• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಮೋಸ್ಟ್ ವಾಂಟೆಡ್' ಮೆಹುಲ್ ಚೋಕ್ಸಿ ಬಳಿಯೀಗ ಆಂಟಿಗುವಾ ಪಾಸ್ ಪೋರ್ಟ್!

|

ನವದೆಹಲಿ, ಜುಲೈ 24 : ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13,500 ಕೋಟಿ ರುಪಾಯಿ ವಂಚನೆ ಪ್ರಕರಣದಲ್ಲಿ ನೀರವ್ ಮೋದಿ ಜತೆಗೆ ಬೇಕಾಗಿರುವ ಆತನ ಸಂಬಂಧಿ, ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಆಂಟಿಗುವಾದಲ್ಲಿ ಇರುವ ಬಗ್ಗೆ ಹಾಗೂ ಅಲ್ಲಿನ ಸ್ಥಳೀಯ ಪಾಸ್ ಪೋರ್ಟ್ ಪಡೆದಿರುವ ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಈ ವರ್ಷದ ಜನವರಿಯಲ್ಲಿ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಮತ್ತು ಕುಟುಂಬದವರು ದೇಶ ಬಿಟ್ಟು ಹೋಗಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ನಡೆದ ಸಾವಿರಾರು ಕೋಟಿ ರುಪಾಯಿ ವಂಚನೆ ಪ್ರಕರಣ ಬೆಳಕಿಗೆ ಬರುವ ಹದಿನೈದು ದಿನಕ್ಕೆ ಮುಂಚೆ ಇವರಿಬ್ಬರು ದೇಶ ಬಿಟ್ಟಿದ್ದರು.

ನೀರವ್ ಮೋದಿಯ ಹೈ ಪ್ರೊಫೈಲ್ ಗ್ರಾಹಕರಿಗೆ ಐಟಿ ನೋಟಿಸ್

ಆಗಿನಿಂದ ತನಿಖಾ ಸಂಸ್ಥೆಗಳು ಇವರಿಬ್ಬರ ಸಲುವಾಗಿ ಶೋಧ ನಡೆಸುತ್ತಿವೆ. ಆ ಪೈಕಿ ನೀರವ್ ಮೋದಿ ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್ ನಲ್ಲಿ ಇರುವ ಬಗ್ಗೆ ಮಾಹಿತಿ ಹರಿದಾಡುತ್ತಿದೆ. ಇಬ್ಬರ ಮೇಲೂ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ. ಇಂಟರ್ ಪೋಲ್ ನಿಂದ ರೆಡ್ ಕಾರ್ನರ್ ನೋಟಿಸ್ ಕೂಡ ಹೊರಡಿಸಲಾಗಿದೆ.

ಇಂಟರ್ ಪೋಲ್ ನಿಂದ ಮತ್ತೊಂದು ನೋಟಿಸ್ ಹೊರಡಿಸಿದ ಮೇಲೆ, ಮೆಹುಲ್ ಚೋಕ್ಸಿ ಕಳೆದ ತಿಂಗಳು ಇಲ್ಲಿಗೆ ಬಂದಿದ್ದಾರೆ. ಈ ದೇಶದ ಪಾಸ್ ಪೋರ್ಟ್ ಪಡೆದಿದ್ದಾರೆ ಎಂದು ಆಂಟಿಗುವಾ ಅಧಿಕಾರಿಗಳು ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಮೆಹುಲ್ ಚೊಕ್ಸಿಗೆ ಸೇರಿದ 41 ಆಸ್ತಿ ಜಪ್ತಿ ಮಾಡಿದ 'ಇಡಿ'

ಕಳೆದ ತಿಂಗಳು, ಜಾರಿ ನಿರ್ದೇಶನಾಲಯವು ಮುಂಬೈ ಕೋರ್ಟ್ ನಲ್ಲಿ, ಇಬ್ಬರನ್ನೂ "ದೇಶಭ್ರಷ್ಟ ಆರ್ಥಿಕ ಅಪರಾಧಿ" ಎಂದು ಘೋಷಿಸುವಂತೆ ಕೇಳಿತ್ತು. ಭಾರತ, ಯುಕೆ ಮತ್ತು ಯುಎಇಯಲ್ಲಿ ಇರುವ ಅವರ ಮೂರು ಸಾವಿರದ ಐನೂರು ಕೋಟಿ ರುಪಾಯಿ ಆಸ್ತಿಯನ್ನು ವಶಪಡಿಸಿಕೊಳ್ಳಲು ಅನುಮತಿ ಕೋರಿತ್ತು.

ನೀರವ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದ ಇಂಟರ್ಪೋಲ್

ಭಾರತಕ್ಕೆ ಹಿಂತಿರುಗಿದರೆ ಸಾರ್ವಜನಿಕರು ನನ್ನನ್ನು ಕೊಂದು ಬಿಡಬಹುದು. ಆದ್ದರಿಂದ ವಾಪಸ್ ಬರುವುದಿಲ್ಲ ಎಂದು ದೇಶಕ್ಕೆ ವಾಪಸ್ ಬರಲು ಮೆಹುಲ್ ಚೋಕ್ಸಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ತನ್ನ ಮಾಜಿ ಉದ್ಯೋಗಿಗಳು, ಸಾಲಗಾರರಿಂದ ಅಪಾಯವಿದೆ ಎಂಬರ್ಥದಲ್ಲಿ ಚೋಕ್ಸಿ ಹಾಗೆ ಹೇಳಿದ್ದ ಬಗ್ಗೆ ವರದಿಯಾಗಿತ್ತು.

ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಉದ್ಯೋಗಿಗಳ ಸಹಾಯದಿಂದ ಏಳು ವರ್ಷದಿಂದ ವಂಚಿಸುತ್ತಿರುವ ಬಗ್ಗೆ ಇವರಿಬ್ಬರ ಮೇಲೆ ಆರೋಪವಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Diamond trader Mehul Choksi, wanted for a Rs. 13,500 crore bank fraud along with his nephew Nirav Modi, has moved to Antigua and got a local passport, reported news agency Press Trust of India, quoting sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more