ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

17 ವರ್ಷ ಇದೇ ಮೊದಲ ಬಾರಿಗೆ ನಷ್ಟ ಅನುಭವಿಸಿದ ಮಾರುತಿ-ಸುಜುಕಿ

|
Google Oneindia Kannada News

ನವದೆಹಲಿ, ಜುಲೈ 30: ದೇಶದ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ(ಎಂಎಸ್ ಐ)ಗೆ ಕೊರೊನಾವೈರಸ್ ನಿಂದಾಗಿ ಆರ್ಥಿಕ ಹಿಂಜರಿತದ ಬಿಸಿ ತಟ್ಟಿದೆ. ಜೂನ್ ತ್ರೈಮಾಸಿಕದಲ್ಲಿ 268.3 ಕೋಟಿ ರು ನಷ್ಟ ಅನುಭವಿಸಿದೆ.

2020-21 ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಪ್ರಯಾಣಿಕ ವಾಹನ ರಫ್ತು ಶೇ. 75ರಷ್ಟು ಇಳಿಕೆಯಾಗಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟ (ಎಸ್‌ಐಎಎಂ) ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಕೊರೊನಾ ಎಫೆಕ್ಟ್‌ : ಪ್ರಯಾಣಿಕ ವಾಹನ ರಫ್ತು ಶೇ. 75ರಷ್ಟು ಇಳಿಕೆಕೊರೊನಾ ಎಫೆಕ್ಟ್‌ : ಪ್ರಯಾಣಿಕ ವಾಹನ ರಫ್ತು ಶೇ. 75ರಷ್ಟು ಇಳಿಕೆ

ಮಾರುತಿ ಆದಾಯ ಕೂಡಾ ಇಳಿಕೆಯಾಗಿದ್ದು, ವರ್ಷದಿಂದ ವರ್ಷಕ್ಕೆ ಎಣಿಕೆಯಲ್ಲಿ 4,110.6 ಕೋಟಿ ರು ಮಾತ್ರ ಗಳಿಕೆಯಾಗಿದ್ದು, ಶೇ 78.67ರಷ್ಟು ಕುಸಿತ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 19, 273.2 ಕೋಟಿ ರು ಗಳಿಸಿತ್ತು.

Maruti Suzuki posts 1st quarterly consolidated loss in 17 yrs

ಏಪ್ರಿಲ್ -ಜೂನ್ ತ್ರೈಮಾಸಿಕ ಅವಧಿಯಲ್ಲಿ 76, 599 ವಾಹನಗಳನ್ನು ಮಾತ್ರ ಮಾರುತಿ ಮಾರಲು ಸಾಧ್ಯವಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ 4,02,600 ವಾಹನ ಮಾರಾಟ ಮಾಡಿತ್ತು. ಈ ವರ್ಷ ಮಾರಾಟದಲ್ಲಿ ಶೇ 81ರಷ್ಟು ಇಳಿಕೆಯಾಗಿದೆ. ವರ್ಷದಿಂದ ವರ್ಷಕ್ಕೆ ಪ್ರಮಾಣದಲ್ಲಿ ರಫ್ತು ಕೂಡಾ ಶೇ 66ರಷ್ಟು ಇಳಿಕೆಯಾಗಿದೆ.

English summary
Auto major Maruti Suzuki on Wednesday reported a consolidated loss of Rs 268.3 crore for the June quarter of FY21 (Q1FY21) as compared to profit of Rs 1,376.8 crore reported in the corresponding quarter last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X