ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಣ್ಣ ಕಾರುಗಳಿಗೆ ಆರು ಏರ್ ಬ್ಯಾಗ್ ಕಡ್ಡಾಯ ಆದೇಶ ಮರುಪರಿಶೀಲನೆಗೆ ಮನವಿ

|
Google Oneindia Kannada News

ನವದೆಹಲಿ, ಮೇ 31; ಸಣ್ಣ ಕಾರುಗಳಿಗೆ ಆರು ಏರ್ ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಿರುವ ಆದೇಶವನ್ನು ಮರುಪರಿಶೀಲನೆ ಮಾಡಬೇಕೆಂದು ಮಾರುತಿ ಸುಜುಕಿ ಇಂಡಿಯಾ (MSI) ಸರ್ಕಾರವನ್ನು ಕೇಳಿಕೊಂಡಿದೆ. ಸರ್ಕಾರದ ಹೊಸ ನಿಯಮದಿಂದ ಆರಂಭಿಕ ಶ್ರೇಣಿಯ, ಸಣ್ಣ ಕಾರುಗಳ ಮಾರುಕಟ್ಟೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಮುಂದೆ ದೇಶದ ಆಟೋ ಮೊಬೈಲ್ ವಲಯದ ಉದ್ಯೋಗಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಿದೆ.

ಆಟೋ ಮೇಜರ್ ಪ್ರಕಾರ ಆರಂಭಿಕ ಶ್ರೇಣಿಯ ಕಾರುಗಳ ಉತ್ಪಾದನೆ ಮೇಲೆ ಈ ಹೊಸ ನಿಯಮ ಪರಿಣಾಮ ಬೀರಲಿದೆ. ಕಳೆದ ಮೂರು ವರ್ಷಗಳಿಂದ ಸಣ್ಣ ಕಾರುಗಳು ಮಾರಾಟ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಹೊಸ ನಿಯಮದಿಂದ ಕಾರುಗಳ ಬೆಲೆಯಲ್ಲಿ ಏರಿಕೆಯಾಗಲಿದ್ದು, ದ್ವಿಚಕ್ರ ವಾಹನಗಳಿಂದ ಕಾರುಗಳಿಗೆ ಬದಲಾಗುವ ಗ್ರಾಹಕರ ಸಂಖ್ಯೆಯಲ್ಲಿ ಕುಸಿತ ಕಾಣಲಿದೆ ಎಂದಿದ್ದಾರೆ.

ಜೂನ್ 1ರಿಂದ ಮತ್ತೆ ಬೆಲೆ ಏರಿಕೆ ಬಿಸಿ, ಶ್ರೀಸಾಮಾನ್ಯ ಇತ್ತ ಗಮನಿಸು!ಜೂನ್ 1ರಿಂದ ಮತ್ತೆ ಬೆಲೆ ಏರಿಕೆ ಬಿಸಿ, ಶ್ರೀಸಾಮಾನ್ಯ ಇತ್ತ ಗಮನಿಸು!

2022ರ ಆರಂಭದಲ್ಲಿ ಭಾರತದ ರಸ್ತೆ ಸಾರಿಗೆ ಸಚಿವಾಲಯ "ಪ್ರಯಾಣಿಕರ ಸುರಕ್ಷತೆಗಾಗಿ 8 ಪ್ರಯಾಣಿಕರನ್ನು ಸಾಗಿಸಬಹುದಾದದ ಕಾರುಗಳಲ್ಲಿ ಕನಿಷ್ಠ 6 ಏರ್ ಬ್ಯಾಗ್ ಹೊಂದಿರುವುದು ಕಡ್ಡಾಯ" ಎಂದು ಹೇಳಿತ್ತು ಅಕ್ಟೋಬರ್ ನಿಂದ ಈ ನಿಯಮ ಜಾರಿಗೆ ಬರುವುದಾಗಿ ತಿಳಿಸಿತ್ತು.

 'ಭಾರತದಲ್ಲಿ ಕಾರು ತಯಾರಿಸಲ್ಲ'- ಎಲಾನ್ ಮಸ್ಕ್ ನಿಷ್ಠುರವಾಗಿ ಹೇಳಿದ್ದು ಯಾಕೆ? 'ಭಾರತದಲ್ಲಿ ಕಾರು ತಯಾರಿಸಲ್ಲ'- ಎಲಾನ್ ಮಸ್ಕ್ ನಿಷ್ಠುರವಾಗಿ ಹೇಳಿದ್ದು ಯಾಕೆ?

ಕಾರು ಮಾರಾಟದಲ್ಲಿ ಕುಸಿತ

ಕಾರು ಮಾರಾಟದಲ್ಲಿ ಕುಸಿತ

ಎಂಎಸ್‌ಐ ಅಧ್ಯಕ್ಷ ಆರ್‌. ಸಿ. ಭಾರ್ಗವ ಮಾತನಾಡಿ, "ಕಳೆದ ಹಲವು ವರ್ಷಗಳಿಂದ ಸರ್ಕಾರದ ವಿವಿಧ ನಿಯಂತ್ರಕ ಮಾನದಂಡಗಳ ಅನುಷ್ಠಾನದಿಂದ ಆರಂಭಿಕ ಶ್ರೇಣಿಯ ಕಾರುಗಳ ಬೆಲೆ ಈಗಾಗಲೇ ಗಣನೀಯವಾಗಿ ಹೆಚ್ಚಾಗಿದೆ, 2020ರ ಏಪ್ರಿಲ್ 1ರಿಂದ ಬಿಎಸ್‌4 ಎಂಜಿನ್‌ ಕಡ್ಡಾಯ ಮಾಡಿರುವುದು ಕೂಡ ಕಾರುಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ" ಎಂದರು.

ಮೆಟ್ರೋ ಪಾಲಿಟನ್ ನಗರಗಳನ್ನು ಹೊರತುಪಡಿಸಿ ದೇಶಾದ್ಯಂತ ಮಧ್ಯಮ, ಸಣ್ಣ ನಗರದ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಪರಿಣಾಮ ಬೀರಿದ್ದು, ಕಾರುಗಳ ಮಾರಾಟದಲ್ಲಿ ಕುಸಿತ ಕಂಡಿದೆ ಎಂದಿದ್ದಾರೆ.

ಉದ್ಯೋಗ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ

ಉದ್ಯೋಗ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ

ಆರು ಏರ್ ಬ್ಯಾಗ್ ನಿಯಂತ್ರಣದ ಅನುಷ್ಠಾನದೊಂದಿದೆ ಕಾರುಗಳ ಬೆಲೆ ಮತ್ತಷ್ಟು ಹೆಚ್ಚಾಗಲಿದ್ದು, ದೇಶೀಯ ಕಾರು ಉದ್ಯಮದ ಮೇಲೆ ಮತ್ತಷ್ಟು ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

"ಸಣ್ಣ ಕಾರುಗಳ ಉತ್ಪಾದನಾ ಮತ್ತು ಮಾರಾಟ ಕ್ಷೇತ್ರವು ದೇಶದಲ್ಲಿ ಅನೇಕ ಉದ್ಯೋಗಗಳನ್ನು ಸೃಷ್ಟಿಸಿದೆ. ಸರ್ಕಾರದ ಹೊಸ ನಿಯಮದ ಕಾರಣದಿಂದ ಕಾರುಗಳ ಮಾರಾಟ ಕಡಿಮೆಯಾದರೆ ಅನಿವಾರ್ಯವಾಗಿ ಕಾರುಗಳ ಉತ್ಪಾದನೆ ಕಡಿಮೆ ಮಾಡಬೇಕಾಗುತ್ತದೆ, ಇದು ಚಾಲಕರು, ನಿರ್ವಹಣೆ, ರಿಪೇರಿ, ಬಿಡಿಭಾಗಗಳ ಉತ್ಪಾದನೆ, ಮಾರಾಟ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತದೆ" ಭಾರ್ಗವ ಹೇಳಿದರು.

"ಕಳೆದ ಮೂರು ವರ್ಷಗಳಲ್ಲಿ ಆಗುತ್ತಿರುವಂತೆ ಕಾರು ಮಾರುಕಟ್ಟೆ ಕುಸಿತ ಕಂಡರೆ ಅದು ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ" ಎಂದು ಅವರು ಹೇಳಿದರು.

ಬೆಲೆ ಏರಿಕೆಗೆ ಕಾರಣವಾಗುವ ನೂತನ ನಿಯಮ

ಬೆಲೆ ಏರಿಕೆಗೆ ಕಾರಣವಾಗುವ ನೂತನ ನಿಯಮ

"ಏರ್ ಬ್ಯಾಗ್ ಕಡ್ಡಾಯ ಮಾಡಿರುವುದರಿಂದ ಆರಂಭಿಕ ಶ್ರೇಣಿಯ ಕಾರುಗಳ ಬೆಲೆಯಲ್ಲಿ 20,000-25,000 ರೂಪಾಯಿಗಳವರೆಗೆ ಹೆಚ್ಚಳವಾಗಬಹುದು, ಸಣ್ಣ ಕಾರು ಖರೀದಿ ಮಾಡುವವರಿಗೆ ಇದು ಹೊರೆಯಾಗುತ್ತದೆ" ಎಂದರು.

"ಜಗತ್ತಿನಾದ್ಯಂತ ಹೆಚ್ಚಿನ ದೇಶಗಳಲ್ಲಿ ಈ ನಿಯಂತ್ರಣ ಜಾರಿಗೆ ಬಂದಿಲ್ಲ, ಆದರೂ ಭಾರತದಲ್ಲಿ ಈ ನಿಯಮ ಜಾರಿ ಮಾಡಲಾಗುತ್ತಿದೆ ಎಂದರು. ಈ ನಿಯಮ ಜಾರಿ ಮಾಡಲು ಇದು ಸರಿಯಾದ ಸಮಯವಲ್ಲ ಕೋವಿಡ್-19 ಹೊಡೆತದಿಂದ ಈಗಷ್ಟೇ ಮಾರುಕಟ್ಟೆ ಚೇತರಿಸಿಕೊಳ್ಳುತ್ತಿದೆ. ಸರ್ಕಾರ ಹೊಸ ನಿಯಮ ಜಾರಿಗೆ ಮುನ್ನ ಮತ್ತೊಮ್ಮೆ ಪರಿಶೀಲನೆ ಮಾಡಬೇಕೆಂದು" ಭಾರ್ಗವ ಹೇಳಿದರು.

ಅಪಘಾತದಲ್ಲಿ ಸಾವು ನೋವಿನ ಸಂಖ್ಯೆ

ಅಪಘಾತದಲ್ಲಿ ಸಾವು ನೋವಿನ ಸಂಖ್ಯೆ

ಸರ್ಕಾರದ ಪ್ರಕಾರ ಏರ್ ಬ್ಯಾಗ್‌ಗಳು ಅಪಘಾತದ ಸಮಯದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಸಹಕಾರಿಯಾಗುತ್ತದೆ. ಇತ್ತೀಚಿನ ಸರ್ಕಾರಿ ಅಂಕಿ ಅಂಶಗಳ ಪ್ರಕಾರ, 2020ರಲ್ಲಿ ಎಕ್ಸ್‌ಪ್ರೆಸ್ ವೇ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಟ್ಟು 1,16,496 ರಸ್ತೆ ಅಪಘಾತಗಳು ಸಂಭವಿಸಿವೆ, ಇದರಲ್ಲಿ 47,984 ಸಾವು ವರದಿಯಾಗಿದೆ.

ಕಾರು ಚಾಲನೆಗಿಂತ ದ್ವಿಚಕ್ರ ವಾಹನ ಚಾಲನೆ ಹೆಚ್ಚು ಅಸುರಕ್ಷಿತ, ದ್ವಿಚಕ್ರ ವಾಹನದಲ್ಲಿ ಸಾವು ಸಂಭವಿಸುವ ಸಾಧ್ಯತೆಗಳು ಹೆಚ್ಚಿರಬಹುದು. ಆದರೆ ಕಾರುಗಳ ಅಪಘಾತದಲ್ಲಿ ಸಾವಿನ ಸಂಖ್ಯೆ ಕಡಿಮೆಯಿದೆ ಎಂದು ಭಾರ್ಗವ ಹೇಳಿದ್ದಾರೆ.

ಈ ರೀತಿ ಬೆಲೆ ಹೆಚ್ಚಳ ದೊಡ್ಡ, ದುಬಾರಿ ಬೆಲೆಯ ಕಾರುಗಳಿಗಿಂತ ಆರಂಭಿಕ ಬೆಲೆಯ, ಸಣ್ಣ ಕಾರುಗಳ ಮಾರುಕಟ್ಟೆ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದಿದ್ದಾರೆ.

English summary
The government's new rule of six air bags will adversely affect the market for small cars, and will likely affect the country's auto mobile sector jobs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X