ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯಲ್ಲಿ ಮೆಹುಲ್ ಚೋಕ್ಸಿ ನಂ.1

|
Google Oneindia Kannada News

ನವದೆಹಲಿ, ಏಪ್ರಿಲ್ 29: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿ ಅವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ ಬಿಐ) ನೀಡಿರುವ ಮಾಹಿತಿಯಂತೆ ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

Recommended Video

ಮೋದಿಜೀ ಆಶೀರ್ವಾದ ಪಡೆದು ನೀರವ್ ಮೋದಿ ಪರಾರಿ | Oneindia Kannada

ಉದ್ದೇಶಪೂರ್ವಕವಾಗಿ ಸಾಲ ಬಾಕಿ ಉಳಿಸಿಕೊಂಡ 50ಕ್ಕೂ ಅಧಿಕ ದೊಡ್ಡ ಮೊತ್ತ ಸಾಲಗಳನ್ನು ಲೆಕ್ಕ ಹಾಕಿದರೆ ಒಟ್ಟಾರೆ, 68, 607 ಕೋಟಿ ರುಗಳನ್ನು ತಾಂತ್ರಿಕವಾಗಿ ರಿಟನ್ ಆಫ್ ಮಾಡಲಾಗಿದೆ ಎಂದು ಆರ್ ಬಿಐ ಹೇಳಿದೆ. ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಸಾಕೇತ್ ಗೋಖಲೆ ಎಂಬುವರು ಕೇಳಲಾದ ಪ್ರಶ್ನೆಗೆ ಆರ್ ಬಿಐ ಪ್ರತಿಕ್ರಿಯಿಸಿ, ವಿವರಗಳನ್ನು ನೀಡಿದೆ.

13 ಸಾವಿರ ಕೋಟಿ ವಂಚನೆ ನಂತರ ಮೆಹುಲ್ ಚೋಕ್ಸಿ ಮೊದಲ ಮಾತುಗಳಿವು13 ಸಾವಿರ ಕೋಟಿ ವಂಚನೆ ನಂತರ ಮೆಹುಲ್ ಚೋಕ್ಸಿ ಮೊದಲ ಮಾತುಗಳಿವು

ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಅವರ 5,492 ಕೋಟಿ ರು ಸಾಲವನ್ನು ರಿಟನ್ ಆಫ್ ಮಾಡಲಾಗಿದೆ. ಚೋಕ್ಸಿ ಅವರು ಒಟ್ಟಾರೆ 70, 000 ಕೋಟಿ ರುಗೂ ಅಧಿಕ ಸಾಲ ಹೊಂದಿದ್ದು, ಅತಿದೊಡ್ಡ ಸಾಲಗಾರ ಉದ್ದೇಶಪೂರ್ವಕ ಸುಸ್ತಿದಾರ ಎನಿಸಿಕೊಂಡಿದ್ದಾರೆ.

Mehul Choksi Tops RBI List Of Defaulters Who Owe Nearly Rs 70,000 Crore

ಏನಿದು ರಿಟರ್ನ್ ಆಫ್: ಬ್ಯಾಂಕುಗಳ ಸಾಲದ ಪಟ್ಟಿಯಿಂದ ಕೆಟ್ಟ ಸಾಲಗಳನ್ನು ತೆಗೆದುಹಾಕುವುದು ಅಥವಾ ಅಳಿಸಿ ಹಾಕುವುದಕ್ಕೆ ರಿಟನ್ ಆಫ್ ಎಂದು ಕರೆಯಲಾಗುತ್ತದೆ. ಯಾವುದೇ ಸಾಲ ವಸೂಲಿ ಮಾಡಲಾಗದೆ ನಿರುಪಯುಕ್ತ ಹಂತಕ್ಕೆ ತಲುಪಿದಾಗ ಇದು ಬ್ಯಾಂಕಿನ ಅನುತ್ಪಾದಕ ಆಸ್ತಿಯಾಗಿ ದೊಡ್ಡ ಹೊರೆ ಎನಿಸುತ್ತದೆ. ಇದನ್ನು ಪ್ರತಿವರ್ಷದ ಲೆಕ್ಕಪತ್ರದಿಂದ ಹೊರಗಿಡುವ ಪದ್ಧತಿ ಅನುಸರಿಸಲಾಗುತ್ತದೆ.

ಆದರೆ, ರಿಟನ್ ಆಫ್ ಎಂದರೆ ಸಾಲಮನ್ನಾವಲ್ಲ. ಮುಂಬರುವ ಆರ್ಥಿಕ ವರ್ಷಗಳ ಲೆಕ್ಕಪತ್ರದಲ್ಲಿ ನಮೂದಾಗುವುದಿಲ್ಲ. ಸುಸ್ತಿದಾರರು ಸಾಲ ಮತ್ತು ಬಡ್ಡಿಯನ್ನು ಪಾವತಿಸಲೇಬೇಕಾಗುತ್ತದೆ.

ಎಷ್ಟು ರಿಟನ್ ಆಫ್ ಆಗಿದೆ?
* ಮೆಹುಲ್ ಚೋಕ್ಸಿ - 5,492ಕೋಟಿ ರೂ.
* ಅಗ್ರೋ ಲಿ. 4,314 ಕೋಟಿ ರೂ.
* ವಿನ್ಸಮ್ ಡೈಮಂಡ್ಸ್ - 4,076 ಕೋಟಿ ರೂ.
* ರೊಟೋಮ್ಯಾಕ್ ಗ್ಲೋಬಲ್ - 2,850 ಕೋಟಿ ರೂ.
* ಕುಡೋಸ್ ಕೆಮಿ, ಪಂಜಾಬ್ - 2,326 ಕೋಟಿ ರೂ.
* ರುಚಿ ಸೋಯಾ ಇಂಡಸ್ಟ್ರೀಸ್ - 2,212 ಕೋಟಿ ರೂ.
* ಜೂಮ್ ಡೆವಲಪರ್ಸ್ - 2,012 ಕೋಟಿ ರೂ.
* ಕಿಂಗ್‍ಫಿಶರ್ ಏರ್‍ಲೈನ್ಸ್ - 1,943 ಕೋಟಿ ರೂ.
* ಫಾರೆವರ್ ಪ್ರಿಶಿಯಸ್ ಜುವೆಲ್ಲರಿ -1,962 ಕೋಟಿ ರೂ.

ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮುಂಬೈ ಶಾಖೆಯೊಂದರಲ್ಲಿ 11,500 ಕೋಟಿ ರೂ.ಗಳ ವಂಚನೆ ಮತ್ತು ಅಕ್ರಮ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್ ಮೋದಿ ಜತೆಗೆ ಮೆಹುಲ್ ಚೊಕ್ಸಿ ಕೂಡಾ ಆರೋಪಿ.

English summary
Business tycoons Mehul Choksi, the Jhunjhunwala brothers, and Vijay Mallya are among the prominent individuals linked to companies named by the Reserve Bank of India (RBI) in a list of the top 50 wilful defaulters accused of scamming the country's banks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X