ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರು ಕೊಳ್ಳುವ ಕನಸಿಗೆ ತಡೆ ಹಾಕಿದ ಮಾರುತಿ ಸುಝುಕಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 03 : ಹೊಸ ವರ್ಷದಲ್ಲಿ ಕಾರು ಕೊಳ್ಳಲು ಯೋಜನೆ ಹಾಕಿಕೊಂಡಿದ್ದರೆ ಇದು ಕಹಿ ಸುದ್ದಿ. ಮಾರುತಿ ಸುಝುಕಿ ಇಂಡಿಯಾ ಜನವರಿಯಲ್ಲಿ ಕಾರುಗಳ ಬೆಲೆಗಳನ್ನು ಹೆಚ್ಚಿಸಲಾಗುತ್ತದೆ ಎಂದು ಘೋಷಣೆ ಮಾಡಿದೆ.

ವಿವಿಧ ಮಾದರಿಯ ಕಾರುಗಳ ಬೆಲೆಗಳನ್ನು 2020ರ ಜನವರಿಯಿಂದ ಏರಿಕೆ ಮಾಡಲಾಗುತ್ತದೆ ಎಂದು ಮಾರುತಿ ಸುಝುಕಿ ಇಂಡಿಯಾ ಹೇಳಿದೆ. ಆದರೆ, ಯಾವ ಮಾದರಿಯ ಕಾರುಗಳ ಬೆಲೆ ಹೆಚ್ಚಾಗಲಿದೆ ಎಂಬ ಗುಟ್ಟನ್ನು ಕಂಪನಿ ಬಿಟ್ಟುಕೊಟ್ಟಿಲ್ಲ.

 ಅತಿ ವೇಗವಾಗಿ ಕಾರು ಓಡಿಸುತ್ತಾಳೆ ಎಂದು ಹೆಂಡತಿ ಮೇಲೆ ದೂರು ಕೊಟ್ಟ ಗಂಡ ಅತಿ ವೇಗವಾಗಿ ಕಾರು ಓಡಿಸುತ್ತಾಳೆ ಎಂದು ಹೆಂಡತಿ ಮೇಲೆ ದೂರು ಕೊಟ್ಟ ಗಂಡ

ಅರೇನಾ ಮತ್ತು ನೆಕ್ಸಾ ಎಂಬ ವಿಭಾಗಗಳಲ್ಲಿ ಮಾರುತಿ ಕಾರುಗಳನ್ನು ಮಾರಾಟ ಮಾಡುತ್ತದೆ. ಈಗ ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ಕಾರುಗಳ ಬೆಲೆಗಳನ್ನು ಏರಿಕೆ ಮಾಡಲಾಗುತ್ತದೆ ಎಂದು ಕಂಪನಿ ಹೇಳಿದೆ.

ರೈತರಿಗೆ ನೀಡದ ಪರಿಹಾರ; ಡಿಸಿ, ಎಸಿ ಕಾರು ಜಪ್ತಿಗೆ ಕೋರ್ಟ್ ಆದೇಶರೈತರಿಗೆ ನೀಡದ ಪರಿಹಾರ; ಡಿಸಿ, ಎಸಿ ಕಾರು ಜಪ್ತಿಗೆ ಕೋರ್ಟ್ ಆದೇಶ

Maruti Suzuki India Announced Increase In Prices

ಕಳೆದ ಹಲವು ವರ್ಷಗಳಿಂದ ಉತ್ಪಾದನಾ ವೆಚ್ಚ ಅಧಿಕವಾಗುತ್ತಿದೆ. ಆದ್ದರಿಂದ, ಕಾರುಗಳ ಬೆಲೆಯನ್ನು ಹೆಚ್ಚಳ ಮಾಡಬೇಕಿದೆ. ಜನವರಿ ತಿಂಗಳಿನಿಂದ ಕಾರುಗಳ ಬೆಲೆಯನ್ನು ಏರಿಕೆ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶೇ33ರಷ್ಟು ಸೇಲ್ಸ್ ಕುಸಿತ, 2 ದಿನ ಉತ್ಪಾದನೆ ಸ್ಥಗಿತಗೊಳಿಸಿದ ಮಾರುತಿಶೇ33ರಷ್ಟು ಸೇಲ್ಸ್ ಕುಸಿತ, 2 ದಿನ ಉತ್ಪಾದನೆ ಸ್ಥಗಿತಗೊಳಿಸಿದ ಮಾರುತಿ

ಅರೇನಾ ಡೀಲರ್‌ ಶಿಪ್ ಮೂಲಕ ಆಲ್ಟೋ, ವ್ಯಾಗ್ಯನಾರ್, ಸೆಲೆರಿಯೋ, ಸಿಫ್ಟ್, ಸಿಫ್ಟ್ ಡಿಸೈರ್, ಬ್ರೀಝಾ ಮುಂತಾದ ಕಾರುಗಳನ್ನು ಮಾರುತಿ ಮಾರಾಟ ಮಾಡುತ್ತಿದೆ. ನೆಕ್ಸಾದಡಿ ಇಗ್ನೀಸ್, ಬಲೇನೋ, ಎಸ್-ಕ್ರಾಸ್, ಎಕ್ಸ್‌ಎಲ್ 6 ಮುಂತಾದವುಗಳ ಮಾರಾಟ ನಡೆಯುತ್ತದೆ.

2019ರ ಅಕ್ಟೋಬರ್ ತಿಂಗಳಿನಲ್ಲಿ ಮಾರುತಿ ಸುಝುಕಿ ಇಂಡಿಯಾದ ಕಾರುಗಳ ಮಾರಾಟದಲ್ಲಿ 4.5ರಷ್ಟು ಏರಿಕೆ ಕಂಡಿತ್ತು. ಬೆಲೆಗಳು ಏರಿಕೆ ಕಂಡ ಬಳಿಕ ಜನವರಿಯಲ್ಲಿ ಮಾರಾಟ ಹೆಚ್ಚಾಗಲಿದೆಯೇ? ಎಂದು ಕಾದು ನೋಡಬೇಕು.

ನವೆಂಬರ್ ತಿಂಗಳಿನಲ್ಲಿ ಕಂಪನಿಯ ಸಣ್ಣ ಕಾರುಗಳ ಮಾರಾಟ ಕಡಿಮೆ ಇತ್ತು. ಕಾಂಪ್ಯಾಕ್ಟ್‌ ಮಾದರಿಯ ಸಿಫ್ಟ್, ಸೆಲೆರಿಯೊ, ಇಗ್ನಿಸ್, ಬಲೇನೋ, ಡಿಸೈರ್ ಮಾದರಿ ಕಾರುಗಳ ಮಾರಾಟ ಹೆಚ್ಚಳವಾಗಿತ್ತು.

ಮಾರುತಿ ಸುಝುಕಿ 17 ಮಾದರಿಯ ಕಾರುಗಳನ್ನು ಹೊಂದಿದೆ. ಜನವರಿಯಲ್ಲಿ ಇನ್ನೂ 2 ಹೊಸ ಮಾದರಿಯ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಜನವರಿಯಿಂದ ಡೀಸೆಲ್ ಕಾರುಗಳ ಬದಲು ಸಿಎನ್‌ಜಿ ಕಾರುಗಳ ಉತ್ಫಾದನೆ ಹೆಚ್ಚಿಲು ಕಂಪನಿ ಚಿಂತನೆ ನಡೆಸಿದೆ.

English summary
Maruti Suzuki India announced that it will increase the prices of its various models from January 2020. It is not specified that which vehicles price will going up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X