ಯಾಂಕ್ ಅಧಿಕ ಚಾರ್ಜ್ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ.

ಪೊಕೊ ಎಕ್ಸ್ 3 ಮೊಬೈಲ್‌ ಭಾರತದಲ್ಲಿ ಬಿಡುಗಡೆ: ಬೆಲೆ, ವೈಶಿಷ್ಟ್ಯತೆ ತಿಳಿದುಕೊಳ್ಳಿಪೊಕೊ ಎಕ್ಸ್ 3 ಮೊಬೈಲ್‌ ಭಾರತದಲ್ಲಿ ಬಿಡುಗಡೆ: ಬೆಲೆ, ವೈಶಿಷ್ಟ್ಯತೆ ತಿಳಿದುಕೊಳ್ಳಿ

ಈಗಾಗಲೇ ಅನೇಕ ಕಂಪನಿಗಳು ಪವರ್ ಬ್ಯಾಂಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಬಂದಿದೆ. ಇದೀಗ ಶಿಯೋಮಿ ಕಂಪನಿ ಮಿ 3ಐ ಹೆಸರಿನ ಎರಡು ಪವರ್‌ಬ್ಯಾಂಕ್ ಅನ್ನು ಪರಿಚಯಿಸಿದೆ.

Mi Power Bank 3i With Upto 20000mah Capacity

10 ಸಾವಿರ ಎಮ್‌ಎಎಚ್ ಸಾಮರ್ಥ್ಯದ ಪವರ್ ಬ್ಯಾಂಕ್ ಬೆಲೆ 899 ರೂ. ಆಗಿದೆ. 20 ಸಾವಿರ ಎಮ್‌ಎಎಚ್ ಸಾಮರ್ಥ್ಯದ ಪವರ್ ಬ್ಯಾಂಕ್ ಬೆಲೆ 1,499 ರೂಪಾಯಿಯಷ್ಟಿದೆ.

English summary
Mi Power Bank 3i with 10,000mAh and 20,000mAh capacities has been launched in India. Both the power bank variants feature dual input via USB Type-C and Micro-USB ports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X