ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಯಗೆ 'ದೇಶಭ್ರಷ್ಟ ಆರ್ಥಿಕ ಅಪರಾಧಿ' ಟ್ಯಾಗ್ ಬೀಳುವುದೇ?

|
Google Oneindia Kannada News

ಮುಂಬೈ, ಡಿಸೆಂಬರ್ 26: ಭಾರತದ ಹತ್ತಾರು ಬ್ಯಾಂಕುಗಳಿಂದ ಸಾವಿರಾರು ಕೋಟಿ ರು ಗಳನ್ನು ಸಾಲದ ರೂಪದಲ್ಲಿ ಪಡೆದು, ಉದ್ದೇಶಪೂರ್ವಕ ಸುಸ್ತಿದಾರ ಎನಿಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಬೇಕು ಎಂಬ ಜಾರಿ ನಿರ್ದೇಶನಾಲಯದ ಅರ್ಜಿಯ ವಿಚಾರಣೆಯನ್ನು ಜನವರಿ 05ಕ್ಕೆ ಮುಂಬೈ ವಿಶೇಷ ನ್ಯಾಯಾಲಯವು ಮುಂದೂಡಿದೆ.

ಪಿಎಂಎಲ್ಎ ವಿಶೇಷ ನ್ಯಾಯಾಲಯ ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸುವ ನಿರೀಕ್ಷೆ ಹೊಂದಿದ್ದ ಜಾರಿ ನಿರ್ದೇಶನಾಲಯ ಜನವರಿ 05ರ ತನಕ ಕಾಯಬೇಕಿದೆ.

ಗಡಿಪಾರು ಆದೇಶ ಬಂದರೂ ಮಲ್ಯ ಭಾರತಕ್ಕೆ ಸದ್ಯಕ್ಕಂತೂ ಬರಲ್ಲ!ಗಡಿಪಾರು ಆದೇಶ ಬಂದರೂ ಮಲ್ಯ ಭಾರತಕ್ಕೆ ಸದ್ಯಕ್ಕಂತೂ ಬರಲ್ಲ!

ಪ್ರಿವೆನ್ಷನ್​ಆಫ್​ಮನಿ ಲ್ಯಾಂಡರಿಂಗ್ ಆ್ಯಕ್ಟ್​ ಪ್ರಕಾರ ದೇಶಭ್ರಷ್ಠ ಆರ್ಥಿಕ ಅಪರಾಧಿ ಎಂದು ಘೋಷಣೆಯಾದರೆ, ಮಲ್ಯ ಅವರ ಸಮಸ್ತ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯಕ್ಕೆ ಅನುಕೂಲವಾಗಲಿದೆ. ಮಲ್ಯ ಒಡೆತನದ 12.5 ಸಾವಿರ ಕೋಟಿ ರು ಅಸ್ತಿ ಜಪ್ತಿ ಮಾಡಲು ತನಿಖಾ ಸಂಸ್ಥೆಗಳು ಮುಂದಾಗಿವೆ.

Mallyas fugitive economic offender verdict on Jan 5

ಮದ್ಯದ ದೊರೆ ವಿಜಯ್ ಮಲ್ಯ ಅವರು ತಮ್ಮನ್ನು ಆರ್ಥಿಕ ಅಪರಾಧಿ ಎಂದು ಹೊಸ ತಿದ್ದುಪಡಿ ಕಾಯ್ದೆಯಡಿಯಲ್ಲಿ ಜಾರಿ ನಿರ್ದೇಶನಾಲಯವು ಕರೆದು, ದೋಷರೋಪಣ ಸಲ್ಲಿಸಲು ಮುಂದಾಗಿರುವುದಕ್ಕೆ ತಡೆ ನೀಡುವಂತೆ ಕೋರಿ, ಕೋರ್ಟಿಗೆ ಕಳೆದ ವಾರ ಹಾಕಿದ್ದ ಅರ್ಜಿ ಕೂಡಾ ತಿರಸ್ಕೃತಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು

ಭಾರತಕ್ಕೆ ನನ್ನ ಹಣಕ್ಕಿಂತ ನನ್ನ ಮೇಲೆಯೇ ಹೆಚ್ಚು ಗಮನ: ಮಲ್ಯ ಭಾರತಕ್ಕೆ ನನ್ನ ಹಣಕ್ಕಿಂತ ನನ್ನ ಮೇಲೆಯೇ ಹೆಚ್ಚು ಗಮನ: ಮಲ್ಯ

ಲಂಡನ್ನಿನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಮಲ್ಯ ಅವರು, ತಮ್ಮ ಬಳಿ 14,000 ಕೋಟಿ ರು ಮೌಲ್ಯದ ಆಸ್ತಿ ಇದ್ದು, ಇದನ್ನು ಮಾರಿ, ಸಾಲ ವಾಪಸ್ ಮಾಡುತ್ತೇನೆ ಎಂದು ಮಲ್ಯ ಅವರು ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
The Enforcement Directorate had approached the court to get Vijay Mallya declared as a fugitive economic offender and the order was supposed to be delivered today. But, the order has been adjourned till January 5, as the Special PMLA judge is not ready with his order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X