ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿ ಷೇರಿಗೆ 974 ರೂಪಾಯಿ ಮಧ್ಯಂತರ ಲಾಭಾಂಶ ಘೋಷಿಸಿದ ಮೆಜೆಸ್ಕೊ

|
Google Oneindia Kannada News

ನವದೆಹಲಿ, ಡಿಸೆಂಬರ್ 15: ಸಾಫ್ಟ್‌ವೇರ್ ಕಂಪನಿ ಮೆಜೆಸ್ಕೊ ಸೋಮವಾರ ಮಧ್ಯಂತರ ಲಾಭಾಂಶ ಘೋಷಿಸಿದ ಬಳಿಕ ಕಂಪನಿಯ ಷೇರುಗಳು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಐದು ರೂಪಾಯಿ ಮುಖಬೆಲೆ ಮೆಜೆಸ್ಕೊ ಆಡಳಿತ ಮಂಡಳಿಯು ಪ್ರತಿ ಷೇರಿಗೆ 974 ರೂಪಾಯಿ ಮಧ್ಯಂತರ ಲಾಭಾಂಶ (ಇಂಟಿರಿಮ್ ಡಿವಿಡೆಂಡ್) ಘೋಷಿಸಿದೆ.

ಭಾರೀ ಪ್ರಮಾಣದಲ್ಲಿ ಡಿವಿಡೆಂಡ್ ಘೋಷಣೆ ಬಳಿಕ ಮೆಜೆಸ್ಕೊ ಷೇರುಗಳು ಸಾರ್ವಕಾಲಿಕ ಗರಿಷ್ಠ 1,019.90 ರೂಪಾಯಿಗೆ ಮುಟ್ಟಿದವು. ನಿನ್ನೆ ವಹಿವಾಟು ಕೊನೆಗೆ 972 ರೂಪಾಯಿಗೆ ಕೊನೆಗೊಂಡಿದ್ದು ಷೇರು ಬೆಲೆಯು ಇಂದು ಶೇಕಡಾ 5ಕ್ಕಿಂತ ಹೆಚ್ಚಿನ ಏರಿಕೆ ದಾಖಲಿಸಿದವು. ಕಂಪನಿಯು ಮಧ್ಯಂತರ ಲಾಭಾಂಶವಾಗಿ ಷೇರಿಗೆ ಶೇಕಡಾ 19,480ರಷ್ಟು ಅಂದರೆ 974 ರೂಪಾಯಿ ಕೊಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.

8 ತಿಂಗಳಲ್ಲಿ ಈ ಷೇರಿನ ಹೂಡಿಕೆದಾರರ ಸಂಪತ್ತು ದ್ವಿಗುಣಗೊಂಡಿದೆ!8 ತಿಂಗಳಲ್ಲಿ ಈ ಷೇರಿನ ಹೂಡಿಕೆದಾರರ ಸಂಪತ್ತು ದ್ವಿಗುಣಗೊಂಡಿದೆ!

ಕಂಪನಿಯು 2020 ರ ಡಿಸೆಂಬರ್ 25 ರ ಶುಕ್ರವಾರದಂದು ಮಧ್ಯಂತರ ಲಾಭಾಂಶವನ್ನು ಪಾವತಿಸಲು ಷೇರುದಾರರ ಅರ್ಹತೆಯನ್ನು ಖಚಿತಪಡಿಸಿಕೊಳ್ಳಲು ಡಿವಿಡೆಂಡ್ ರೆಕಾರ್ಡ್ ದಿನಾಂಕವಾಗಿ ನಿಗದಿಪಡಿಸಿದೆ. ಈ ಮಧ್ಯಂತರ ಲಾಭಾಂಶ ಪಾವತಿಯು 28.577 ಮಿಲಿಯನ್ ಷೇರುಗಳ ಷೇರುದಾರರ ಆಧಾರದ ಮೇಲೆ 2,788.4 ಕೋಟಿ ರೂ. ಆಗಿದೆ.

Majesco Shares Hits Record High: Company Board Approves Interim Devidend Of Rs 974

ಕಂಪನಿಯು ಈಗಾಗಲೇ ಪ್ರತಿ ಷೇರಿಗೆ 845 ರೂ.ಗೆ 7.47 ಮಿಲಿಯನ್ ಷೇರುಗಳನ್ನು ಸುಮಾರು 631 ಕೋಟಿ ರೂ.ಗಳಿಗೆ (ವಹಿವಾಟು ವೆಚ್ಚವನ್ನು ಹೊರತುಪಡಿಸಿ) ಮರುಖರೀದಿ ಘೋಷಿಸಿದೆ, ಇದನ್ನು 2020 ರ ಡಿಸೆಂಬರ್ 11 ರಂದು ಮುಚ್ಚಲಾಯಿತು.

ದಿನದ ವಹಿವಾಟು ಅಂತ್ಯಕ್ಕೆ ಬಿಎಸ್‌ಇನಲ್ಲಿ ಮೆಜಸ್ಕೊ ಲಿಮಿಟೆಡ್ ಷೇರು 982.20 ರೂಪಾಯಿಗೆ ಕೊನೆಗೊಂಡಿದೆ. ಎನ್‌ಎಸ್‌ಇನಲ್ಲಿ 982.35 ರೂಪಾಯಿಗೆ ವಹಿವಾಟು ಕೊನೆಗೊಂಡಿದೆ.

English summary
Shares of Majesco hit a fresh record high of Rs 1,019, up 5 per cent on the BSE in early morning trade on Tuesday after board approves interim devided of Rs 974.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X