• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಷೇರುಪೇಟೆ ದಾಖಲೆ: ಮತ್ತಷ್ಟು ಎತ್ತರಕ್ಕೆ ತಲುಪಿದ ಸೆನ್ಸೆಕ್ಸ್, ನಿಫ್ಟಿ

|
Google Oneindia Kannada News

ನವದೆಹಲಿ, ಜನವರಿ 20: ಭಾರತೀಯ ಮಾರುಕಟ್ಟೆಯಲ್ಲಿ ಷೇರುಪೇಟೆಯು ಹೊಸ ದಾಖಲೆಯ ಮಟ್ಟಕ್ಕೆ ಸಾಗುತ್ತಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 393 ಪಾಯಿಂಟ್ಸ್‌ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 123 ಪಾಯಿಂಟ್ಸ್‌ ಹೆಚ್ಚಾಗಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ ಶೇಕಡಾ 0.80ರಷ್ಟು ಅಥವಾ 393.83 ಪಾಯಿಂಟ್ಸ್ ಹೆಚ್ಚಾಗಿ 49,792.12 ಪಾಯಿಂಟ್ಸ್‌ಗೆ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 123.55 ಪಾಯಿಂಟ್ಸ್‌ ಅಥವಾ ಶೇಕಡಾ 0.85ರಷ್ಟು ಹೆಚ್ಚಳಗೊಂಡು 14,644.70 ಪಾಯಿಂಟ್ಸ್‌ ದಾಖಲಾಗಿದೆ. ಇಂದು 1,553 ಷೇರುಗಳ ಏರಿಕೆ ಕಂಡಿದ್ದು, 1,407 ಷೇರುಗಳು ಕುಸಿತಗೊಂಡಿವೆ ಮತ್ತು 157 ಷೇರುಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಷೇರುಪೇಟೆ: ಸೆನ್ಸೆಕ್ಸ್‌ 800ಕ್ಕೂ ಹೆಚ್ಚು ಪಾಯಿಂಟ್ಸ್‌ ಜಿಗಿತಷೇರುಪೇಟೆ: ಸೆನ್ಸೆಕ್ಸ್‌ 800ಕ್ಕೂ ಹೆಚ್ಚು ಪಾಯಿಂಟ್ಸ್‌ ಜಿಗಿತ

ಇಂದು ಟಾಟಾ ಮೋಟಾರ್ಸ್, ಅದಾನಿ ಪೋರ್ಟ್ಸ್, ವಿಪ್ರೊ, ಟೆಕ್ ಮಹೀಂದ್ರಾ ಮತ್ತು ಮಾರುತಿ ಸುಜುಕಿ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿವೆ, ಪವರ್ ಗ್ರಿಡ್ ಕಾರ್ಪೊರೇಷನ್, ಶ್ರೀ ಸಿಮೆಂಟ್ಸ್, ಎನ್‌ಟಿಪಿಸಿ, ಗೇಲ್ ಮತ್ತು ಎಸ್‌ಬಿಐ ಲೈಫ್ ನಷ್ಟ ಅನುಭವಿಸಿದ ಷೇರುಗಳಾಗಿವೆ.

ಐಟಿ, ಆಟೋ ಮತ್ತು ಪಿಎಸ್‌ಯು ಬ್ಯಾಂಕ್ ತಲಾ ಶೇಕಡಾ 2ರಷ್ಟು ಏರಿಕೆಯಾಗುವುದರೊಂದಿಗೆ ಎಲ್ಲಾ ವಲಯ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಕೊನೆಗೊಂಡಿವೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇಕಡಾ 0.6 ರಿಂದ 1 ರಷ್ಟು ಏರಿಕೆಯಾಗಿದೆ.

English summary
Sensex was up 393.83 points or 0.80% at 49,792.12, and the Nifty was up 123.50 points or 0.85% at 14,644.70.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X