ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರುತಿ ಸುಜುಕಿ ಕಾರುಗಳ ಮಾರಾಟ ಜುಲೈ ತಿಂಗಳಲ್ಲಿ ಶೇ. 2ರಷ್ಟು ಏರಿಕೆ

|
Google Oneindia Kannada News

ನವದೆಹಲಿ, ಜುಲೈ 03: ದೇಶದ ಅಗ್ರಮಾನ್ಯ ಕಾರು ತಯಾರಕ ಕಂಪನಿಗಳಲ್ಲಿ ಒಂದಾದ ಮಾರುತಿ ಸುಜುಕಿ ಕಾರುಗಳ ದೇಶೀಯ ಮಾರಾಟ ಜುಲೈ ತಿಂಗಳಿನಲ್ಲಿ ಶೇಕಡಾ 2ರಷ್ಟು ಏರಿಕೆ ಕಂಡಿದೆ.

ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಮೊದಲ ಬಾರಿಗೆ ಕಾರು ಖರೀದಿಸುತ್ತಿರುವವರ ಹಾಗೂ ಹೆಚ್ಚುವರಿ ಕಾರು ಖರೀದಿಸುತ್ತಿರುವವರ ಪ್ರಮಾಣ ಹೆಚ್ಚಾಗಿದೆ ಎಂದು ಮಾರುತಿ ಸುಜುಕಿ ಇಂಡಿಯಾ (ಎಂಎಸ್ಇ) ಹೇಳಿದೆ. ಸಾರ್ವಜನಿಕ ಸಾರಿಗೆ ಬದಲು ಜನರು ಖಾಸಗಿ ವಾಹನಗಳಿಗೆ ಆದ್ಯತೆ ನೀಡುತ್ತಿರುವುದು ಇದಕ್ಕೆ ಒಂದು ಕಾರಣವಾಗಿದೆ.

17 ವರ್ಷ ಇದೇ ಮೊದಲ ಬಾರಿಗೆ ನಷ್ಟ ಅನುಭವಿಸಿದ ಮಾರುತಿ-ಸುಜುಕಿ17 ವರ್ಷ ಇದೇ ಮೊದಲ ಬಾರಿಗೆ ನಷ್ಟ ಅನುಭವಿಸಿದ ಮಾರುತಿ-ಸುಜುಕಿ

ದೇಶೀಯ ಮಾರಾಟದಲ್ಲಿ ಶೇ. 2ರಷ್ಟು ಏರಿಕೆಯನ್ನು ಕಂಪನಿಯು ಶನಿವಾರ ಪ್ರಕಟಿಸಿದ ಬಳಿಕ ಸೋಮವಾರ ಬಿಎಸ್‌ಇಯಲ್ಲಿ ಮಾರುತಿ ಸುಜುಕಿ ಷೇರುಗಳ ಬೆಲೆ ಆರಂಭಿಕ ವಹಿವಾಟಿನಲ್ಲಿ ಶೇ .2.7 ರಷ್ಟು ಏರಿಕೆಯಾಗಿ ಇಳಿಕೆ ಕಂಡವು.

Maruti Suzuki Car Sales: Over 2 Percent Rise In July Domestic Sales

ಮಾರುತಿ ಸುಜುಕಿ ಇಂಡಿಯಾ ಶನಿವಾರ ದೇಶೀಯ ಮಾರುಕಟ್ಟೆಯಲ್ಲಿ ಪ್ರಯಾಣಿಕರು ಮತ್ತು ವಾಣಿಜ್ಯ ವಾಹನಗಳು ಸೇರಿದಂತೆ ಒಟ್ಟು 1,00,000 ವಾಹನಗಳ ಮಾರಾಟವನ್ನು ವರದಿ ಮಾಡಿದೆ. ಅದು ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಶೇಕಡಾ 1.82 ರಷ್ಟು ಏರಿಕೆಯಾಗಿದೆ.

ಒಟ್ಟು ಪ್ರಯಾಣಿಕರ ವಾಹನಗಳ ಮಾರಾಟವು ಶೇಕಡಾ 1.34 ರಷ್ಟು ಹೆಚ್ಚಳಗೊಂಡು 97,768 ವಾಹನಗಳಿಗೆ ತಲುಪಿದೆ ಎಂದು ಮಾರುಕಟ್ಟೆ ಪಾಲಿನ ಪ್ರಕಾರ ದೇಶದ ಅತಿದೊಡ್ಡ ಕಾರು ತಯಾರಕ ಹೇಳಿದೆ..

ಕೋವಿಡ್-19 ಹರಡುವುದನ್ನು ತಡೆಯಲು ರಾಷ್ಟ್ರವ್ಯಾಪಿ ಲಾಕ್‌ಡೌನ್ ಆಗಿರುವುದರಿಂದ, 2020-21ರ ತನ್ನ ಮೊದಲ ತ್ರೈಮಾಸಿಕ ವರದಿ 17 ವರ್ಷಗಳಲ್ಲೇ ಭಾರೀ ನಷ್ಟವನ್ನು ವರದಿ ಮಾಡಿದ ಕೆಲವು ದಿನಗಳ ನಂತರ ಈ ಮಾರಾಟ ವರದಿಯು ಬಂದಿದೆ.

2020-21 ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಪ್ರಯಾಣಿಕ ವಾಹನ ರಫ್ತು ಶೇ. 75ರಷ್ಟು ಇಳಿಕೆಯಾಗಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟ (ಎಸ್‌ಐಎಎಂ) ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Maruti suzuki reported a 2 per cent rise in domestic sales for the month of July.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X