ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರುತಿ ಸುಜುಕಿ ಆಲ್ಟೋ ಹೊಸ ದಾಖಲೆ: 40 ಲಕ್ಷ ಮಾರಾಟವಾದ ಭಾರತದ ಮೊದಲ ಕಾರು

|
Google Oneindia Kannada News

ನವದೆಹಲಿ, ಆಗಸ್ಟ್‌ 13: ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿಯ ಸಣ್ಣ ಮತ್ತು ಜನಪ್ರಿಯ ಕಾರು ಆಲ್ಟೊ ಹೊಸ ದಾಖಲೆ ನಿರ್ಮಿಸಿದೆ. ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (ಎಂಎಸ್ಐಎಲ್) ತನ್ನ ಪ್ರವೇಶ ಮಟ್ಟದ ಕಾರು ಆಲ್ಟೊದ ಒಟ್ಟು ಮಾರಾಟವು 40 ಲಕ್ಷ ಯುನಿಟ್ ಗಡಿ ದಾಟಿದೆ ಎಂದು ಗುರುವಾರ ತಿಳಿಸಿದೆ.

ಈ ರೀತಿಯಾಗಿ, ಆಲ್ಟೊ 4 ಮಿಲಿಯನ್ ಮಾರಾಟವನ್ನು ದಾಟಿದ ಭಾರತದ ಮೊದಲ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾರುತಿಯಿಂದ ಬಂದ ಈ ಸಣ್ಣ ಕಾರನ್ನು 20 ವರ್ಷಗಳ ಹಿಂದೆ ಬಿಡುಗಡೆ ಮಾಡಲಾಯಿತು. ಮೈಲೇಜ್ ಮತ್ತು ಕೈಗೆಟುಕುವಿಕೆಯಿಂದಾಗಿ ಈ ಕಾರು ಮಾರುಕಟ್ಟೆಯಲ್ಲಿ ನಿರಂತರ ಬೇಡಿಕೆ ಹೊಂದಿತ್ತು.

 ಭಾರತದಲ್ಲಿ ಹ್ಯುಂಡೈ ಕ್ರೆಟಾ 5 ವರ್ಷದಲ್ಲಿ 5 ಲಕ್ಷ ಮಾರಾಟ ಭಾರತದಲ್ಲಿ ಹ್ಯುಂಡೈ ಕ್ರೆಟಾ 5 ವರ್ಷದಲ್ಲಿ 5 ಲಕ್ಷ ಮಾರಾಟ

ಈ ಕಾರನ್ನು ಮೊದಲ ಬಾರಿಗೆ ಸೆಪ್ಟೆಂಬರ್ 2000 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಾಯಿತು ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ. ಆಲ್ಟೊ ಸತತ 16 ವರ್ಷಗಳಿಂದ ಭಾರತದ ಅತಿ ಹೆಚ್ಚು ಮಾರಾಟವಾದ ಕಾರು ಮತ್ತು ಇನ್ನೂ ಉತ್ತಮವಾಗಿ ಮಾರಾಟವಾಗುತ್ತಿದೆ. ಮಾರುತಿ ಆಲ್ಟೊ 2008 ರಲ್ಲಿ 1 ಮಿಲಿಯನ್ ಯುನಿಟ್‌ಗಳ ಮಾರಾಟವನ್ನು ದಾಟಿದೆ. ಅದೇ ಸಮಯದಲ್ಲಿ, ಆಲ್ಟೊ ಮಾರಾಟವು 2012 ರಲ್ಲಿ 20 ಲಕ್ಷ ಯುನಿಟ್‌ಗಳನ್ನು ದಾಟಿದೆ.

Maruti Suzuki Alto Record: First Car In India To Sell 40 Lakh Units

ಇದರ ಮಾರಾಟವು 2016 ರಲ್ಲಿ 3 ಮಿಲಿಯನ್ ಯುನಿಟ್‌ಗಳನ್ನು ತಲುಪಿದೆ. ಇತ್ತೀಚಿನ ಕ್ರ್ಯಾಶ್ ಮತ್ತು ಪಾದಚಾರಿ ಸುರಕ್ಷತಾ ಮಾನದಂಡಗಳೊಂದಿಗೆ ಬಿಎಸ್ 6 ಮಾನದಂಡಗಳನ್ನು ಪೂರೈಸಿದ ದೇಶದ ಮೊದಲ ಪ್ರವೇಶ ಮಟ್ಟದ ಕಾರು ಇದಾಗಿದೆ. ಮಾರುತಿ ಸುಜುಕಿ ಪ್ರಕಾರ, ಆಲ್ಟೊ ಭಾರತೀಯ ಕಾರು ಖರೀದಿದಾರರ ನೆಚ್ಚಿನ ಕಾರು. 76 ಪ್ರತಿಶತ ಗ್ರಾಹಕರು ಇದನ್ನು ತಮ್ಮ ಮೊದಲ ಕಾರು ಎಂದು ಆಯ್ಕೆ ಮಾಡುತ್ತಾರೆ ಎಂದು ಕಂಪನಿ ಹೇಳಿದೆ.

English summary
Maruti Suzuki all-time best-seller Alto has reached another milestone in its long history in the country. Alto has crossed a total sales of 40 lakh units becoming the first car in the country to do so.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X