ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಷೇರುಪೇಟೆ: ಸತತ ಏರಿಕೆಯ ನಡುವೆ ಸಮವಾಗಿ ಕೊನೆಗೊಂಡ ಸೆನ್ಸೆಕ್ಸ್, ನಿಫ್ಟಿ

|
Google Oneindia Kannada News

ನವದೆಹಲಿ, ಫೆಬ್ರವರಿ 10: ಭಾರತೀಯ ಷೇರುಪೇಟೆಯು ಭಾರೀ ಏರಿಳಿತಗಳ ಮಧ್ಯೆ ಬುಧವಾರ ಸಮವಾಗಿ ವಹಿವಾಟು ಕೊನೆಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 19.69 ಪಾಯಿಂಟ್ಸ್‌ ಇಳಿಕೆಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 2.8ರಷ್ಟು ಮಾತ್ರ ಇಳಿಕೆಗೊಂಡು ದಿನದ ವಹಿವಾಟು ಅಂತ್ಯಗೊಳಿಸಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 19.69 ಪಾಯಿಂಟ್‌ಗಳ ಕುಸಿತ ಕಂಡಿದ್ದು, 51309.39 ಪಾಯಿಂಟ್ಸ್‌ನೊಂದಿಗೆ ಕೊನೆಗೊಂಡಿದೆ. ಅದೇ ಸಮಯದಲ್ಲಿ, ನಿಫ್ಟಿ 2.80 ಪಾಯಿಂಟ್‌ಗಳನ್ನು ಕಳೆದುಕೊಂಡು 15106.50 ಮಟ್ಟದಲ್ಲಿ ಮುಚ್ಚಿದೆ. ಮಂಗಳವಾರ ಕೂಡ ಸೆನ್ಸೆಕ್ಸ್ 19.69 ಪಾಯಿಂಟ್ಸ್‌ಗಳ ಇಳಿಕೆ ಕಂಡಿತ್ತು.

ಷೇರುಪೇಟೆ: ಆರು ದಿನಗಳ ಲಾಭ ಕೊನೆಗೊಳಿಸಿದ ಸೆನ್ಸೆಕ್ಸ್, ನಿಫ್ಟಿಷೇರುಪೇಟೆ: ಆರು ದಿನಗಳ ಲಾಭ ಕೊನೆಗೊಳಿಸಿದ ಸೆನ್ಸೆಕ್ಸ್, ನಿಫ್ಟಿ

ಇಂದು ಒಟ್ಟು 3,125 ಕಂಪನಿಗಳು ಬಿಎಸ್‌ಇಯಲ್ಲಿ ವಹಿವಾಟು ನಡೆಸಿದ್ದು, ಈ ಪೈಕಿ ಸುಮಾರು 1,486 ಷೇರುಗಳು ನಷ್ಟ ಅನುಭವಿಸಿದರೆ, 1,476 ಷೇರುಗಳು ಲಾಭ ಕಂಡವು ಮತ್ತು ಅದೇ ಸಮಯದಲ್ಲಿ, 163 ಕಂಪನಿಗಳ ಷೇರು ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ. ಅದೇ ಸಮಯದಲ್ಲಿ, ರೂಪಾಯಿ ಮೌಲ್ಯವು 6 ಪೈಸೆಗಳಷ್ಟು ಬಲಗೊಂಡು ಇಂದು ಸಂಜೆ ಡಾಲರ್ ಎದುರು 92.84 ಕ್ಕೆ ತಲುಪಿದೆ.

Market Ends Flat Amid High Volatility: Nifty Hold 15100

ಸಿಪ್ಲಾ, ಬಜಾಜ್ ಫಿನ್‌ಸರ್ವ್, ಎಸ್‌ಬಿಐ ಲೈಫ್ ಇನ್ಶುರೆನ್ಸ್, ಎಂ ಅಂಡ್ ಎಂ ಮತ್ತು ಎಚ್‌ಡಿಎಫ್‌ಸಿ ಲೈಫ್ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಈಚರ್ ಮೋಟಾರ್ಸ್, ಭಾರ್ತಿ ಏರ್‌ಟೆಲ್, ಎಚ್‌ಡಿಎಫ್‌ಸಿ ಬ್ಯಾಂಕ್, ಟಾಟಾ ಸ್ಟೀಲ್ ಮತ್ತು ಬ್ರಿಟಾನಿಯಾ ಇಂಡಸ್ಟ್ರೀಸ್ ನಷ್ಟ ಕಂಡಿವೆ.

English summary
The benchmark indices erased all the intraday gains and ended with marginal losses, Ends Flat amid high volatility.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X