ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಸಾಂನ ಮನೋಹರಿ ಗೋಲ್ಡ್ ಚಹಾ ಬೆಲೆ 1 ಕೆ.ಜಿಗೆ 1 ಲಕ್ಷ ರು!

|
Google Oneindia Kannada News

ಗುವಾಹತಿ, ಡಿಸೆಂಬರ್ 15: ದೇಶದ ಐತಿಹಾಸಿಕ ಜನಪ್ರಿಯ ಮನೋಹರಿ ಗೋಲ್ಡ್ ಟೀ ದಾಖಲೆಯ ಬೆಲೆಗೆ ಹರಾಜಾಗಿದ್ದು ಪ್ರತಿ ಕೆಜಿಗೆ 1 ಲಕ್ಷ ರೂ ಬೆಲೆ ಪಡೆದುಕೊಂಡಿದೆ. ಈ ಮೂಲಕ ತನ್ನ ಈ ಹಿಂದಿನ ದಾಖಲೆಯನ್ನು ಮುರಿದಿದೆ. ಅಸ್ಸಾಂನಲ್ಲಿ ವಿಶಿಷ್ಟ ತಳಿ ಎನಿಸಿಕೊಂಡಿರುವ ಮನೋಹರಿ ಗೋಲ್ಡ್ ಟೀ ಮಂಗಳವಾರದಂದು ಗುವಾಹಟಿಯಲ್ಲಿ ಟೀ ಹರಾಜು ಕೇಂದ್ರದಲ್ಲಿ 1 ಕೆಜಿಗೆ 1 ಲಕ್ಷ ರೂ.ಗೆ ಮಾರಾಟವಾಗುವ ಮೂಲಕ ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದೆ.

"ಮನೋಹರಿ ಗೋಲ್ಡ್ ಬಹಳ ವಿಶೇಷವಾದ ಚಹಾವಾಗಿದೆ. ಈ ಉತ್ಪಾದನೆ ರೀತಿಯೇ ವಿಶೇಷವಾಗಿದೆ. ಸಿಟಿಸಿ ಟೀಯ ಹೊರತಾಗಿ ವೈಟ್ ಟೀ, ಗ್ರೀನ್ ಟೀ, ಯೆಲ್ಲೋ ಟೀ ಹೀಗೆ ವಿವಿಧ ರೀತಿಯ ಟೀ ತಯಾರಿಸಲು ಆರಂಭಿಸಿದ್ದೇವೆ. ಗುವಾಹಟಿ ಟೀ ಹರಾಜು ಕೇಂದ್ರದಲ್ಲಿ ಮನೋಹರಿ ಪ್ರತಿ ಕೆಜಿಗೆ 1 ಲಕ್ಷ ರೂ.ಗೆ ಮಾರಾಟವಾಗಿದೆ ಎಂದು ಈಶಾನ್ಯ ಟೀ ಅಸೋಸಿಯೇಷನ್ ​​(NETA) ಸಲಹೆಗಾರ ಬಿದ್ಯಾನಂದ ಬರ್ಕಕೋಟಿ ಹೇಳಿದರು.

ಸತತ ಮೂರನೇ ವರ್ಷ ದಾಖಲೆ

ಸತತ ಮೂರನೇ ವರ್ಷ ದಾಖಲೆ

"ವಿಶೇಷ ಚಹಾ, ಬಿಳಿ ಚಹಾ, ಊಲಾಂಗ್ ಚಹಾ, ಹಸಿರು ಚಹಾ, ಹಳದಿ ಚಹಾಕ್ಕೆ ಬೇಡಿಕೆಯಿದೆ. ಆದ್ದರಿಂದ ನಾವು ಅಂತಹ ಚಹಾದ ಉತ್ಪಾದನೆಯನ್ನು ಹೆಚ್ಚಿಸಲು ಯೋಜಿಸುತ್ತಿದ್ದೇವೆ. ಇದರಿಂದ ನಾವು ಹೆಚ್ಚಿನ ಹಣವನ್ನು ಪಡೆಯುತ್ತೇವೆ ಮತ್ತು ಸಣ್ಣ ರೈತರಿಗೆ ಇದರಿಂದ ಲಾಭವಾಗಲಿದೆ ಎಂದು ಅವರು ಹೇಳಿದರು.

2020 ರಲ್ಲಿ, ಗುವಾಹಟಿ ಟೀ ಹರಾಜು ಕೇಂದ್ರದಲ್ಲಿ ಪ್ರತಿ ಕೆಜಿಗೆ 75,000 ರೂ.ಗೆ ಚಹಾವನ್ನು ಹರಾಜು ಮಾಡಲಾಯಿತು, ಇದು ಸತತ ಮೂರನೇ ವರ್ಷ ದಾಖಲೆಯನ್ನು ಸೃಷ್ಟಿಸಿದೆ.

ಹಿಂದಿನ 2018 ರಲ್ಲಿ, ಮನೋಹರಿ ಗೋಲ್ಡ್ ಟೀ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರತಿ ಕಿಲೋಗ್ರಾಂಗೆ 39,001 ರೂ.ಗೆ ಮಾರಾಟವಾಯಿತು ಮತ್ತು 2019 ರಲ್ಲಿ ಎಲ್ಲಾ ದಾಖಲೆಗಳನ್ನು ಮುರಿದು, ಪ್ರತಿ ಕಿಲೋಗ್ರಾಂಗೆ 50,000 ರೂ.ಗೆ ಮಾರಾಟವಾಯಿತು.

ಮನೋಹರಿ ಟೀ ಎಸ್ಟೇಟ್ ಮಾಲೀಕ ರಾಜನ್ ಲೋಹಿಯಾ

ಮನೋಹರಿ ಟೀ ಎಸ್ಟೇಟ್ ಮಾಲೀಕ ರಾಜನ್ ಲೋಹಿಯಾ

ಮನೋಹರಿ ಟೀ ಎಸ್ಟೇಟ್ ಮಾಲೀಕ ರಾಜನ್ ಲೋಹಿಯಾ ಪ್ರತಿಕ್ರಿಯಿಸಿ, "ನಾವು ನಿರ್ದಿಷ್ಟ ಗ್ರಾಹಕರು ಮತ್ತು ನಿರ್ದಿಷ್ಟ ಜನರ ಬೇಡಿಕೆಯನ್ನು ಆಧರಿಸಿ ಈ ರೀತಿಯ ಪ್ರೀಮಿಯಂ ಗುಣಮಟ್ಟದ ವಿಶೇಷ ಚಹಾ ಎಲೆಗಳನ್ನು ತಯಾರಿಸುತ್ತೇವೆ" ಎಂದು ಹೇಳಿದರು. ಇದನ್ನು ಮನೋಹರಿ ಗೋಲ್ಡ್ ಎಂದು ಬ್ರಾಂಡ್ ಮಾಡಲಾಗಿದೆ ಎಂದು ಕಂಪನಿಗೆ ಸಂಬಂಧಿಸಿದ ಇನ್ನೊಬ್ಬ ಅಧಿಕಾರಿ ಹೇಳಿದ್ದಾರೆ. ದಿಬ್ರುಗಢ್ ಜಿಲ್ಲೆಯ ಗುವಾಹಟಿ ಮೂಲದ ಸಗಟು ವ್ಯಾಪಾರಿ ಸೌರಭ್ ಟೀ ಟ್ರೇಡರ್ಸ್ ಈ ಚಹಾವನ್ನು ಖರೀದಿಸಿದೆ ಎಂದು ಅವರು ಹೇಳಿದರು.

ಮನೋಹರಿ ಚಹಾ ವಿಶೇಷತೆ

ಮನೋಹರಿ ಚಹಾ ವಿಶೇಷತೆ

ಈ ರೀತಿಯ ಚಹಾದ ಎಲೆಗಳು ಪ್ರಕಾಶಮಾನವಾದ ಹಳದಿ ಬಣ್ಣವನ್ನು ಹೊಂದಿರುತ್ತವೆ ಮತ್ತು ಅದ್ಭುತವಾದ ರುಚಿಯನ್ನು ಹೊಂದಿರುತ್ತವೆ. ಎಂಎಲ್ ಮಹೇಶ್ವರಿ, ಸಿಇಒ, ಸೌರಭ್ ಟೀ ಟ್ರೇಡರ್ಸ್ ಪ್ರತಿಕ್ರಿಯಿಸಿ, "ಈ ನಿರ್ದಿಷ್ಟ ಚಹಾಕ್ಕೆ ಹೆಚ್ಚಿನ ಬೇಡಿಕೆಯಿದೆ ಮತ್ತು ಅದರ ಉತ್ಪಾದನೆಯು ತುಂಬಾ ಕಡಿಮೆಯಾಗಿದೆ. ಈ ವರ್ಷ ಮನೋಹರಿ ಟೀ ಎಸ್ಟೇಟ್ ಕೇವಲ 1 ಕೆಜಿ ಹರಾಜು ಮಾಡಿದೆ. ನಾವು ಅದನ್ನು ತೆಗೆದುಕೊಂಡಿದ್ದೇವೆ." ಇದರಿಂದ ಹಲವು ಆರೋಗ್ಯಕಾರಿ ಗುಣಗಳು ಇವೆ ಎಂದು ಮಹೇಶ್ವರಿ ತಿಳಿಸಿದರು.

"ನಾವು ಈ ಚಹಾವನ್ನು ಖರೀದಿಸಲು ಬಹಳ ಸಮಯದಿಂದ ಪ್ರಯತ್ನಿಸುತ್ತಿದ್ದೆವು, ಆ ತೋಟದ ಮಾಲೀಕರು ಅದನ್ನು ನಮಗೆ ಖಾಸಗಿಯಾಗಿ ಮಾರಾಟ ಮಾಡಲು ನಿರಾಕರಿಸಿದರು ಮತ್ತು ಅದನ್ನು ಹರಾಜು ಮಾಡಲು ನಿರ್ಧರಿಸಿದರು. ಆದರೆ, ನಾವು ಅದೃಷ್ಟವಂತರು. ಹರಾಜು ನಡೆದಾಗ ನಾವು ಅದನ್ನು ಖರೀದಿಸಲು ಸಾಧ್ಯವಾಯಿತು,'' ಎಂದು ಮಹೇಶ್ವರಿ ಹೇಳಿದರು.

ಭಾರತದಲ್ಲಿ ಶೇ.83ರಷ್ಟು ಜನ ಟೀ ಸೇವನೆ

ಭಾರತದಲ್ಲಿ ಶೇ.83ರಷ್ಟು ಜನ ಟೀ ಸೇವನೆ

ಸಿಪಾಯಿ ಧಂಗೆ ನಾಯಕ, ಅಸ್ಸಾಂನಲ್ಲಿ ಮೊಟ್ಟಮೊದಲ ಚಹಾ ಬೆಳೆದ ಮಣಿರಾಮ್ ದೆವಾನ್ ಅವರ ಜನ್ಮದಿನ( ಏ.17) ದಂದು ಚಹಾ ಸೇವನೆ ಬಗ್ಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಭಾರತ ಈಗ ಕಪ್ಪು ಚಹಾ ಉತ್ಪಾದನೆ ಹಾಗೂ ಗ್ರಾಹಕನಾಗಿ ಅಗ್ರಗಣ್ಯ ಸ್ಥಾನದಲ್ಲಿದೆ. ಭಾರತದಲ್ಲಿ ಶೇ.83ರಷ್ಟು ಜನ ಟೀ ಸೇವಿಸುತ್ತಾರೆ. ಕುಡಿಯುವ ನೀರಿನ ನಂತರ ಅತ್ಯಂತ ಕಡಿಮೆ ದರದಲ್ಲಿ ಸಿಗುವ ಪಾನೀಯ ಎಂದು ಚಹಾವನ್ನು ಪರಿಗಣಿಸಲಾಗುತ್ತಿದೆ.

English summary
Breaking its own record, Manohari Gold Tea, a rare variety of tea in Assam has once again created history by being sold for Rs 1 lakh per kg at the Guwahati Tea Auction Centre on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X