ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೇ33ರಷ್ಟು ಸೇಲ್ಸ್ ಕುಸಿತ, 2 ದಿನ ಉತ್ಪಾದನೆ ಸ್ಥಗಿತಗೊಳಿಸಿದ ಮಾರುತಿ

|
Google Oneindia Kannada News

ನವದೆಹಲಿ, ಸೆ. 04: ದೇಶದ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ(ಎಂಎಸ್ ಐ)ಗೆ ಆರ್ಥಿಕ ಹಿಂಜರಿತದ ಬಿಸಿ ತಟ್ಟಿದೆ. ಗುರುಗ್ರಾಮ ಹಾಗೂ ಮಾನೇಸರ್ ಘಟಕದಲ್ಲಿನ ಉತ್ಪಾದನೆಯನ್ನು ಎರಡು ದಿನಗಳ ಮಟ್ಟಿಗೆ ಸ್ಥಗಿತಗೊಳಿಸುತ್ತಿರುವುದಾಗಿ ಸೆ.4ರಂದು ಪ್ರಕಟಿಸಿದೆ.

"ಸೆ. 7 ಹಾಗೂ 9ರಂದು ಟೂಲ್ಸ್ ಡೌನ್ ಡೇ ಆಗಲಿದೆ, ಎರಡು ಘಟಕಗಳಲ್ಲಿ ಯಾವುದೇ ಕಾರು ಉತ್ಪಾದನೆ ನಡೆಸುವುದಿಲ್ಲ" ಎಂದು ಎಂಎಸ್ ಐ ಹೇಳಿದೆ.

Maruti Suzuki to halt production at Haryana plants for two days

ಆಗಸ್ಟ್ ತಿಂಗಳಿನಲ್ಲಿ ಶೇ33.99ರಷ್ಟು ಉತ್ಪಾದನೆ ಕುಸಿತ ಕಂಡಿತ್ತು. ಆಗಸ್ಟ್ ನಲ್ಲಿ 1,11,370 ಕಾರು ಉತ್ಪಾದನೆ ಮಾಡಲಾಗಿತ್ತು. ವರ್ಷದ ಹಿಂದೆ ಇದೇ ಅವಧಿಯಲ್ಲಿ 1,68,725 ಕಾರು ಉತ್ಪಾದನೆ ಮಾಡಲಾಗಿತ್ತು.

34 ವರ್ಷಗಳ ಬಳಿಕ ಮಾರುತಿ ಸುಜುಕಿ ಓಮ್ನಿ ಉತ್ಪಾದನೆ ಬಂದ್!34 ವರ್ಷಗಳ ಬಳಿಕ ಮಾರುತಿ ಸುಜುಕಿ ಓಮ್ನಿ ಉತ್ಪಾದನೆ ಬಂದ್!

ಪ್ರಯಾಣಿಕರ ವಾಹನ ಉತ್ಪಾದನೆಯಲ್ಲೂ ಕುಂಠಿತವಾಗಿದ್ದು, 2018ರ ಆಗಸ್ಟ್ ತಿಂಗಳಿನಲ್ಲಿ 1,66,161 ವಾಹನ ಉತ್ಪಾದನೆಯಾಗಿತ್ತು. 2019ರ ಆಗಸ್ಟ್ ನಲ್ಲಿ 1,10,214 ವಾಹನ ಉತ್ಪಾದನೆ ಮಾತ್ರ ಸಾಧ್ಯವಾಗಿ 33.67% ಕುಸಿತ ಕಂಡಿದೆ.

ಜುಲೈ ತಿಂಗಳಿನಲ್ಲೂ ಉತ್ಪಾದನೆ 25.15% ಕುಸಿತ ಕಂಡು 1,33,625 ಕಾರು ಮಾತ್ರ ಉತ್ಪಾದನೆ ಮಾಡಲಾಗಿತ್ತು. ಸೆ.01ಕ್ಕೆ ಬಂದಿರುವ ಮಾರಾಟ ವರದಿಯಂತೆ ಒಟ್ಟಾರೆ ಮಾರಾಟದಲ್ಲಿ 33% ಕುಸಿತ ಕಂಡು 1,06,413 ವಾಹನ ಮಾತ್ರ ಮಾರಾಟವಾಗಿದೆ. 2018ರ ಆಗಸ್ಟ್ ತಿಂಗಳಿನಲ್ಲಿ 1,58,189 ವಾಹನ ಮಾರಾಟ ಕಂಡಿತ್ತು. ಷೇರುಪೇಟೆಯಲ್ಲಿ ಇಂದು ಮಾರುತಿ ಸುಜುಕಿ ಷೇರುಗಳು ಶೇ 3ರಷ್ಟು ಕುಸಿತ ಕಂಡಿವೆ.

English summary
The country's largest carmaker Maruti Suzuki India (MSI) on September 4 said it has decided to suspend production at its Gurugram and Manesar plants in Haryana for two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X