ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರದ ಆದೇಶಕ್ಕೆ ಮಣಿದು ''ಕೊರೊನಾ'' ಉತ್ಪಾದನೆ ಬಂದ್

|
Google Oneindia Kannada News

ಮೆಕ್ಸಿಕೋ ನಗರ, ಏಪ್ರಿಲ್ 5: ವಿಶ್ವದೆಲ್ಲೆಡೆ ಕೊರೊನಾವೈರಸ್ ಭೀತಿ ಮುಂದುವರೆದಿದೆ. ಅನೇಕ ಕಡೆಗಳಲ್ಲಿ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಈ ನಡುವೆ ಮದ್ಯಪಾನಿಗಳಿಗೆ ಲಾಕ್ ಡೌನ್ ದಿನಗಳಲ್ಲಿ ಡ್ರೈ ಡೇ ಎದುರಿಸುವುದು ಭಾರಿ ಕಷ್ಟವಾಗುತ್ತಿದೆ. ಭಾರತದ ಅನೇಕ ಕಡೆಗಳಲ್ಲಿ ಮದ್ಯ ಪೂರೈಕೆ ಬಂದ್ ಆಗಿದ್ದು, ಮದ್ಯವ್ಯಸನಿಗಳು ಒತ್ತಡ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆದರೆ ಮೆಕ್ಸಿಕೋ ಮೂಲದ ಬಿಯರ್ ಸಂಸ್ಥೆಗೆ ಕೊರೊನಾವೈರಸ್ ಹೆಚ್ಚಾಗಿ ಬಾಧಿಸಿರಲಿಲ್ಲ. ಕೊರೊನಾ ಬೆಳಕಿಗೆ ಬಂದು ಒಂದು ತ್ರೈಮಾಸಿಕ ಕಳೆದರೂ ವ್ಯಾಪಾರದ ಮೇಲೆ ಅಷ್ಟು ಕರಿ ನೆರಳು ಬಿದ್ದಿರಲಿಲ್ಲ. ಈಗ ಕೊರೊನಾ ಕರಿನೆರಳು ''ಕೊರೊನಾ'' ಮೇಲೆ ಬಿದ್ದಿದೆ. ಸರ್ಕಾರದ ಅದೇಶಕ್ಕೆ ಮಣಿದು ಜನಪ್ರಿಯ ಬಿಯರ್ ಕೊರೊನಾ ಉತ್ಪಾದನೆಯನ್ನು ಗ್ರುಪೊ ಮೊಡೆಲೋ ಸಂಸ್ಥೆ ಬಂದ್ ಮಾಡಿದೆ.

Fact Check: ಕರ್ನಾಟಕದಲ್ಲಿ ಮದ್ಯದಂಗಡಿ ಓಪನ್‌ಗೆ ಆದೇಶ?Fact Check: ಕರ್ನಾಟಕದಲ್ಲಿ ಮದ್ಯದಂಗಡಿ ಓಪನ್‌ಗೆ ಆದೇಶ?

ಈ ಕುರಿತಂತೆ ಸಾಮಾಜಿಕ ಜಾಲ ತಾಣಗಳ ಮೂಲಕ ತಿಳಿಸಿರುವ ಗ್ರುಪೊ ಮೊಡೆಲೊ, ಕೊರೊನಾ ಉತ್ಪಾದನೆ, ಮಾರ್ಕೆಟಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮೆಕ್ಸಿಕೋ ಸರ್ಕಾರ ನೀಡಿರುವ ಆದೇಶವನ್ನು ಪಾಲಿಸುವುದು ನಮ್ಮ ಕರ್ತವ್ಯ, ಬಿಯರ್ ಅಗತ್ಯ ವಸ್ತುಗಳ ಉತ್ಪಾದನೆಯ ವ್ಯಾಪಾರದ ಪಟ್ಟಿಯಲ್ಲಿಲ್ಲ ಎಂದು ಸಂಸ್ಥೆಯ ಮಾಲೀಕ ಅನ್ ಹುಸರ್ ಬುಶ್ ಇನ್ಬೆವ್ ಪ್ರತಿಕ್ರಿಯಿಸಿದ್ದಾರೆ.

ಮೆಕ್ಸಿಕೋ ನಗರದಲ್ಲಿ ಲಾಕ್ ಡೌನ್

ಮೆಕ್ಸಿಕೋ ನಗರದಲ್ಲಿ ಲಾಕ್ ಡೌನ್

ಏಪ್ರಿಲ್ 5ರ ಈ ಸಮಯಕ್ಕೆ ಮೆಕ್ಸಿಕೋದಲ್ಲಿ ಒಟ್ಟು 1890 ಪ್ರಕರಣಗಳು ದಾಖಲಾಗಿದ್ದು, ಒಂದೇ ದಿನ 202 ಕೇಸ್ ಬಂದಿರುವುದು ಆತಂಕ ತಂದಿದೆ. ಇಲ್ಲಿ ತನಕ 79 ಮಂದಿ ಮೃತರಾಗಿದ್ದಾರೆ. ಹೀಗಾಗಿ ಏಪ್ರಿಲ್ 30 ರ ತನಕ ಅಗತ್ಯ ವಸ್ತುಗಳ ಪೂರೈಕೆ ಮಾರ್ಕೆಟ್, ಅಂಗಡಿ ಬಿಟ್ಟು ಮಿಕ್ಕೆಲ್ಲ ಸಾರ್ವಜನಿಕ ಹಾಗೂ ಖಾಸಗಿ ವಲಯ ಸಂಸ್ಥೆಗಳನ್ನು ಮೆಕ್ಸಿಕೋ ಸರ್ಕಾರ ಬಂದ್ ಮಾಡಿಸಿದೆ.

ಅಗತ್ಯ ವಸ್ತುಗಳ ಪಟ್ಟಿಗೆ ಸೇರುವಂತೆ ಮನವಿ

ಅಗತ್ಯ ವಸ್ತುಗಳ ಪಟ್ಟಿಗೆ ಸೇರುವಂತೆ ಮನವಿ

ಕೊರೊನಾ, ಮೊಡೆಲೋ, ಪೆಸಿಫಿಕೊ ಬಿಯರ್ ಗಳನ್ನು ಹೊಂದಿರುವ ಗ್ರುಪೊ ಮೊಡೆಲೋ ಸಂಸ್ಥೆ ಅಗತ್ಯ ಬಿದ್ದಾಗ ಬಿಯರ್ ಪೂರೈಸಲು ಸಿದ್ಧ ಎಂದು ಘೋಷಿಸಿಕೊಂಡಿದೆ. ಮೆಕ್ಸಿಕೋ ಸರ್ಕಾರವು ಬಿಯರ್ ಸೇವನೆಯನ್ನು ಅಗತ್ಯ ಸೇವಾ ಕ್ಷೇತ್ರದ ಪಟ್ಟಿಯಲ್ಲಿ ಸೇರಿಸುವಂತೆ ಕೋರಲಾಗಿದೆ. ಗ್ರುಪೋ ಮೆಡೆಲೋ ಸಂಸ್ಥೆ ಬಿಯರ್ ಗಳ ಆಮದು, ವಿತರಣೆ ಹೊಣೆಯನ್ನು ಕಾನ್ಸ್ ಟೆಲೇಷನ್ ಬ್ರಾಂಡ್ಸ್ ನೋಡಿಕೊಳ್ಳುತ್ತಿದ್ದು, ಯುಎಸ್ಎಗೆ ಹೆಚ್ಚಾಗಿ ಪೂರೈಸುತ್ತಿದೆ. ಸದ್ಯ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಬಹುದು ಎಂದು ಹೇಳಿದೆ.

ಕೊರೊನಾದಿಂದ ಕೊರೊನಾಕ್ಕೆ ನಷ್ಟವಾಗಿಲ್ಲ

ಕೊರೊನಾದಿಂದ ಕೊರೊನಾಕ್ಕೆ ನಷ್ಟವಾಗಿಲ್ಲ

ಅಮೆರಿಕದಲ್ಲಿ ಕೊರೊನಾ ಬಿಯರ್ ಮಾರಾಟ ಶೇ 8.9ರಷ್ಟು ಏರಿಕೆ ಕಂಡಿದೆ. ವರ್ಷದ ಆರಂಭದ ಮೊದಲ ಮೂರು ತಿಂಗಳ ಎಣಿಕೆಯಲ್ಲಿ ಮೊಡೆಲೋ ಹಾಗೂ ಕೊರೊನಾ ಬಿಯರ್ ಗಳು ಹೆಚ್ಚು ಬಿಕರಿಯಾಗಿವೆ. ಮಾರ್ಚ್ ತಿಂಗಳಿನಲ್ಲಿ ಕೊರೊನಾವೈರಸ್ ಭೀತಿ ಹೆಚ್ಚಾಗಿದ್ದಾಗಲೂ ಬಿಯರ್ ಮಾರಾಟ ಶೇ 24ರಷ್ಟು(ವರ್ಷದಿಂದ ವರ್ಷಕ್ಕೆ) ಹೆಚ್ಚಳ ಕಂಡಿದೆ.

ಅಮೆರಿಕದಲ್ಲಿ ಬಿಯರ್ ಬೇಡಿಕೆ ಹೆಚ್ಚಿದೆ

ಅಮೆರಿಕದಲ್ಲಿ ಬಿಯರ್ ಬೇಡಿಕೆ ಹೆಚ್ಚಿದೆ

ಅಮೆರಿಕದಲ್ಲಿ ಬಿಯರ್ ಹಾಗೂ ಇತರೆ ಆಲ್ಕೋಹಾಲ್ ಉತ್ಪನ್ನಗಳ ಮಾರಾಟವು ಈ ಲಾಕ್ ಡೌನ್ ಅವಧಿಯಲ್ಲಿ ಹೆಚ್ಚಾಗಿದೆ. ನೀಲ್ಸನ್ ವರದಿಯಂತೆ ಬಿಯರ್ ಮಾರಾಟ ಶೇ 34ರಷ್ಟು ಏರಿಕೆಯಾಗಿದೆ ಎಂದು ಸಿಎನ್ಎನ್ ವರದಿ ಮಾಡಿದೆ. ಪರಿಸ್ಥಿತಿ ಏನೇ ಇದ್ದರೂ ಕೊರೊನಾ ಹೆಸರಿನ ಬಿಯರ್ ಕುಡಿಯುತ್ತೇವೆ ಎಂದು ಯುವ ಜನಾಂಗ ಹೇಳಿದ್ದಾರೆ ಎಂದು ಸಿಬಿಎಸ್ ವರದಿ ಮಾಡಿದೆ.

English summary
Production of Corona beer is being temporarily suspended after Mexican government order amid of the coronavirus pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X