ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಚ್ ತಿಂಗಳಲ್ಲಿ ದಾಖಲೆಯ 1.23 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ

|
Google Oneindia Kannada News

ನವದೆಹಲಿ, ಏಪ್ರಿಲ್ 1: ಈ ವರ್ಷದ ಮಾರ್ಚ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. ಹಣಕಾಸು ಸಚಿವಾಲಯ ಗುರುವಾರ ಬಿಡುಗಡೆ ಮಾಡಿರುವ ದಾಖಲೆಗಳ ಪ್ರಕಾರ ಮಾರ್ಚ್ ತಿಂಗಳಲ್ಲಿ ದಾಖಲೆಯ 1.23 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಿದೆ.

'ಕಳೆದ ಆರು ತಿಂಗಳ ಏರಿಕೆ ಬಳಿಕ ಜಿಎಸ್‌ಟಿ ಆದಾಯವು 1 ಲಕ್ಷ ಕೋಟಿ ರೂ ಗಡಿ ದಾಟಿದೆ. ಈ ಅವಧಿಯಲ್ಲಿನ ಗಣನೀಯ ಏರಿಕೆಯ ಪ್ರಗತಿಯು ಸಾಂಕ್ರಾಮಿಕದ ನಂತರದ ತ್ವರಿತ ಆರ್ಥಿಕ ಚೇತರಿಕೆಯ ಸ್ಪಷ್ಟ ಸಂಕೇತವಾಗಿದೆ' ಎಂದು ಸಚಿವಾಲಯ ಹೇಳಿದೆ.

ಜಿಎಸ್‌ಟಿ ಸಂಗ್ರಹದಲ್ಲಿ ರಾಜ್ಯಕ್ಕೆ ದೇಶದಲ್ಲೇ ಎರಡನೆಯ ಸ್ಥಾನಜಿಎಸ್‌ಟಿ ಸಂಗ್ರಹದಲ್ಲಿ ರಾಜ್ಯಕ್ಕೆ ದೇಶದಲ್ಲೇ ಎರಡನೆಯ ಸ್ಥಾನ

ನಕಲಿ ಬಿಲ್ಲಿಂಗ್ ಮೇಲಿನ ಸೂಕ್ಷ್ಮ ನಿಗಾ, ಜಿಎಸ್‌ಟಿ, ಆದಾಯ ತೆರಿಗೆ ಮತ್ತು ಸುಂಕ ಐಟಿ ವ್ಯವಸ್ಥೆಗಳು ಸೇರಿದಂತೆ ಬಹು ಮೂಲಗಳ ದಾಖಲೆಗಳನ್ನು ಬಳಸಿ ಆಳವಾದ ದತ್ತಾಂಶ ವಿಶ್ಲೇಷಣೆ ನಡೆಸಿರುವುದು ಹಾಗೂ ಪರಿಣಾಮಕಾರಿ ತೆರಿಗೆ ಆಡಳಿತವು ಕಳೆದ ಕೆಲವು ತಿಂಗಳಲ್ಲಿ ತೆರಿಗೆ ಆದಾಯದಲ್ಲಿ ಸ್ಥಿರ ಏರಿಕೆಗೆ ಕಾರಣವಾಗಿವೆ ಎಂದು ಅದು ತಿಳಿಸಿದೆ.

March 2021 GST Collection At Rs 1.23 Lakh Crore: Finance Ministry

2021ರ ಮಾರ್ಚ್ ತಿಂಗಳಿನ ಜಿಎಸ್‌ಟಿ ಆದಾಯವು 1,23,902 ಕೋಟಿಯಷ್ಟು ಸಂಗ್ರಹವಾಗಿದೆ. ಅದರಲ್ಲಿ ಕೇಂದ್ರ ಜಿಎಸ್‌ಟಿ 22,973 ಕೋಟಿ ಮತ್ತು ರಾಜ್ಯ ಜಿಎಸ್‌ಟಿ 29,329 ಕೋಟಿ ರೂಪಾಯಿ. ಸಮಗ್ರ ಜಿಎಸ್‌ಟಿಯು ಸರಕುಗಳ ಆಮದಿನಿಂದ ಸಂಗ್ರಹಿಸಿದ 31,097 ಕೋಟಿರೂ ಸೇರಿದಂತೆ 62,842 ರೂಪಾಯಿ ಇದೆ. ಹಾಗೆಯೇ ಸೆಸ್‌ನಲ್ಲಿ 935 ಕೋಟಿ ರೂಪಾಯಿ ಸರಕು ಆಮದು ಸಂಗ್ರಹ ಸೇರಿ 8,757 ಕೋಟಿ ರೂಪಾಯಿ ಸಂಗ್ರಹವಾಗಿದೆ.

'2021ರ ಮಾರ್ಚ್ ತಿಂಗಳಲ್ಲಿ ಸಂಗ್ರಹವಾದ ಜಿಎಸ್‌ಟಿ ಆದಾಯವು ಈ ತೆರಿಗೆ ಪದ್ಧತಿ ಜಾರಿಗೆ ಬಂದ ಸಂದರ್ಭದಿಂದ ಈವರೆಗಿನ ಅತ್ಯಧಿಕ ಮೊತ್ತವಾಗಿದೆ. ಕಳೆದ ಐದು ತಿಂಗಳಿನಿಂದ ಜಿಎಸ್‌ಟಿ ಆದಾಯದಲ್ಲಿ ನಾವು ಚೇತರಿಕೆಯ ಹಂತದಲ್ಲಿದ್ದೇವೆ. ಕಳೆದ ವರ್ಷ ಇದೇ ತಿಂಗಳಿಗೆ ಹೋಲಿಸಿದರೆ ಈ ಬಾರಿಯ ಜಿಎಸ್‌ಟಿ ಸಂಗ್ರಹ ಶೇ 27ರಷ್ಟು ಅಧಿಕ' ಎಂದು ಸಚಿವಾಲಯ ತಿಳಿಸಿದೆ.

English summary
Finance ministry released the data of March 2021 GST collection with all time high ar at Rs 1.23 lakh crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X