ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ.27ರಿಂದ ಮಾರುತಿ ಕಾರುಗಳ ಬೆಲೆಯಲ್ಲಿ ಏರಿಕೆ

|
Google Oneindia Kannada News

ಮುಂಬೈ, ಜನವರಿ 28: ಭಾರತದ ಅತಿ ದೊಡ್ಡ ಪ್ರಯಾಣಿಕರ ವಾಹನ ತಯಾರಿಕಾ ಕಂಪನಿ ಮಾರುತಿ ಸುಜುಕಿ ಎಲ್ಲ ಮಾಡಲ್ ಗಳ ಕಾರುಗಳ ಬೆಲೆಯನ್ನು ಜನವರಿ 27ರಿಂದ 1,500ದಿಂದ 8,000 ರುಪಾಯಿವರೆಗೆ (ಎಕ್ಸ್ ಶೋ ರೂಂ, ನವದೆಹಲಿ) ಏರಿಕೆ ಮಾಡಿದೆ. ಈ ಹೊಸ ದರವು ಜನವರಿ 27, 2017ರಿಂದ ಜಾರಿಗೆ ಬಂದಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ವಸ್ತುಗಳ ಬೆಲೆ, ಸಾಗಾಣಿಕೆ ವೆಚ್ಚ ಹಾಗೂ ಆಡಳಿತಾತ್ಮಕ ವೆಚ್ಚಗಳು ಏರಿಕೆ ಆಗಿರುವುದರಿಂದ ಕಾರು ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಲಾಗಿದೆ. ಜನವರಿ 1ರಂದು ವರದಿಯಾದಂತೆ ಮಾರುತಿ ಕಾರುಗಳ ಮಾರಾಟದಲ್ಲಿ ಶೇ 1ರಷ್ಟು ಕುಸಿತವಾಗಿದೆ. ಆದರೂ ಕಂಪನಿಯು ಮೂರನೇ ತ್ರೈ ಮಾಸಿಕದಲ್ಲಿ ಶೇ 47ರಷ್ಟು ಹೆಚ್ಚುವರಿ ಲಾಭವನ್ನು ದಾಖಲಿಸಿದೆ.[ಪೆಟ್ರೋಲ್ ಬಂಕಲ್ಲಿ ಗ್ರಾಹಕರ ಜೇಬಿಗೆ ಕತ್ತರಿ, ವಂಚನೆಗೆ ನಾನಾ ದಾರಿ]

Maruti Suzuki increases price of all models from Jan 27th

ಡಿಸೆಂಬರ್ ತಿಂಗಳ ಕೊನೆಗೆ ಕಂಪನಿಯ ಲಾಭವು 1,744.50 ಕೋಟಿ ರುಪಾಯಿಗೆ ಹೆಚ್ಚಳವಾಗಿದೆ. 2015-16ರ ಇದೇ ಅವಧಿಯಲ್ಲಿ ಕಂಪನಿಯು 1,183 ಕೋಟಿ ರುಪಾಯಿ ಲಾಭ ಗಳಿಸಿತ್ತು. ಪ್ರಯಾಣಿಕರ ಕಾರುಗಳ ಮಾರಾಟ ಈ ಅವಧಿಯಲ್ಲಿ ಶೇ 13.06ರಷ್ಟು ಏರಿಕೆಯಾಗಿ 19,173.1 ಕೋಟಿ ರುಪಾಯಿ ಆದಾಯ ಬಂದಿದೆ. ಡಿಸೆಂಬರ್ 31, 2015ರಲ್ಲಿ 16,957.60 ಕೋಟಿ ಆದಾಯ ಬಂದಿತ್ತು.

ಮಾರುತಿ ಸುಜುಕಿಯು 3,87,251 ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 3.5ರಷ್ಟು ಕಡಿಮೆ.

English summary
India’s largest passenger vehicle manufacturer Maruti Suzuki India announced a price increase on Friday in the range of Rs 1,500-Rs 8,014 (ex-showroom New Delhi) across all models.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X