ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹೀಂದ್ರಾ ಬಳಿಕ ಮಾರುತಿ ಸುಜುಕಿ ವಾಹನಗಳ ಬೆಲೆ ಏರಿಕೆ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 02: ದೇಶದ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆ ಮಾರುತಿ ಸುಜುಕಿ ತನ್ನ ವಿವಿಧ ವಾಹನಗಳ ಬೆಲೆಯನ್ನು ಏರಿಸಲು ನಿರ್ಧರಿಸಿದೆ. ಟಾಟಾ ಮೋಟರ್ಸ್, ಮಹೀಂದ್ರಾ ಹಾಗೂ ಮಹೀಂದ್ರಾ ನಂತರ ಮಾರುತಿ ಸುಜುಕಿ ವಾಹನಗಳ ಬೆಲೆ ಏರಿಕೆ ಮಾಡಲು ಮುಂದಾಗಿದೆ.

ಆಗಸ್ಟ್ ತಿಂಗಳಿನಲ್ಲಿ ಬೆಲೆ ಏರಿಕೆ ಪರಿಷ್ಕೃತ ಪಟ್ಟಿ ಗ್ರಾಹಕರಿಗೆ ಸಿಗಲಿದೆ. ತೈಲ ಬೆಲೆ ಏರಿಳಿತ, ವಿದೇಶಿ ವಿನಿಮಯದಲ್ಲಿ ವ್ಯತ್ಯಾಸ ಇನ್ನಿತರ ಕಾರಣಗಳನ್ನು ಸಂಸ್ಥೆ ನೀಡಿದೆ.

ಟಾಟಾ ನಂತರ ಮಹೀಂದ್ರಾ ವಾಹನಗಳ ಬೆಲೆಯಲ್ಲಿ ಭಾರಿ ಏರಿಕೆಟಾಟಾ ನಂತರ ಮಹೀಂದ್ರಾ ವಾಹನಗಳ ಬೆಲೆಯಲ್ಲಿ ಭಾರಿ ಏರಿಕೆ

ಜುಲೈ ತಿಂಗಳಿನಲ್ಲಿ ಮಾರುತಿ ಸುಜುಕಿ ವಾಹನಗಳ ಮಾರಾಟದಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. 1.64 ಲಕ್ಷ ವಾಹನಗಳನ್ನು ಮಾರಾಟ ಮಾಡಲಾಗಿದ್ದು, ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಶೇ 0.6ರಷ್ಟು ಕುಸಿತ ದಾಖಲಿಸಿದೆ. ರಫ್ತು ಕೂಡಾ ಶೇ 9.9 ರಷ್ಟು ಇಳಿಕೆ ಕಂಡಿದೆ.

Maruti Suzuki to increase prices of various model from August

ಅದರಲ್ಲೂ ಮಾರುತಿ ಸುಜುಕಿ ಪ್ರಗತಿ ಕುಂಠಿತಗೊಳ್ಳಲು ಮಿನಿ ಕಾರು ವಿಭಾಗವೇ ಕಾರಣ ಎನ್ನಬಹುದು. ಆಲ್ಟೋ, ವಾಗನ್ ಆರ್, ಮಧ್ಯಮ ಗಾತ್ರದ ಸಿಯಾಜ್, ಯುಟಿಲಿಟಿ ವಾಹನಗಳಾದ ಎರ್ಟಿಗಾ, ವಿಟಾರಾ ಬ್ರಿಜಾ. ಇತ್ಯಾದಿ ಮಾರಾಟದಲ್ಲಿ ಅಂಥಾ ಏಳಿಗೆ ಕಂಡು ಬಂದಿಲ್ಲ.

ಜನವರಿ 2018: ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆಜನವರಿ 2018: ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆ

ವರ್ಷದಿಂದ ವರ್ಷಕ್ಕೆ ಮಾರಾಟ ಹೋಲಿಕೆ
* ಆಲ್ಟೋ/ ವಾಗನ್ ಆರ್ : ಶೇ 10.9ರಷ್ಟು ಕುಸಿತ.
ಜುಲೈ 2018-37,710 ವಾಹನ ಮಾರಾಟ, 2017ರಲ್ಲಿ42,310 ವಾಹನ ಸೇಲ್

* ಸೆಲೆರಿಯೋ, ಬಲೆನೋ, ಡಿಜೈರ್, ಸ್ವಿಫ್ಟ್ : ಶೇ17.8ರಷ್ಟು ಏರಿಕೆ
ಜುಲೈ 2017ರಲ್ಲಿ 63,116 ವಾಹನಗಳು ಸೇಲ್ ಆಗಿತ್ತು, 2018ರಲ್ಲಿ 74,773 ಸೇಲ್

* ಸಿಯಾಜ್ 48 ವಾಹನ ಸೇಲ್, 2017ರಲ್ಲಿ 6,377 ಸೇಲ್ ಆಗಿತ್ತು.

* ವಿಟರಾ ಬ್ರೀಜಾ, ಎಸ್ ಕ್ರಾಸ್, ಎರ್ಟಿಗಾ : ಶೇ 4.9ರಷ್ಟು ಕುಸಿತ
2018ರಲ್ಲಿ 24,505 ವಾಹನಗಳು ಸೇಲ್, 2017ರಲ್ಲಿ 25,781 ಮಾರಾಟವಾಗಿತ್ತು.

English summary
The country's largest car maker Maruti Suzuki India today reported a marginal decline in sales at 1,64,369 units in July. Company has decided to increase prices across various models in August, citing rising commodity costs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X