• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಕರ್ಷಕ ದರದಲ್ಲಿ ನಿಸರ್ಗ ಸ್ನೇಹಿ ಅಪಾರ್ಟ್ಮೆಂಟ್ ಮನಾ ಫಾರೆಸ್ಟಾ

ಇಟ್ಟಿಗೆ, ಸಿಮೆಂಟ್, ಕಲ್ಲು, ಮರಳಿನಿಂದ ಕೂಡಿದ ಕಟ್ಟಡಕ್ಕಿಂತ ಸದಾ ಉಸಿರಾಟ ನಡೆಸುವ ಅಪಾರ್ಟ್ಮೆಂಟ್ ಮಾದರಿಯನ್ನು ಇದೇ ಮೊದಲ ಬಾರಿಗೆ ಭಾರತದಲ್ಲಿ ನಿರ್ಮಿಸಲಾಗಿದೆ. ಮನಾ ಫಾರೆಸ್ಟಾ ಯೋಜನೆ ಸಂಪೂರ್ಣ ಪರಿಸರಸ್ನೇಹಿ ಕಟ್ಟಡವೆನಿಸಿದ್ದು, ಭಾರತದ ಮೊದಲ ವರ್ಟಿಕಲ್ ಅರಣ್ಯವುಳ್ಳ ಕಟ್ಟಡ ಎನಿಸಿಕೊಂಡಿದೆ.

ಪ್ರತಿಯೊಬ್ಬರಿಗೂ ಸ್ವಂತ ಮನೆಯನ್ನು ಹೊಂದುವ ಕನಸು ಇದ್ದೇ ಇರುತ್ತದೆ. ಜೊತೆಗೆ ಪರಿಸರ ಮಾಲಿನ್ಯ ತಗ್ಗಿಸುವ ಇಚ್ಛೆಯೂ ಇರುತ್ತದೆ. ಮನೆಯೊಂದಿಗೆ ಪ್ರತಿಯೊಬ್ಬರಿಗೂ ಪ್ರತ್ಯೇಕ ಬಾಂಧವ್ಯ ಇರುತ್ತದೆ. ಪರಿಸರ ಹಾಗೂ ಮನೆ ಎರಡನ್ನೂ ಸಮ್ಮಿಲನಗೊಳಿಸಿದ ಯೋಜನೆಯೇ ಮನ ಫಾರೆಸ್ಟಾ.

ಕಟ್ಟಡಗಳನ್ನು ಪರಿಸರದೊಂದಿಗೆ ಹೆಚ್ಚು ಹೊಂದಿಕೊಳ್ಳಲು ನಿರ್ಮಿಸಲಾಗಿದ್ದು, ಜನರ ಆಶೋತ್ತರಕ್ಕೆ ಅನುಗುಣವಾಗಿ ಪರಿಸರ ಸ್ನೇಹಿ ಜೀವನವನ್ನು ಸಾಗಿಸಲು ಸೂಕ್ತವಾಗಿಸಲಾಗಿದೆ. ಮನೆ ಹಾಗೂ ಮನೆಯ ಜೊತೆಗೆ ನೀವು ಬಯಸುವ ಪರಿಸರವನ್ನು ಒದಗಿಸುವ ಸುಂದರ ಪರಿಸರ ಸ್ನೇಹಿ ವಾಸ್ತುಶಿಲ್ಪದಿಂದ ನಿರ್ಮಿಸಲಾದ ಮನಾ ಫಾರೆಸ್ಟಾ ಯೋಜನೆಯು ಆಕರ್ಷಣೀಯವಾಗಿದೆ. ಬೆಂಗಳೂರಿನ ಸರ್ಜಾಪುರ ರಸ್ತೆಯ ದೊಡ್ಡಕನ್ನೇಲಿಯಲ್ಲಿ ಮೊದಲ ಮನಾ ಲಂಬ ಅರಣ್ಯ(vertical forest) ವಸತಿ ಸಮುಚ್ಚಯವೂ ನಿಮ್ಮ ಅಗತ್ಯ, ಪರಿಸರಕ್ಕೆ ಹೊಂದಿಕೊಳ್ಳಬಹುದಾದ ಅಪಾರ್ಟ್ಮೆಂಟ್ ಗಳೆನಿಸಿವೆ.

Mana Foresta Project: India’s first Vertical Forest Tower

ಪ್ರಕೃತಿಗೆ ಹತ್ತಿರವಿರುವ ನಿರ್ಮಾಣ ಹೊಂದಿರುವ ಮನ ಫಾರೆಸ್ಟಾನಲ್ಲಿ14 ಅಂತಸ್ತಿನ ಕಟ್ಟಡಗಳು ಮರಗಳು, ಬಳ್ಳಿಗಳು ಮತ್ತು ಪೊದೆಗಳಿಂದ ಕೂಡಿದೆ. ಪ್ರತಿಯೊಂದು ಅಪಾರ್ಟ್ಮೆಂಟ್ ತನ್ನದೇ ಆದ ಪ್ರತ್ಯೇಕ ಉದ್ಯಾನವನ್ನು ಹೊಂದಿದೆ. ಲಂಬ ಅರಣ್ಯ ಕಟ್ಟಡದ ಜೊತೆಗೆ ನಿಮ್ಮ ಜಾಗದಲ್ಲಿ ನೀವು ಗಿಡ ಮತ್ತು ಸಸ್ಯಗಳನ್ನು ಬೆಳೆಸಬಹುದು. ಇದಲ್ಲದೆ, ಆಂತರಿಕ ವಾಸಸ್ಥಳವನ್ನು ಮಾಲಿನ್ಯ, ಧೂಳು ಮತ್ತು ಶಬ್ದದಿಂದ ರಕ್ಷಿಸಲು ಮತ್ತು ಪರಿಸರ ಸ್ನೇಹಿ ಜಗತ್ತಿಗೆ ನಿಮ್ಮನ್ನು ಕೊಂಡೊಯ್ಯುವಂತೆ ಅಪಾರ್ಟ್ಮೆಂಟ್ ಗಳನ್ನು ವಿನ್ಯಾಸಗೊಳಿಸಲಾಗಿದೆ.

ಒಂದು ಕಡೆ ಹೆಚ್ಚಾಗುತ್ತಿರುವ ಜಾಗತಿಕ ತಾಪಮಾನ ಮತ್ತೊಂದೆಡೆ ಕೋವಿಡ್ 19 ಸೋಂಕಿನ ಭೀತಿ ನಡುವೆ ನಾಗರಿಕರಿಗೆ ಪರಿಸರ ಸ್ನೇಹಿ ವಾಸಸ್ಥಳ ಅತ್ಯಗತ್ಯ. ಸೂಕ್ತವಾದ ಸೂರ್ಯನ ಬೆಳಕು, ತಾಜ ಗಾಳಿ ಮತ್ತು ಹಸಿರು ಮನೋಲ್ಲಾಸ ಮಾತ್ರವಲ್ಲದೆ, ಆರೋಗ್ಯ ವೃದ್ಧಿಯೂ ಹೌದು. ನಿಸರ್ಗಕ್ಕೆ ಹತ್ತಿರುವಾದ ಮನ ಫಾರೆಸ್ಟಾ ಅಪಾರ್ಟ್‌ಮೆಂಟ್‌ಗಳಿಂದ ವಾಸಿಸುವವರ ಆಮ್ಲಜನಕದ ಅಗತ್ಯವನ್ನು ಪೂರೈಸುವುದಲ್ಲದೆ, ಸುತ್ತಮುತ್ತಲಿನ ಪರಿಸರಕ್ಕೂ ತನ್ನದೇ ಆದ ಕೊಡುಗೆ ನೀಡುತ್ತಿದೆ. ಪರಿಸರ ಸ್ನೇಹಿ ಕಟ್ಟಡಗಳಿಂದ ವಿದ್ಯುತ್ ಬಳಕೆ ಸೇರಿದಂತೆ ಅಗತ್ಯಗಳ ಬಿಲ್ ಕೂಡಾ ತಗ್ಗಿಸಬಹುದು. ಒಟ್ಟಾರೆ, ಇಂಥ ಪರಿಸರ ಸ್ನೇಹಿ ಮನೆಗಳನ್ನು ಕೊಳ್ಳುವುದರ ಮೂಲಕ ದೀರ್ಘಾವಧಿಯಲ್ಲಿ ಹಣವನ್ನು ಉಳಿಸಬಹುದು.

Mana Foresta Project: India’s first Vertical Forest Tower

ಮನ ಫಾರೆಸ್ಟ್ ವಿಶೇಷಗಳು:

* ಭಾರತದ ಮೊದಲ ಲಂಬ ಅರಣ್ಯ ಗೋಪುರ ವಿನ್ಯಾಸದ ಅಪಾರ್ಟ್ಮೆಂಟ್ ಎನಿಸಿಕೊಂಡಿದೆ.

* ಸರ್ಜಾಪುರ ಮುಖ್ಯ ರಸ್ತೆಯಲ್ಲಿರುವ ವಿಪ್ರೋ ಕಾರ್ಪೊರೇಟ್ ಕಚೇರಿ ಸಮೀಪದಲ್ಲೇ ಮನ ಫಾರೆಸ್ಟ್‌ನ 3 ಮತ್ತು 4 BHK ಅಲ್ಟ್ರಾ ಐಷಾರಾಮಿ ಅಪಾರ್ಟ್‌ಮೆಂಟ್‌ಗಳಿವೆ. ಈ ಅಪಾರ್ಟ್ಮೆಂಟ್ ಖರೀದಿ ದರ 1.76 ಕೋಟಿ ರೂ.ಗಳಿಂದ ಪ್ರಾರಂಭವಾಗುತ್ತವೆ

* 14 ಅಂತಸ್ತಿನ ಮನ ಫಾರೆಸ್ಟ್ ಟವರ್‌ನಲ್ಲಿ ಕೇವಲ 56 ಅಲ್ಟ್ರಾ ಐಷಾರಾಮಿ ಅಪಾರ್ಟ್‌ಮೆಂಟ್‌ಗಳಿವೆ.

* ಮನ ಫೊರಾಸ್ಟಾ ಸಂರಚನೆಯಲ್ಲಿ ಸ್ಕೈ ವಿಲ್ಲಾ ವಿನ್ಯಾಸವನ್ನು ಬಳಸಲಾಗಿದೆ. ಒಟ್ಟು 225 ಮರಗಳು, 1000 ಮರಗಳು ಪೂರ್ಣವಾಗಿ ಅರಳುತ್ತವೆ, 2500 ಪೊದೆಗಳು ಮತ್ತು 350 ಮೀ ಉದ್ದದ ಪೊದೆ ಸಸ್ಯಗಳಿವೆ

*3 ಬಿಎಚ್‌ಕೆ (2431 X 2592 ಚದರ ಅಡಿ), 4 ಬಿಎಚ್‌ಕೆ (3060 X 3323 ಚದರ ಅಡಿ)

* ಎಲ್ಲಾ ಮನೆಗಳಲ್ಲೂ ಲ್ಯಾಂಡ್‌ಸ್ಕೇಪ್ ಬಾಲ್ಕನಿ, ಫಿಶ್ ಪಾಂಡ್, ಟರ್ಫ್ ಮತ್ತು 50 ಕ್ಕೂ ಹೆಚ್ಚು ಜೀವನಶೈಲಿ ಸೌಲಭ್ಯಗಳಿವೆ.

* ರೇರಾ ನಂಬರ್ PRM/KA/RERA/1251/446/PR/190525/002575.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X