ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮಾರುಕಟ್ಟೆ ಪ್ರವೇಶಿಸಿದ ಮೆಲ್ಬೋರ್ನ್‍ನ ಗೋಟ್‌ ಮಿಲ್ಕ್‌ ಸೋಪ್

|
Google Oneindia Kannada News

ಬೆಂಗಳೂರು, ಸೆ. 25: ಭಾರತದ ಗ್ರಾಹಕರಿಗೆ ಇನ್ನು ಮುಂದೆ ಆಸ್ಟ್ರೇಲಿಯಾದ ವಿಕ್ಟೋರಿಯಾ ಉತ್ಪಾದಿತ ಗೋಟ್‌ ಮಿಲ್ಕ್‌(ಮೇಕೆ ಹಾಲು) ಸೋಪ್‍ನ ಉತ್ಪನ್ನಗಳು ದೊರೆಯಲಿವೆ. ಈ ಸಂಬಂಧ 160 ಕ್ಕೂ ಹೆಚ್ಚು ಸ್ಟೋರ್ ಗಳನ್ನು ಹೊಂದಿರುವ ಭಾರತದ ಅತಿದೊಡ್ಡ ಬ್ಯೂಟಿ ರೀಟೇಲರ್ ಸಂಸ್ಥೆಯಾಗಿರುವ ಹೆಲ್ತ್ & ಗ್ಲೋ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಬೆಂಗಳೂರಿನಲ್ಲಿ ಇಂದು ಗೋಟ್‌ ಮಿಲ್ಕ್‌ ಸೋಪ್‍ನ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.

ಈ ಒಪ್ಪಂದದ ಪ್ರಕಾರ ಹೆಲ್ತ್ & ಗ್ಲೋ ತನ್ನ ವಿಸ್ತಾರವಾದ ಸ್ಟೋರ್‍ಗಳಲ್ಲಿ ಗೋಟ್‌ ಮಿಲ್ಕ್‌ ಸೋಪ್‍ನ ಸ್ಕಿನ್‍ಕೇರ್ ಸೇರಿದಂತೆ ಇತರೆ ಬ್ಯೂಟಿ ಉತ್ಪನ್ನಗಳನ್ನು ಸಂಗ್ರಹ ಮಾಡುವುದು ಮತ್ತು ಮಾರಾಟ ಮಾಡಲಿದೆ. ವರ್ಜಿನ್ ಆಸ್ಟ್ರೇಲಿಯಾ ಮೆಲ್ಬೋರ್ನ್ ಫ್ಯಾಶನ್ ಫೆಸ್ಟಿವಲ್ 2018 ಸಂದರ್ಭದಲ್ಲಿ ಹೆಲ್ತ್ & ಗ್ಲೋ ವಿಕ್ಟೋರಿಯಾದ ಬ್ಯೂಟಿ ಬ್ರ್ಯಾಂಡ್‍ಗಳಾದ ಗೋಟ್‌ ಮಿಲ್ಕ್‌ ಸೋಪ್ ಸೇರಿದಂತೆ ಇನ್ನಿತರೆ ಉತ್ಪನ್ನಗಳ ಸಂಸ್ಥೆಯ ಸಂಪರ್ಕವನ್ನು ಸಾಧಿಸಿತ್ತು. ಈ ಫ್ಯಾಶನ್ ಫೆಸ್ಟಿವಲ್ ಅನ್ನು ವಿಕ್ಟೋರಿಯಾ ಸರ್ಕಾರ ಬ್ಯೂಟಿ ಉತ್ಪನ್ನಗಳ ಮಾರಾಟ ಉತ್ತೇಜನಕ್ಕಾಗಿ ಆಯೋಜಿಸಿತ್ತು.

ಚೀನಾ ಮತ್ತು ಯುಎಸ್‍ಗಳು ವಿಕ್ಟೋರಿಯಾಗೆ ಅತಿದೊಡ್ಡ ರಫ್ತುದಾರ ಮಾರುಕಟ್ಟೆಗಳಾಗಿದ್ದು, ಇದೀಗ ಮತ್ತೊಂದು ದೊಡ್ಡ ಮಾರುಕಟ್ಟೆ ಎನಿಸಿರುವ ಭಾರತಕ್ಕೆ ಗೋಟ್‌ ಮಿಲ್ಕ್‌ ಸೋಪ್ ಉತ್ಪನ್ನಗಳನ್ನು ರಫ್ತು ಮಾಡಲಿದೆ. ಈ ಮೂಲಕ ವಿಕ್ಟೋರಿಯಾ ತನ್ನ ಮಾರುಕಟ್ಟೆಯನ್ನು ವಿಸ್ತರಣೆ ಮಾಡಿಕೊಳ್ಳಲಿದೆ. 2011 ರಲ್ಲಿ ಮೆಲ್ಬೋರ್ನ್ ಮೂಲದ ಫಾರ್ಮಾಸಿಸ್ಟ್ ಡ್ಯಾನಿಯಲ್ ಡಿ ಪಿಲ್ಲಾ ಅವರು ಈ ಗೋಟ್‌ ಮಿಲ್ಕ್‌ ಸೋಪ್ ಸಂಸ್ಥೆಯನ್ನು ಆರಂಭಿಸಿದರು. ಅಲಿಬಾಬಾದಂತಹ ಇ-ಕಾಮರ್ಸ್ ಸೈಟ್‍ಗಳನ್ನು ಯಶಸ್ವಿಯಾಗಿ ಬಳಸಿಕೊಂಡು ಗೋಟ್‌ ಮಿಲ್ಕ್‌ ಸೋಪ್ ಉತ್ಪನ್ನಗಳ ಮಾರಾಟ ಜಾಲವನ್ನು ಶಕ್ತಿಶಾಲಿಯನ್ನಾಗಿ ಮಾಡಿಕೊಂಡರು.

ಬೆಂಗಳೂರಿನಲ್ಲಿ ಗೋಟ್‌ ಮಿಲ್ಕ್‌ ಸೋಪ್‍ನ ಉತ್ಪನ್ನ

ಬೆಂಗಳೂರಿನಲ್ಲಿ ಗೋಟ್‌ ಮಿಲ್ಕ್‌ ಸೋಪ್‍ನ ಉತ್ಪನ್ನ

2018 ರಲ್ಲಿ ಭಾರತಕ್ಕೆ ವಿಕ್ಟೋರಿಯಾದ ರಫ್ತಿನ ಪ್ರಮಾಣ 539 ಆಸ್ಟ್ರೇಲಿಯನ್ ಡಾಲರ್ ನಷ್ಟಾಗಿತ್ತು. ಈ ಒಪ್ಪಂದದ ಹಿನ್ನೆಲೆಯಲ್ಲಿ ಈ ರಫ್ತು ಪ್ರಮಾಣವನ್ನು 2027 ರ ವೇಳೆಗೆ 959 ಆಸ್ಟ್ರೇಲಿಯನ್ ಡಾಲರ್ ಗೆ ಹೆಚ್ಚಿಸಿಕೊಳ್ಳುವ ಗುರಿಯನ್ನು ಹಾಕಿಕೊಂಡಿದೆ. ಭಾರತದಲ್ಲಿ ವಿಕ್ಟೋರಿಯಾ ಸರ್ಕಾರದ ಎರಡು ವಾಣಿಜ್ಯ ಮತ್ತು ಬಂಡವಾಳ ಹೂಡಿಕೆ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಒಂದು ದೇಶದ ಆವಿಷ್ಕಾರ ಹಬ್ ಎನಿಸಿರುವ ಬೆಂಗಳೂರಿನಲ್ಲಿ, ಮತ್ತೊಂದು ಆರ್ಥಿಕ ಹಬ್ ಎನಿಸಿರುವ ಮುಂಬೈನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಬೆಂಗಳೂರಿನಲ್ಲಿ ಗೋಟ್‌ ಮಿಲ್ಕ್‌ ಸೋಪ್‍ನ ಉತ್ಪನ್ನ

ಬೆಂಗಳೂರಿನಲ್ಲಿ ಗೋಟ್‌ ಮಿಲ್ಕ್‌ ಸೋಪ್‍ನ ಉತ್ಪನ್ನ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಕ್ಟೋರಿಯಾ ಸರ್ಕಾರದ ಸಣ್ಣ ವ್ಯವಹಾರಗಳ ಸಚಿವ ಅಡೆಂ ಸೊಮ್ಯುರೆಕ್ ಅವರು,"ವಿಕ್ಟೋರಿಯಾದ ಕುಟುಂಬಗಳು ಗೋಟ್‌ ಮಿಲ್ಕ್‌ ನ ಅತ್ಯುನ್ನತ ಗುಣಮಟ್ಟದ ಉತ್ಪನ್ನಗಳಿಂದ ಸಾಕಷ್ಟು ಪ್ರಯೋಜನ ಪಡೆಯುತ್ತಿವೆ. ಈ ಪ್ರಯೋಜನಗಳನ್ನು ನಾವು ಹೆಲ್ತ್ & ಗ್ಲೋ ಪಾಲುದಾರಿಕೆಯೊಂದಿಗೆ ಭಾರತದ ಕುಟುಂಬಗಳಿಗೂ ನೀಡಲು ಒಪ್ಪಂದ ಮಾಡಿಕೊಂಡಿದ್ದೇವೆ. ಈ ಒಪ್ಪಂದ ಮಾಡಿಕೊಂಡಿರುವುದಕ್ಕೆ ವಿಕ್ಟೋರಿಯಾ ಸರ್ಕಾರಕ್ಕೆ ಸಂತಸವೆನಿಸುತ್ತಿದ್ದು, ಈ ನಿಟ್ಟಿನಲ್ಲಿ ಗೋಟ್‌ ಮಿಲ್ಕ್‌ ಸೋಪ್ ಮತ್ತು ಹೆಲ್ತ್ & ಗ್ಲೋ ಸಂಸ್ಥೆಗಳ ಯಶಸ್ಸು ಸಿಗಲಿ ಎಂದು ಹಾರೈಸುತ್ತಿದ್ದೇನೆ" ಎಂದು ತಿಳಿಸಿದ್ದಾರೆ.

ಆಸ್ಟ್ರೇಲಿಯಾದ ಸಂಸ್ಥಾಪಕ ಡ್ಯಾನಿಯಲ್ ಡಿ ಪಿಲ್ಲಾ

ಆಸ್ಟ್ರೇಲಿಯಾದ ಸಂಸ್ಥಾಪಕ ಡ್ಯಾನಿಯಲ್ ಡಿ ಪಿಲ್ಲಾ

ಗೋಟ್‌ ಮಿಲ್ಕ್‌ ಸೋಪ್ ಆಸ್ಟ್ರೇಲಿಯಾದ ಸಂಸ್ಥಾಪಕ ಡ್ಯಾನಿಯಲ್ ಡಿ ಪಿಲ್ಲಾ ಅವರು ಮಾತನಾಡಿ, ಹೆಲ್ತ್ & ಗ್ಲೋ ಗೆ ನಮ್ಮ ಗೋಟ್‌ ಮಿಲ್ಕ್‌ ಸೋಪ್ ಉತ್ಪನ್ನಗಳನ್ನು ಪರಿಚಯಿಸಲು ವಿಕ್ಟೋರಿಯಾ ಸರ್ಕಾರ ಪ್ರಮುಖ ಪಾತ್ರ ವಹಿಸಿದೆ. ಭಾರತದಲ್ಲಿರುವ ಹೆಲ್ತ್ & ಗ್ಲೋ ಸ್ಟೋರ್‍ಗಳಲ್ಲಿ ನಮ್ಮ ಉತ್ಪನ್ನಗಳು ಲಭ್ಯವಾಗುವುದರ ಬಗ್ಗೆ ನಾವು ರೋಮಾಂಚನಗೊಂಡಿದ್ದೇವೆ ಮತ್ತು ಭಾರತೀಯ ಗ್ರಾಹಕರಿಗೆ ಈ ಉತ್ಪನ್ನಗಳ ಪ್ರಯೋಜನಗಳನ್ನು ತಲುಪಿಸಲು ಉತ್ಸುಕರಾಗಿದ್ದೇವೆ'' ಎಂದರು.

Array

Array

ಹೆಲ್ತ್ & ಗ್ಲೋ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಕೆ.ವೆಂಕಟರಮಣಿ ಅವರು ಮಾತನಾಡಿ, "ಬ್ಯೂಟಿ ಮತ್ತು ವೈಯಕ್ತಿಕ ಆರೈಕೆಯಲ್ಲಿ ಹೆಲ್ತ್ & ಗ್ಲೋ ಒನ್ ಸ್ಟಾಪ್ ಶಾಪ್ ಎನಿಸಿದೆ. ಕಳೆದ ಹಲವು ವರ್ಷಗಳಿಂದ ಗ್ರಾಹಕರ ನಿರ್ದಿಷ್ಟ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ಜಾಗತಿಕ ಬ್ರ್ಯಾಂಡ್ ಅನ್ನು ವಿಸ್ತರಣೆ ಮಾಡುತ್ತಾ ಬಂದಿದ್ದೇವೆ. ನಾವು ಆಸ್ಟ್ರೇಲಿಯಾ ನೀಡುತ್ತಿರುವ ಬ್ರ್ಯಾಂಡ್‍ಗಳು ಮತ್ತು ಉತ್ಪನ್ನಗಳಿಗೆ ಆಕರ್ಷಿತರಾಗಿದ್ದೇವೆ. ಭಾರತೀಯ ಗ್ರಾಹಕರು ಮೇಕೆಯ ಹಾಲಿನ ಬಗ್ಗೆ ಹೆಚ್ಚು ಆಸಕ್ತಿ ಮತ್ತು ಒಲವನ್ನು ಹೊಂದಿದವರಾಗಿದ್ದಾರೆ. ನಮ್ಮ ಗ್ರಾಹಕರಿಗೆ ಆಸ್ಟ್ರೇಲಿಯಾದ ಗೋಟ್‌ ಮಿಲ್ಕ್‌ ಉತ್ಪನ್ನಗಳು ಅತ್ಯುತ್ತಮ ಮತ್ತು ಸೂಕ್ತ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಗೋಟ್‌ ಮಿಲ್ಕ್‌ ಸೋಪ್ ಉತ್ಪನ್ನಗಳನ್ನು ನಮ್ಮ ಗ್ರಾಹಕರಿಗೆ ನೀಡುತ್ತಿದ್ದೇವೆ" ಎಂದು ತಿಳಿಸಿದರು.

English summary
Melbourne Natural goat milk soap made with farm fresh raw goat milk soap entered Indian market. Health and Glow has partnered with Melbourne company to market it in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X