• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಸ್ತೆಗಿಳಿದ ಹೊಚ್ಚ ಹೊಸ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ

|

ಬೆಂಗಳೂರು, ನವೆಂಬರ್ 21: ದೇಶದ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ(ಎಂಎಸ್ಐ) ತನ್ನ ಜನಪ್ರಿಯ ಉತ್ಪನ್ನ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಹೊಚ್ಚ ಹೊಸ ಆವೃತ್ತಿಯನ್ನು ಬುಧವಾರ(ನವೆಂಬರ್ 21)ದಂದು ಮಾರುಕಟ್ಟೆಗೆ ಪರಿಚಯಿಸಿದೆ.

ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 7.44 ಲಕ್ಷರು(ಪೆಟ್ರೋಲ್ 1.5 ಲೀ ಇಂಜಿನ್) ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ. ಕಳೆದ ವಾರ ಹೊಸ ಎರ್ಟಿಗಾ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಲಾಗಿತ್ತು. ಡೀಸೆಲ್ 1.3 ಲೀಟರ್ ಇಂಜಿನ್ ಆವೃತ್ತಿ ಬೆಲೆ 8.84 ರಿಂದ 10.9 ಲಕ್ಷ ರು ತನಕ ಇದೆ.

ಮಹೀಂದ್ರಾ ಬಳಿಕ ಮಾರುತಿ ಸುಜುಕಿ ವಾಹನಗಳ ಬೆಲೆ ಏರಿಕೆ

9.45 ಲಕ್ಷ ರು ನಿಂದ 13.9 ಲಕ್ಷ ರು ಬೆಲೆಯ ಮಲ್ಟಿ ಪರ್ಸಸ್ ವೆಹಿಕಲ್ (ಎಂಪಿವಿ) ವಿಭಾಗದಲ್ಲಿ ಹೋಂಡಾ ಬಿಆರ್ ವಿ, ಮಹೀಂದ್ರಾ ಮರಾಜೋ ಜತೆಗೆ ಮಾರುತಿ ಸುಜುಕಿ ಎರ್ಟಿಗಾ ನೇರ ಪೈಪೋಟಿ ನಡೆಸಲಿದೆ.

34 ವರ್ಷಗಳ ಬಳಿಕ ಮಾರುತಿ ಸುಜುಕಿ ಓಮ್ನಿ ಉತ್ಪಾದನೆ ಬಂದ್!

ಹೊಸ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಕಾರು (ಎಲ್ಎಕ್ಸ್ಐ, ವಿಎಕ್ಸ್ಐ, ಜೆಡ್ಎಕ್ಸ್ಐ ಮತ್ತು ಜೆಡ್ಎಕ್ಸ್ಐ+) ಎಂಬ ನಾಲ್ಕು ಪೆಟ್ರೋಲ್ ವೇರಿಯಂಟ್ (ಎಲ್‍ಡಿಐ, ವಿಡಿಐ, ಜೆಡ್‍ಡಿಐ ಮತ್ತು ಜೆಡ್‍ಡಿಐ+) ಎಂಬ ನಾಲ್ಕು ಡೀಸೆಲ್ ವೇರಿಯಂಟ್ ಮತ್ತು ವಿಎಕ್ಸ್ಐ ಎಟಿ ಹಾಗು ಜೆಡ್ಎಕ್ಸ್ಐ ಎಟಿ ಎಂಬ ಒಟ್ಟು ಹತ್ತು ವೇರಿಯಂಟ್‍ಗಳಲ್ಲಿ ಖರೀದಿಗೆ ಲಭ್ಯವಿದೆ.

ಹೊಸ ಎರ್ಟಿಗಾದಲ್ಲಿ ಹೊಸತೇನಿದೆ?

ಹೊಸ ಎರ್ಟಿಗಾದಲ್ಲಿ ಹೊಸತೇನಿದೆ?

ಹೊಸ ಎರ್ಟಿಗಾ ಎಂವಿಪಿಯಲ್ಲಿ ಪ್ರಯಾಣಿಕರ ಸುರಕ್ಷತೆ, ಸುಖ ಪ್ರಯಾಣ, ಸುಂದರ ಒಳಾಂಗಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಬಾರಿ ಎಬಿಎಸ್, ಇಬಿಡಿ, ಐಎಸ್ ಓಫಿಕ್ಸ್ ಚೈಲ್ಡ್ ಸೀಟ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಕಾರಿನ ಎಲ್ಲಾ ಮಾದರಿಗಳಲ್ಲಿ ನೀಡಲಾಗಿದೆ. ಇದಲ್ಲದೆ ಸೇಫ್ಟಿ ಸೀಟ್ ಬೆಲ್ಟ್ ರಿಮೈಂಡರ್, ಸ್ಪೀಡ್ ವಾರ್ನಿಂಗ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ಸ್ ಅನ್ನು ಒದಗಿಸಲಾಗಿದೆ.

ಪೆಟ್ರೋಳ್- ಡೀಸೆಲ್ ಮಾದರಿಯಲ್ಲಿ ಕಾರು

ಪೆಟ್ರೋಳ್- ಡೀಸೆಲ್ ಮಾದರಿಯಲ್ಲಿ ಕಾರು

ಮಾರುತಿ ಸುಜುಕಿ ಎರ್ಟಿಗಾ ಕಾರು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಆದರೆ, ಇದು ಕೇವಲ ಡೀಸೆಲ್ ಮಾದರಿಯ ಕಾರಿನಲ್ಲಿ ಮಾತ್ರ ಈ ಆಯ್ಕೆಯು ಲಭ್ಯವಿರಲಿದೆ. ಆದರೆ, ಪೆಟ್ರೋಲ್ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ವಿವಿಧ ಬಣ್ಣಗಳಲ್ಲಿ ಲಭ್ಯ

ವಿವಿಧ ಬಣ್ಣಗಳಲ್ಲಿ ಲಭ್ಯ

ಹೊಸ ತಲೆಮಾರಿನ ಮಾರುತಿ ಸುಜುಕಿ ಎರ್ಟಿಗಾ ಕಾರುಗಳು ಪರ್ಲ್ ಮೆಟಾಲಿಕ್ ಔಬರ್ನ್ ರೆಡ್, ಮೆಟಾಲಿಕ್ ಮ್ಯಾಗ್ಮಾ ಗ್ರೇ, ಪರ್ಲ್ ಮೆಟಾಲಿಕ್ ಆಕ್ಸ್ಫಾರ್ಡ್ ಬ್ಲೂ, ಪರ್ಲ್ ಆರ್ಕ್ಟಿಕ್ ವೈಟ್ ಮತ್ತು ಮೆಟಾಲಿಕ್ ಸಿಲ್ಕಿ ಗ್ರೇ ಎಂಬ ಐದು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಮಾರುತಿಯ ಜನಪ್ರಿಯ ವಾಹನ ಎರ್ಟಿಗಾ

ಮಾರುತಿಯ ಜನಪ್ರಿಯ ವಾಹನ ಎರ್ಟಿಗಾ

ಹೊಸ ಎರ್ಟಿಗಾ ತಯಾರಿಕೆಗಾಗಿ 900ಕ್ಕೂ ಅಧಿಕ ಕೋಟಿ ರು ಗಳನ್ನು ಹೂಡಿಕೆ ಮಾಡಿರುವ ಮಾರುತಿ ಸುಜುಕಿ ಪ್ರಕಾರ, ಪೆಟ್ರೋಲ್ ಆವೃತ್ತಿ 19.34 ಕಿ.ಮೀ/ಲೀಟರ್ ಹಾಗೂ ಡೀಸೆಲ್ ಆವೃತ್ತಿ 25.47 ಕಿ.ಮೀ/ಲೀಟರ್ ನೀಡಲಿದೆ. 2012ರಲ್ಲಿ ಮಾರುಕಟ್ಟೆಗೆ ಮೊದಲ ಬಾರಿಗೆ ಬಂದ ಎರ್ಟಿಗಾ ಮಾದರಿ ಕಾರುಗಾಳು ಇಲ್ಲಿ ತನಕ 4.2 ಲಕ್ಷ ಮಾರಾಟ ಕಂಡಿವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The country's largest carmaker Maruti Suzuki India (MSI) Wednesday launched an all-new version of its multi-purpose-vehicle, Ertiga with price starting at Rs 7.44 lakh, hotting up competition in the mass market MPV segment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more