ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಿಯ ಇಂಧನ ಉತ್ಪಾದನೆಯಲ್ಲಿ ಕ್ರಾಂತಿಗೆ ನಾಂದಿ ಹಾಡಲಿದೆ MEIL ರಿಗ್ ಪ್ರಾಜೆಕ್ಟ್ !

|
Google Oneindia Kannada News

ಬೆಂಗಳೂರು, ಏಪ್ರಿಲ್ 08: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ 'ಮೇಕ್ ಇನ್ ಇಂಡಿಯಾ' ಘೋಷಣೆಗೆ ಪ್ರತಿಯಾಗಿ ಮೆಘಾ ಇಂಜಿನಿಯರಿಂಗ್ ಅಂಡ್ ಇನ್‌ ಫ್ರಾಸ್ಟ್ರಕ್ಷರ್ ಸಂಸ್ಥೆಯು ಇಂಧನ ನಿಕ್ಷೇಪ ಎತ್ತುವಳಿಗೆ ಅತ್ಯಾಧುನಿಕ ಮತ್ತು ದೇಶಿಯ ನಿರ್ಮಿತ ರಿಗ್ ಗಳನ್ನು ಮೊಟ್ಟ ಮೊದಲ ಬಾರಿಗೆ ನಿರ್ಮಿಸಿದೆ. ಇಡೀ ದೇಶದಲ್ಲಿಯೇ ಇಂತಹ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿರುವ ಚೊಚ್ಚಲ ಖಾಸಗಿ ಸಂಸ್ಥೆಯಾಗಿರುವ ಎಂಇಐಎಲ್, 1500 ಎಚ್‌ಪಿ ಸಾಮರ್ಥ್ಯ ಮೂಲಕ ಭೂಗರ್ಭದಲ್ಲಿ 400 ಮೀಟರ್ ಅಂದರೆ 4 ಕಿ.ಮೀ.ಗಳಷ್ಟು ಆಳವನ್ನು ಹೊಕ್ಕು ಇಂಧನ ಬಾವಿಗಳನ್ನು ನಿರ್ಮಿಸಿ ಇಂಧನ ನಿಕ್ಷೇಪವನ್ನು ಹೊರತರಲಿದೆ.

ಎಂಇಐಎಲ್ ಸಂಸ್ಥೆಯ ಈ ಅತ್ಯಾಧುನಿಕ ರಿಗ್ ಗುಜರಾತ್‌ನ ಅಹ್ಮದಾಬಾದ್ ವ್ಯಾಪ್ತಿಯಲ್ಲಿನ ಕಲೂಲ್‌ನಲ್ಲಿ ಬುಧವಾರದಿಂದ ಕಾರ್ಯಾರಂಭಿಸಿವೆ ಎಂದು ಎಂ.ಇ.ಐ.ಎಲ್ ಉಪಾಧ್ಯಕ್ಷ ಪಿ. ರಾಜೇಶ್ ರೆಡ್ಡಿ ತಿಳಿಸಿದ್ದಾರೆ. 2019ರಲ್ಲಿ ಇಂತಹ ಅತ್ಯಾಧುನಿಕ 47 ರಿಗ್ ಗಳ ನಿರ್ಮಾಣಕ್ಕೆ ವಿವಿಧೆಡೆಗಳಿಂದ ಬೇಡಿಕೆ ಬಂದಿದ್ದು, ಈ ಸರಬರಾಜು ಆದೇಶಕ್ಕೆ ಪ್ರತಿಯಾಗಿ ಬುಧವಾರ ಸಂಸ್ಥೆಯ ಮೊದಲ ರಿಗ್ ಕಾರ್ಯಾನಿರ್ವಹಣೆ ಆರಂಭಗೊಂಡಿದೆ ಮತ್ತು ಇನ್ನುಳಿದಂತೆ 46 ರಿಗ್‌ಗಳು ವಿವಿಧ ನಿರ್ಮಾಣ ಹಂತಗಳಲ್ಲಿವೆ. ಈ ದೇಶಿಯ ನಿರ್ಮಿತ ರಿಗ್ 40 ವರ್ಷಗಳ ಸುದೀರ್ಘ ಬಾಳಿಕೆ ಬರುತ್ತವೆ ಎಂದು ರಾಜೇಶ್ ರೆಡ್ಡಿ ತಿಳಿಸಿದ್ದಾರೆ.

ದೇಶಿಯ ಹೆಗ್ಗಳಿಕೆ: ಈಗಾಗಲೇ ಬಳಕೆಯಲ್ಲಿರುವ ಇಂಧನ ಬಾವಿಗಳಿಂದ ಹೆಚ್ಚಿನ ಉತ್ಪಾದನೆಗೆ ಅನುವಾಗುವಂತೆ ಮತ್ತು ಇಂಧನ ಬಾವಿಗಳ ರಿಪೇರಿಗೆ ಎಂಇಐಎಲ್ ನಿರ್ಮಿತ ಈ ಅತ್ಯಾಧುನಿಕ ರಿಗ್ ಗಳು ಸಹಕಾರಿಯಾಗಲಿವೆ. ಭೂತಳದಲ್ಲಿನ ಇಂಧನ ನಿಕ್ಷೇಪವನ್ನು ತಲುಪಿ ಅಲ್ಲಿಂದ ಮೇಲೆತ್ತಿ ತರಲು ಈ ಅತ್ಯಾಧುನಿಕ ರಿಗ್‌ಗಳ ಕಾರ್ಯಕ್ಷಮತೆ ಪ್ರಸ್ತುತವಾಗಲಿದ್ದು, 1500 ಮೀಟರ್‌ನಿಂದ ಆರಂಭಗೊಂಡು 6000 ಮೀಟರ್‌ವರೆಗೆ ಭೂಮಿ ಕೊರೆದು ಇಂಧನ ಮೇಲಕ್ಕೆ ಎತ್ತಲಿದೆ. ಎಂಇಐಎಲ್ ನಿರ್ಮಿತ ಅತ್ಯಾಧುನಿಕ ರಿಗ್‌ಗಳಿಗೆ ಹೋಲಿಕೆ ಮಾಡಿದಲ್ಲಿ, ಪ್ರಸ್ತುತ ಬಳಸುತ್ತಿರುವ ರಿಗ್‌ಗಳು ಕೇವಲ 1000 ಮೀಟರ್ ಆಳದವರೆಗೆ ರಿಗ್ ಮಾಡುವ ಸಾಮರ್ಥ್ಯ ಹೊಂದಿವೆ.

MEIL Make in India rig project creates mile stone in Indian fuel sector

20 ರಿಗ್‌ಗಳ ಪೈಕಿ 12 ರಿಗ್ ಗಳು 50 ಮೀಟರ್‌ವರೆಗೆ ಸ್ವಯಂ ಚಾಲಿತವಾಗಿದ್ದು, 100 ಮೀಟರ್ ಮತ್ತು 150 ಮೀಟರ್ ಸಾಮರ್ಥ್ಯದ 4 ರಿಗ್‌ಗಳ ನಿರ್ಮಾಣ ಕಾರ್ಯವೂ ಸಹ ಸಾಗಿದೆ. 1500 ಹೆಚ್.ಪಿ. ಮತ್ತು 2000 ಎಚ್.ಪಿ ಶಕ್ತಿಯ ರಿಗ್‌ಗಳ ತಯಾರಿಕೆ ದೇಶದಲ್ಲಿ ಇದೇ ಮೊಟ್ಟ ಮೊದಲಾಗಿದೆ.

ಪ್ರಸ್ತುತ ಗುಜರಾತ್‌ನಲ್ಲಿ ಒಂದು ರಿಗ್ ಯಶಸ್ವಿಯಾಗಿ ಕಾರ್ಯಾರಂಭಿಸಿದ್ದರೆ, ಎರಡನೇ ರಿಗ್ ಆರಂಭಕ್ಕೆ ಭರದ ಸಿದ್ಧತೆಗಳು ನಡೆದಿವೆ ಮತ್ತು ಇನ್ನುಳಿದ 46 ರಿಗ್‌ಗಳ ಪೈಕಿ ಆಂಧ್ರ ಪ್ರದೇಶದ ರಾಜಮಂಡ್ರಿ ಇಂಧನ ನಿಕ್ಷೇಪ ಪ್ರದೇಶಕ್ಕೆ ಸರಬರಾಜಾಗಲಿದ್ದು, ಉಳಿದವು ಓಎನ್‌ಜಿಸಿಯ ಆಸ್ಸಾಂ, ತ್ರಿಪುರ ಮತ್ತು ತಮಿಳುನಾಡು ಇಂಧನ ನಿಕ್ಷೇಪ ಪ್ರದೇಶಗಳಿಗೆ ಸರಬರಾಜಾಗಲಿವೆ.

ಸ್ಥಳೀಯ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿರುವ ಈ ರಿಗ್‌ಗಳು ಅತಿ ಕಡಿಮೆ ವಿದ್ಯುತ್ ಬಳಕೆ ಮಾಡಿಕೊಳ್ಳಲಿದೆ. ಅತ್ಯಾಧುನಿಕ ಹೈಡ್ರಾಲಿಕ್ ಮತ್ತು ಸ್ವಯಂಚಾಲಿತ ವ್ಯವಸ್ಥೆ ಹೊಂದಿರುವುದರಿಂದ 1500 ಎಚ್.ಪಿ ಸಾಮರ್ಥ್ಯದಿಂದ 400 ಮೀಟರ್ ಆಳವನ್ನು ಸುಲಭದಲ್ಲಿ ಕ್ರಮಿಸಲಿದ್ದು, ಸುರಕ್ಷತೆಗೂ ಆದ್ಯತೆ ನೀಡಲಾಗಿದೆ ಎಂದು ರಾಜೇಶ್ ರೆಡ್ಡಿ ತಿಳಿಸಿದ್ದಾರೆ.

ದೇಶಿಯ ಇಂಧನ ಉತ್ಪಾದನೆಗೆ ಒತ್ತು: ದೇಶದ ನವರತ್ನ ಸಂಸ್ಥೆಗಳಲ್ಲಿ ಒಂದಾಗಿರುವ ಓಎನ್‌ಜಿಸಿ ಈ ಅತ್ಯಾಧುನಿಕ ರಿಗ್ ಗಳನ್ನು ಪಡೆದುಕೊಳ್ಳಲಿದ್ದು, ಇದರಿಂದ ದೇಶೀಯ ಇಂಧನ ಉತ್ಪಾದನೆ ಹೆಚ್ಚಲಿದೆ. ಈ ಬೆಳವಣಿಗೆಯಿಂದ ಇಂಧನ ಆಮದಿನಲ್ಲಿ ಕಡಿತವಾಗುವ ಮೂಲಕ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಸಹಕಾರಿಯಾಗುವ ಜತೆಗೆ ಓಎನ್‌ಜಿಸಿಗೆ ಅತ್ಯಾಧುನಿಕ ತಂತ್ರಜ್ಞಾನ ಸುಲಭದಲ್ಲಿ ಲಭ್ಯವಾಗಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ "ಮೇಕ್ ಇನ್ ಇಂಡಿಯಾ"ವನ್ನು ತನ್ನ ನೀತಿಯನ್ನಾಗಿ ಪರಿಗಣಿಸಿರುವ ಎಂ.ಇ.ಐ.ಎಲ್, ಮುಂದಿನ ದಿನಗಳಲ್ಲಿ ಅತ್ಯಾಧುನಿಕ ರಿಗ್‌ಗಳ ವಾಣಿಜ್ಯ ಮಾರಾಟಕ್ಕೂ ಮುಂದಡಿ ಇರಿಸಲಿದ್ದು, ಇತರೆ ವಿದೇಶಿ ಸಂಸ್ಥೆಗಳ ರಿಗ್‌ಗಳಿಗಿಂತ ಈ ದೇಶಿಯ ರಿಗ್ ಅತ್ಯುತ್ತಮ ಮತ್ತು ಅತ್ಯಾಧುನಿಕವಾಗಿವೆ ಎಂದು ಪ್ರಕಟಣೆ ತಿಳಿಸಿದೆ.

English summary
Megha Engineering and Infrastructure Limited(MEIL) has introduced indigenous built rigs to extract fuel in the fuel reserves know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X