ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಶೀಲ್ ಮಂತ್ರಿಯಿಂದ 1350 ಕೋಟಿ ವಂಚನೆ..!

|
Google Oneindia Kannada News

ಬೆಂಗಳೂರು, ಜೂನ್ 26: ಸಿಲಿಕಾನ್ ಸಿಟಿ ಬೆಂಗಳೂರು ಹಣವನ್ನು ಸಂಪಾದನೆ ಮಾಡುವುದು ಎಷ್ಟು ಕಷ್ಟ ಎಂದು ತಿಳಿಸುತ್ತದೆ. ಹಣವನ್ನು ಕೂಡಿಟ್ಟು ಮನೆ ಮಾಡಿಕೊಳ್ಳವು ಆಸೆಗೆ ಸಾಕಷ್ಟು ಕಷ್ಟ ಪಡಬೇಕು. ಮಂತ್ರಿ ಡೆವೆಲಪರ್ಸ್ ಸಿಎಂಡಿ ಸುಶೀಲ್ ಮಂತ್ರಿಯ ಮೋಸಕ್ಕೆ ಕೆಲವು ಕುಟುಂಬಗಳು ಹೈರಾಣಾಗಿ ಹೋಗಿವೆ.

ವಿದೇಶಿ ಹಣ ವಿನಿಮಯ ಕಾಯ್ದೆಯ ಅಡಿಯಲ್ಲಿ ಈಗಾಗಲೇ ಸಿಎಂಡಿ ಸುಶೀಲ್ ಮಂತ್ರಿಯನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಅಧಿಕಾರಿಗಳು ಸುಶೀಲ್ ಅನ್ನು ತೀವ್ರವಾದ ವಿಚಾರಣೆಗೆ ಒಳಪಡಿಸಿದ್ದರು. ಹಣಕಾಸಿ ವಿಚಾರದಲ್ಲಿ ಮತ್ತು ತೆರಿಗೆ ವಂಚನೆಯನ್ನು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದ ಕಾರಣದಿಂದಾಗಿ ಬಂಧಿಸಿದ್ದಾರೆ.

ಕೋಟಿ ಸಂಪಾದನೆ ಮಾಡಿದ್ದರು ಕಷ್ಟ ಪಟ್ಟು ದುಡಿದವರ ಹಣ ತಿಂದು ತೇಗಿದ್ದ. ಹಣ ಕೇಳಲು ಹೋದವರಿಗೆ ಕೆಟ್ಟದಾಗಿ ಬೈಯ್ದು ಹೊರಗೆ ಹಾಕುತ್ತಿದ್ದ ಇದ್ದ. ಕಷ್ಟು ಪಟ್ಟು ದುಡಿದವರ ಶಾಪವೋ ಏನೋ ಮಂತ್ರಿ ಡವಲಪರ್ಸ್‌ನ ಸಿಎಂಡಿ ಸುಶೀಲ್ ಮಂತ್ರಿಯನ್ನು ಇಡಿ ಬಂಧಿಸಿದೆ. ಆತ ವಂಚನೆ ಮಾಡಿರೋದು ಒಂದಲ್ಲ ಎರಡಲ್ಲ ಬರೋಬರಿ 1356 ಕೋಟಿ ಹಣ.

ಕಂಪನಿ ಸೇರಿ 9 ಜನರ ಮೇಲಿದ್ದ ಆರೋಪ

ಕಂಪನಿ ಸೇರಿ 9 ಜನರ ಮೇಲಿದ್ದ ಆರೋಪ

ಇಡಿ ಅಧಿಕಾರಿಗಳು ಸುಶೀಲ್ ಮಂತ್ರಿಯನ್ನು ಏಕಾಏಕಿ ಬಂಧಿಸಿಲ್ಲ. ಸಾಕಷ್ಟು ಸಾಕ್ಷಿ ಪುರಾವೆಯನ್ನು ಕಲೆಹಾಕಿದೆ. ಸುಶೀಲ್ ಮಂತ್ರಿ, ಮಂತ್ರಿ ಡೆವಲಪರ್ಸ್ ಸೇರಿದಂತೆ 9 ಜನರ ಮೇಲೆ 2020 ಆಗಸ್ಟ್ 8ರಂದೇ ದೂರು ದಾಖಲಾಗಿದೆ. ಧನಂಜಯ್ ಸೇರಿದಂತೆ 18 ಜನ ದೂರನ್ನು ನೀಡಿದ್ದರು. ಇದೇ ವಿಚಾರದಲ್ಲಿ ತನಿಖೆಯು ನಡೆದಿತ್ತು.

ಫೋಜಿ ಸ್ಕೀಂ ಅಂತೆ ಹಣವನ್ನು ವಾಪಸ್ಸು ಕೊಡಲು ಆಫರ್

ಫೋಜಿ ಸ್ಕೀಂ ಅಂತೆ ಹಣವನ್ನು ವಾಪಸ್ಸು ಕೊಡಲು ಆಫರ್

ತನ್ನ ಕಬಂಧ ಬಾಹುಗಳನ್ನು ಇಡೀ ಬೆಂಗಳೂರಿನಲ್ಲಿ ಚಾಚಬೇಕು ಅಂತ ಕನಸು ಕಂಡವನು ಸುಶೀಲ್ ಪಾಂಡುರಂಗ ಮಂತ್ರಿ. ಆ ಆಸೆ ಈಡೇರಿಸಿಕೊಳ್ಳಲು ಕೊಳ್ಳಲು ಹಿಡಿದಿದ್ದು ಅಕ್ರಮದ ಹಾದಿ. ನಾನು ಪ್ಲಾಟ್ ಕೊಡುವೆ, ನಿವೇಶನ ಕೊಡುವೆ ಅಂತ ಸುಶೀಲ್ ಬರೋಬರಿ 1200 ಕುಟುಂಬಕ್ಕೆ ಆಸೆ ತೋರಿಸಿ 1350 ಕೋಟಿ ಹಣವನ್ನು ಪಡೆದುಕೊಂಡಿದ್ದಾನೆ. ತಲೆಗೊಂದು ಸೂರು ಸಿಗುತ್ತದೆ ಅಂತ ಆಸೆ ಪಟ್ಟ ಮಧ್ಯಮ ವರ್ಗದ ಜನ 1350 ಕೋಟಿ ಹಣವೂ ಕೂಡ ನೀಡಿದ್ದಾರೆ. ಸುಶೀಲ್ ಮಂತ್ರಿ ಜನರಿಗೆ ನಂಬಿಕೆ ದ್ರೋಹ ಮಾಡಿ ಮನೆ ಹಾಗಿರುತ್ತದೆ ಹೀಗೆ ಇರುತ್ತದೆ ಅಂತ ನಕಲಿ ಫೋಟೋಗಳನ್ನು ತೋರಿಸಿ ಮನೆಯನ್ನು ಜನರಿಗೆ ನೀಡಿಯೇ ಇರಲಿಲ್ಲ. ಏಳರಿಂದ ಹತ್ತು ವರ್ಷಗಳ ಹಿಂದೆಯೇ ಹಣ ಕಟ್ಟಿದದ್ದರು ಸುಶೀಲ್ ಅವರಿಗೆ ಇದೂವರೆಗೂ ಮನೆಯನ್ನು ನೀಡಿಯೇ ಇಲ್ಲ.

ಒಂದು ಕಡೆ ಹಣ ತೆಗೆದು ಮತ್ತೊಂದು ಕಡೆ ಹೂಡಿಕೆ

ಒಂದು ಕಡೆ ಹಣ ತೆಗೆದು ಮತ್ತೊಂದು ಕಡೆ ಹೂಡಿಕೆ

ಇನ್ನು ಜನರ ಬಳಿಯಲ್ಲಿ ವಸೂಲಿ ಮಾಡಿರೋ ಹಣವನ್ನು ತನ್ನ ವೈಯಕ್ತಿಕ ಕಾರಣಕ್ಕೆ ಬಳಸಿಕೊಂಡಿರೋದು ಸಾಬೀತಾಗಿದೆ. ಅಲ್ಲದೇ, ಫೋಜಿ ಸ್ಕೀಂ ಅಂತೆಯೇ buy-back ಅಡಿಯಲ್ಲಿ ಅಕ್ರಮ ಮಾಡಿರೋದು ಸಾಬೀತಾಗಿದೆ. ಅಲ್ಲದೇ ಹೂಡಿಕೆದಾರರ ಹಣವನ್ನು ಮತ್ತೊಂದು ಕಡೆಗೆ ಹೂಡಿಕೆ ‌ಮಾಡೋದು. ಅಲ್ಲಿ ಇಲ್ಲಿ ಬೇರೊಂದು ಪ್ರಾಪರ್ಟಿ ಖರೀದಿ ಮಾಡಿರೋದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಅಲ್ಲದೇ ವೈಯಕ್ತಿಕ ದುರ್ಬಳಕೆಯು ಆಗಿದೆ ಎನ್ನುವ ಆರೋಪಗಳು ಕೇಳಿಬಂದಿದೆ.

ಹವಾಲ ಹಣದ ವರ್ಗಾವಣೆ ಬಗ್ಗೆ ತನಿಖೆ ಆಗಬೇಕು

ಹವಾಲ ಹಣದ ವರ್ಗಾವಣೆ ಬಗ್ಗೆ ತನಿಖೆ ಆಗಬೇಕು

ಇನ್ನು ಇಡಿ ಸುಶೀಲ್ ವಿಚಾರಣೆಗೆ ಒಳಪಡಿಸಿದಾಗ ಸುಶೀಲ್ ಯಾವುದೇ ರೀತಿಯ ಸ್ಪಷ್ಟವಾಗಿ ಉತ್ತರ ನೀಡಿಲ್ಲ. ಹಣ ಎಲ್ಲಿ ಹೋಯಿತು, ಎಲ್ಲಿ ಹೂಡಿಕೆ ಮಾಡಲಾಗಿದೆ ಯಾವುದೇ ಉತ್ತರ ಕೊಟ್ಟಿಲ್ಲ. 5000 ಕೋಟಿಯಲ್ಲಿ 1000 ಕೋಟಿಗೆ ಸರಿಯಾದ ಲೆಕ್ಕವನ್ನೇ ನೀಡುತ್ತಿಲ್ಲ ಎಂಬ ಮಾಹಿತಿ ಇದೆ. ಸದ್ಯ ಸುಶೀಲ್ ಮಂತ್ರಿ ಇಡಿ ವಶದಲ್ಲಿದ್ದಾರೆ. 10 ದಿನ ವಶಕ್ಕೆ ಪಡೆದಿರೋ ಇಡಿ ತನಿಖೆಯನ್ನು ಮಂದುವರೆಸಿದೆ.

English summary
Enforcement Directorate has Arrested the CMD Sushil Mantri of Manthri Developers. He and his associates cheated 1356 crore for 1200 people, Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X