ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದ ಮಹತ್ವಾಕಾಂಕ್ಷೆಯ ಪೈಪ್ಡ್ ಗ್ಯಾಸ್ ಯೋಜನೆಗೆ ರಾಜ್ಯದ ಈ 2ನಗರಗಳು ಆಯ್ಕೆ

|
Google Oneindia Kannada News

ಬೆಂಗಳೂರು, ಜ 16: ಕೊಳವೆ ಮಾರ್ಗದ ಮೂಲಕ ಮನೆಮನೆಗೆ ಮನೆ ಅಡುಗೆ ಅನಿಲ ಸಂಪರ್ಕದ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಯೋಜನೆಗೆ ನಮ್ಮ ರಾಜ್ಯದ ಎರಡು ನಗರಗಳು ಆಯ್ಕೆಯಾಗಿವೆ. ಸಿಲಿಂಡರ್ ಗೊಡವೆ ತಪ್ಪಿಸುವುದು ಕೇಂದ್ರದ ಪ್ರಮುಖ ಉದ್ದೇಶವಾಗಿದೆ.

ರಾಜಧಾನಿ ಬೆಂಗಳೂರು, ಬಂದರು ನಗರಿ ಮಂಗಳೂರು, ಸಾಂಸ್ಕೃತಿಕ ನಗರಿ ಮೈಸೂರು, ಕಲ್ಪತರು ನಗರಿ ತುಮಕೂರು, ಕುಂದಾ ನಗರಿ ಬೆಳಗಾವಿಯ ಆಯ್ದ ಭೌಗೋಳಿಕ ಪ್ರದೇಶಗಳ ಮನೆಮನೆಗೆ ಪೈಪ್ ಲೈನ್ ಮುಖಾಂತರ ಅಡುಗೆ ಅನಿಲ ಪೂರೈಸುವ ಯೋಜನೆಯ ಕಾಮಗಾರಿ ಈಗಾಗಲೇ ಆರಂಭವಾಗಿದೆ.

ಮೈಸೂರು; ಪೈಪ್ ಲೈನ್ ಮೂಲಕ ಮನೆಗೆ ಬರಲಿದೆ ಅಡುಗೆ ಅನಿಲ! ಮೈಸೂರು; ಪೈಪ್ ಲೈನ್ ಮೂಲಕ ಮನೆಗೆ ಬರಲಿದೆ ಅಡುಗೆ ಅನಿಲ!

ಕಾಮಗಾರಿಯು ಅಂದು ಕೊಂಡಂತೆ ಮುಗಿದರೆ, ಏಪ್ರಿಲ್ ಅಥವಾ ಮೇ 2022ರಲ್ಲಿ ಪ್ರತಿ ಮನೆಗೂ ಮೊದಲ ಹಂತದಲ್ಲಿ ಅಡುಗೆ ಅನಿಲ ಪೈಪ್ಡ್ ಲೈನ್ ಮೂಲಕ ಈ ನಗರಗಳಲ್ಲಿ ಪೂರೈಕೆಯಾಗಲಿದೆ. ಮೈಸೂರು ವ್ಯಾಪ್ತಿಗೆ ಅಡುಗೆ ಅನಿಲ ಸರಬರಾಜು ಮಾಡಲು ನಗರದ ಹೆಬ್ಬಾಳದಲ್ಲಿ ಘಟಕ ನಿರ್ಮಾಣವಾಗಲಿದೆ.

ರಾಜ್ಯದ ಐದು ನಗರಗಳ ನಂತರ ರಾಜ್ಯದ ಮತ್ತೆರಡು ನಗರವನ್ನು ಈ ಯೋಜನೆಯ ವ್ಯಾಪ್ತಿಗೆ ತರಲು ಕೇಂದ್ರ ಸರಕಾರ ನಿರ್ಧರಿಸಿದೆ. ಹೈದರಾಬಾದ್ ಮೂಲದ ಸಂಸ್ಥೆಯು ಆಯ್ಕೆಯಾಗಿರುವ ಎರಡು ನಗರಗಳಿಗೆ ಪೈಪ್ ಲೈನ್ ಗ್ಯಾಸ್ ಪೂರೈಕೆ ಟೆಂಡರ್ ಅನ್ನು ತನ್ನದಾಗಿಸಿಕೊಂಡಿದೆ.

 ಕೇಂದ್ರ ಸರಕಾರದ ಪೆಟ್ರೋಲಿಯಂ ಇಲಾಖೆ

ಕೇಂದ್ರ ಸರಕಾರದ ಪೆಟ್ರೋಲಿಯಂ ಇಲಾಖೆ

ಕೇಂದ್ರ ಸರಕಾರದ ಪೆಟ್ರೋಲಿಯಂ ಇಲಾಖೆಯ ವ್ಯಾಪ್ತಿಗೆ ಬರುವ ನೈಸರ್ಗಿಕ ನಿಯಂತ್ರಣ ಮಂಡಳಿ ದೇಶದ ವಿವಿಧ ನಗರಗಳ ಭೌಗೋಳಿಕ ಪ್ರದೇಶಗಳಿಗೆ ಪೈಪ್ ಲೈನ್ ಮೂಲಕ ಅಡುಗೆ ಅನಿಲ ಪೂರೈಸಲು ಟೆಂಡರ್ ಅನ್ನು ಕರೆದಿತ್ತು. ಅದರಲ್ಲಿ ಕರ್ನಾಟಕದ ಎರಡು ನಗರವೂ ಸೇರಿವೆ. ಕರ್ನಾಟಕದ ಎರಡು ನಗರಗಳಿಗೆ ಈ ಯೋಜನೆ ರೂಪಿಸಲು ಹೈದರಾಬಾದ್ ಮೂಲದ ಮೇಘಾ ಇಂಜಿನಿಯರಿಂಗ್ ಎಂಡ್ ಇನ್ಫ್ರಾಸ್ಟ್ರಕ್ಚರ್ (ಎಂಇಐಎಲ್) ಬಿಡ್ ಅನ್ನು ಗೆದ್ದುಕೊಂಡಿದೆ.

 ಕೇಂದ್ರದ ಮಹತ್ವಾಕಾಂಕ್ಷೆಯ ಪೈಪ್ಡ್ ಗ್ಯಾಸ್ ಯೋಜನೆ

ಕೇಂದ್ರದ ಮಹತ್ವಾಕಾಂಕ್ಷೆಯ ಪೈಪ್ಡ್ ಗ್ಯಾಸ್ ಯೋಜನೆ

ಕೇಂದ್ರ ಸರಕಾರದ ಈ ಮಹತ್ವಾಕಾಂಕ್ಷೆ ಯೋಜನೆಗೆ ಬೆಂಗಳೂರು, ಮಂಗಳೂರು, ಮೈಸೂರು, ತುಮಕೂರು, ಬೆಳಗಾವಿ ನಗರದ ಭೌಗೋಳಿಕ ಪ್ರದೇಶಗಳ ನಂತರ ಚಿಕ್ಕಬಳ್ಳಾಪುರ ಮತ್ತು ಯಾದಗಿರಿ ನಗರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮೇಘಾ ಇಂಜಿನಿಯರಿಂಗ್ ಯೋಜನೆಯನ್ನು ಕಾರ್ಯಗತಗೊಳಿಸಲಿದೆ. ಹದಿನೈದು ನಗರಗಳಿಗೆ ಈ ಸೇವೆಯನ್ನು ನೀಡಿರುವ ಅನುಭವವನ್ನು ಹೊಂದಿರುವ ಈ ಸಂಸ್ಥೆಯು ತುಮಕೂರು, ಬೆಳಗಾವಿಯ ನೈಸರ್ಗಿಕ ಅನಿಲ ಸಂಪರ್ಕದ ಕೆಲಸವನ್ನೂ ಮಾಡುತ್ತಿದೆ.

 ಸಿಲಿಂಡರ್ ಗೊಡವೆ ತಪ್ಪಿಸುವುದು ಕೇಂದ್ರದ ಪ್ರಮುಖ ಉದ್ದೇಶ

ಸಿಲಿಂಡರ್ ಗೊಡವೆ ತಪ್ಪಿಸುವುದು ಕೇಂದ್ರದ ಪ್ರಮುಖ ಉದ್ದೇಶ

ಹಸಿರು ಅನಿಲ ಬಳಕೆಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರಕಾರ ಈ ಯೋಜನೆಯನ್ನು ಜಾರಿಗೆ ತರುತ್ತಿದೆ. ಇದಕ್ಕಾಗಿ CNG (compressed natural gas) ಘಟಕಗಳನ್ನೂ ಟೆಂಡರ್ ಪಡೆದುಕೊಂಡಿರುವ ಸಂಸ್ಥೆಗಳು ನಿರ್ಮಿಸಲಿವೆ. ಈಗಾಗಲೇ ದೇಶದ ಮೂರು ರಾಜ್ಯಗಳಲ್ಲಿ ಎಂಇಐಎಲ್ ಸಂಸ್ಥೆ, ತನ್ನ ಸಂಸ್ಥೆಯ ಬ್ಯ್ರಾಂಡ್ (ಮೇಘಾ ಗ್ಯಾಸ್) ಅಡಿಯಲ್ಲಿ 32 CNG ಕೇಂದ್ರಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ.

 ಆಧುನಿಕ ತಂತ್ರಜ್ಞಾನದ ಜಿಐಎಸ್ ಆಧಾರಿತ ನಿಯಂತ್ರಣ ವ್ಯವಸ್ಥೆ

ಆಧುನಿಕ ತಂತ್ರಜ್ಞಾನದ ಜಿಐಎಸ್ ಆಧಾರಿತ ನಿಯಂತ್ರಣ ವ್ಯವಸ್ಥೆ

ಮೈಸೂರಿನಲ್ಲಿ ಈ ಬಿಡ್ ಅನ್ನು ಎಜಿ ಎಂಡ್ ಪಿ ಕಂಪೆನಿಯು ಪಡೆದುಕೊಂಡಿದೆ. ನಗರದ 16,917 ಚದರ ಕಿ. ಮೀ. ವ್ಯಾಪ್ತಿಯನ್ನು ಪೈಪ್‌ಲೈನ್ ಅನಿಲ ಸಂಪರ್ಕ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದ್ದು, 5 ವರ್ಷಗಳಲ್ಲಿ ನಗರದ 3.75 ಲಕ್ಷ ಮನೆಗಳಿಗೆ ಸಂಪರ್ಕಗಳಿಗೆ ಪೈಪ್‌ಲೈನ್ ಮೂಲಕ ಅಡುಗೆ ಅನಿಲ ಪೂರೈಸುವ ಗುರಿಯನ್ನು ಹಾಕಿಕೊಂಡಿದೆ. ಆಧುನಿಕ ತಂತ್ರಜ್ಞಾನದ ಜಿಐಎಸ್ ಆಧಾರಿತ ನಿಯಂತ್ರಣ ವ್ಯವಸ್ಥೆ ಹಾಗೂ ತುರ್ತು ಸ್ಪಂದನಾ ವಾಹನಗಳ ಬಳಕೆಯಿಂದ ಅನಾಹುತ ತಡೆಯುವ ವ್ಯವಸ್ಥೆಯನ್ನು ಹೊಂದಿದೆ. ಕೇಂದ್ರ ವಿಶೇಷ ಮುತುವರ್ಜಿಯನ್ನು ವಹಿಸಿ ಈ ಕೆಲಸವನ್ನು ಕೈಗೆತ್ತಿಕೊಂಡಿದೆ.

English summary
Megha Engineering And Infrastructure Has Bagged The Piped Line Project To, Two Cities Of Karnataka. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X