ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಚ್ಚ ಹೊಸ ಎಸ್ ಯುವಿ ಮಹೀಂದ್ರಾ XUV300 ಮಾರುಕಟ್ಟೆಗೆ

|
Google Oneindia Kannada News

ಮುಂಬೈ, ಫೆಬ್ರುವರಿ 3: 19.4 ಶತಕೋಟಿ ಡಾಲರ್ ಮೌಲ್ಯದ ಮಹೀಂದ್ರಾ ಸಮೂಹದ ಭಾಗವಾಗಿರುವ ಮಹೀಂದ್ರಾ & ಮಹೀಂದ್ರಾ ಇಂದು XUV300 ವಾಹನದಲ್ಲಿ ತನ್ನ ಆಟೊ ಟ್ರಾನ್ಸ್ ಮಿಷನ್ ತಂತ್ರಜ್ಞಾನವಾದ ಪೆಟ್ರೋಲ್ ಆಟೊಶಿಫ್ಟ್ ಬಿಡುಗಡೆ ಮಾಡಿದೆ. ಆಟೊಶಿಫ್ಟ್ ಅಗ್ರಶ್ರೇಣಿಯ ಅವತರಣಿಕೆ ಡಬ್ಲ್ಯು8 ವಾಹನವು ಇದೀಗ ಹೊಚ್ಚಹೊಸ ಬ್ಲೂಸೆನ್ಸ್ ಪ್ಲಸ್ ಕನೆಕ್ಟೆಡ್ ಎಸ್‍ಯುವಿ ತಂತ್ರಜ್ಞಾನವನ್ನು ಕೂಡಾ ಹೊಂದಿರುತ್ತದೆ. ಎಲೆಕ್ಟ್ರಿಕ್ ಸನ್‍ರೂಫ್‍ಗಳನ್ನು ಮಧ್ಯಮ ಪ್ರಮಾಣದ ಅವತರಣಿಕೆ (ಡಬ್ಲ್ಯು6) ನಿಂದ ಮೇಲಿನ ಅವತರಣಿಕೆಗಳಿಗೆ ನೀಡಲಾಗುತ್ತಿದ್ದು, ಮ್ಯಾನ್ಯುಯಲ್ ಮತ್ತು ಆಟೊಶಿಫ್ಟ್ ಅವತರಣಿಕೆಗಳೆರಡಲ್ಲೂ ಇದು ಲಭ್ಯ.

ಈ ಬಗ್ಗೆ ವಿವರ ನೀಡಿದ ಮಹೀಂದ್ರಾ & ಮಹೀಂದ್ರಾದ ಆಟೊಮೋಟಿವ್ ವಿಭಾಗದ ಸಿಇಒ ವಿಜಯ್ ನಕ್ರಾ, "ಯುವ ಭಾರತೀಯ ಗ್ರಾಹಕರು ಯಾವುದೇ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಇಚ್ಛಿಸುವುದಿಲ್ಲ ಹಾಗೂ ತಂತ್ರಜ್ಞಾನ ಆಧರಿತ ಅನುಕೂಲತೆ & ಅನುಭವವನ್ನು ಬಯಸುತ್ತಾರೆ. ಇಂದು ನಾವು ವಿನೂತನ ಆಟೊ ಟ್ರಾನ್ಸ್ ಮಿಷನ್ ಆಟೊಶಿಫ್ಟ್ ತಂತ್ರಜ್ಞಾನವನ್ನು ಪೆಟ್ರೋಲ್ ಅವತರಣಿಕೆಗೆ ಪರಿಚಯಿಸಿದ್ದು, ಇದು ನಗರ ರಸ್ತೆಗಳಲ್ಲಿ ಚಾಲನೆ ಹಾಗೂ ಹೆದ್ದಾರಿ ಚಾಲನೆಯ ವೇಳೆ ಶ್ರಮರಹಿತ ಚಾಲನಾ ಅನುಭವವನ್ನು ಬಳಕೆದಾರರಿಗೆ ಒದಗಿಸುವ ಅತ್ಯಾಧುನಿಕ ತಂತ್ರಜ್ಞಾನವಾಗಿದೆ. ಇಂದು ನಾವು ಬ್ಲೂಸೆನ್ಸ್ ಪ್ಲಸ್ಟ್ ತಂತ್ರಜ್ಞಾನವನ್ನೂ ಪರಿಚಯಿಸಿದ್ದು, ಇದು 40ಕ್ಕೂ ಹೆಚ್ಚು ವಿಶೇಷತೆಗಳನ್ನೊಳಗೊಂಡ ಎಸ್‍ಯುವಿ ತಂತ್ರಜ್ಞಾನವಾಗಿದೆ. ಇದು ಎಕ್ ಯುವಿ300 ವಾಹನದ ಗ್ರಾಹಕರನ್ನು ಸದಾ ಸಂಪರ್ಕಿತ ವಿಶ್ವದ ಜತೆ ಸಮನ್ವಯಗೊಳಿಸುತ್ತದೆ" ಎಂದು ಬಣ್ಣಿಸಿದರು.

ಮಹೀಂದ್ರಾ ಅಂಡ್ ಮಹೀಂದ್ರಾದಿಂದ ಕಾರು ಸಬ್ ಸ್ಕ್ರಿಪ್ಷನ್ ಗೆ ಚಾಲನೆ: ಏನಿದು ಸ್ಕೀಮ್? ಮಹೀಂದ್ರಾ ಅಂಡ್ ಮಹೀಂದ್ರಾದಿಂದ ಕಾರು ಸಬ್ ಸ್ಕ್ರಿಪ್ಷನ್ ಗೆ ಚಾಲನೆ: ಏನಿದು ಸ್ಕೀಮ್?

 ಎಸ್ ಯುವಿ ಅರಂಭಿಕ ಬೆಲೆ 9.4 ಲಕ್ಷ ರೂಪಾಯಿ

ಎಸ್ ಯುವಿ ಅರಂಭಿಕ ಬೆಲೆ 9.4 ಲಕ್ಷ ರೂಪಾಯಿ

ಗ್ರಾಹಕರ ಸನ್‍ರೂಫ್ ಆದ್ಯತೆಗೆ ಅನುಗುಣವಾಗಿ, ಎಕ್ಸ್‍ಯುವಿ300 ಮ್ಯಾನ್ಯುಯಲ್ ಹಾಗೂ ಆಟೊಶಿಫ್ಟ್ ವಾಹನಗಳೆರಡರಲ್ಲೂ ಮಧ್ಯಮ ಶ್ರೇಣಿಯ ಅವತರಣಿಕೆಯಿಂದಾಚೆಗೆ ಎಲೆಕ್ಟ್ರಿಕ್ ಸನ್ ರೂಫ್ ಪರಿಚಯಿಸಲಾಗುತ್ತಿದೆ. ಅರಂಭಿಕ ಬೆಲೆ 9.4 ಲಕ್ಷ ರೂಪಾಯಿ (ಎಕ್ಸ್ ಶೋರೂಂ ಪೆಟ್ರೋಲ್ ಡಬ್ಲ್ಯು6) ಯೊಂದಿಗೆ, ವಿಸ್ತೃತ ಗ್ರಾಹಕ ನೆಲೆಗೆ ಸನ್‍ರೂಫ್ ಲಭ್ಯವಾಗಲಿದೆ.

ಈ ಹೊಸ ವಿಶೇಷತೆಗಳನ್ನು ಪರಿಚಯಿಸುವುದರೊಂದಿಗೆ, ಎಕ್ಸ್ ಯುವಿ 300 ಸರಣಿಯ ವಾಹನಗಳನ್ನು ಹೊಸ ಬಣ್ಣಗಳಲ್ಲೂ ನೋಡಬಹುದಾಗಿದೆ. ಅವುಗಳೆಂದರೆ ಎಲ್ಲ ಡಬ್ಲ್ಯು9(ಓ) ಆಟೊಶಿಫ್ಟ್ ಅವತರಣಿಕೆಗಳಲ್ಲಿಡ್ಯುಯಲ್ ಟೋನ್ ರೆಡ್ ಮತ್ತು ಡ್ಯುಯಲ್‍ಟೋನ್ ಆಕ್ವಾಮರಿನ್ ಹಾಗೂ ಮ್ಯಾನ್ಯುಯಲ್ ಡಬ್ಲ್ಯು6, ಡಬ್ಲ್ಯು8 ಮತ್ತು ಡಬ್ಲ್ಯು8 (ಬಿ) ಅವತರಣಿಕೆಗಳಲ್ಲಿ ಹೊಚ್ಚ ಹೊಸ ಗೆಲಾಕ್ಸಿ ಗ್ರೇ.

ಹೊಚ್ಚ ಹೊಸ ಪೆಟ್ರೋಲ್ ಆಟೊಶಿಫ್ಟ್ ಗೆ ಬುಕ್ಕಿಂಗ್‍ಗಳು ಇದೀಗ ತೆರೆದಿದ್ದು, ಫೆಬ್ರವರಿ ಮಧ್ಯಭಾಗದಿಂದಾಚೆಗೆ ವಿತರಣೆಗಳು ಆರಂಭವಾಗಲಿವೆ.

 ಅತ್ಯಾಧುನಿಕ ಮತ್ತು ಶ್ರಮರಹಿತ ಆಟೊಶಿಫ್ಟ್

ಅತ್ಯಾಧುನಿಕ ಮತ್ತು ಶ್ರಮರಹಿತ ಆಟೊಶಿಫ್ಟ್

1. ಅತ್ಯಾಧುನಿಕ ಮತ್ತು ಶ್ರಮರಹಿತ ಆಟೊಶಿಫ್ಟ್
ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಸುಧಾರಿತ & ಕೈಗೆಟುಕುವ ಆಟೊ ಟ್ರಾನ್ಸ್ ಮಿಷನ್ ತಂತ್ರಜ್ಞಾನಗಳಲ್ಲಿ ಎಕ್ಸ್‍ಯುವಿ300 ಆಟೊಶಿಫ್ಟ್ ತಂತ್ರಜ್ಞಾನವನ್ನು, ಸುಲಲಿತ ಚಾಲನಾ ಅನುಭವ ನೀಡುವ ಸಲುವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಸ್ವಯಂಚಾಲಿತವಾಗಿದ್ದರೂ, ಮ್ಯಾನ್ಯುಯಲ್ ವಿಧಾನಕ್ಕೆ ಪರಿವರ್ತಿಸಲು ಅವಕಾಶವಿರುತ್ತದೆ. ಟಾನ್ಸ್ ಮಿಷನ್ ನೈಪುಣ್ಯಕ್ಕೆ ಹೆಸರಾದ ಮರೇಲಿ ಇದನ್ನು ಅಭಿವೃದ್ಧಿಪಡಿಸಿದ್ದು, ಇದು ಟ್ಯಾಪ್-ಟೂ-ಸ್ವಿಚ್‍ನೊಂದಿಗೆ ಸುಸಜ್ಜಿತವಾಗಿದೆ.

ಈ ವಿಶೇಷ ಸೌಲಭ್ಯವು ಉತ್ಸಾಹಿ ಚಾಲಕರಿಗೆ ಪೂರ್ಣಶಕ್ತಿಯ ಎಕ್ಸ್‍ಯುವಿ 300ನ ಅಸಾಧಾರಣ ಅನುಭವ ಒದಗಿಸಲಿದೆ. 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹಾಗೂ ಕ್ಲಚ್‍ರಹಿತ ಚಾಲನಾ ಅನುಭವ ಇದರ ಇತರ ವಿಶೇಷತೆಗಳಾಗಿರುತ್ತವೆ. ಇದರೊಂದಿಗೆ ಈ ವರ್ಗದಲ್ಲಿ ಆಟೊ ಟ್ರಾನ್ಸ್ ಮಿಷನ್ ಸೌಲಭ್ಯವನ್ನು ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳೆರಡರಲ್ಲೂ ಒದಗಿಸುವ ಕೆಲವೇ ವಾಹನಗಳ ಪೈಕಿ ಎಕ್ಸ್‍ಯುವಿ 300 ಸೇರಲಿದೆ.

 ಯುವಿ300 ಆಟೊಶಿಫ್ಟ್ ತಂತ್ರಜ್ಞಾನದ ಗುಣಲಕ್ಷಣ

ಯುವಿ300 ಆಟೊಶಿಫ್ಟ್ ತಂತ್ರಜ್ಞಾನದ ಗುಣಲಕ್ಷಣ

1. ಆಟೊ ಮೋಡ್: ಸ್ವಯಂಚಾಲಿತ, ಶ್ರಮರಹಿತ, ಸುಲಲಿತ ಮತ್ತು ಆಯಾಸಮುಕ್ತ ಚಾಲನೆ
2. ಮ್ಯಾನ್ಯುಯಲ್ ಮೋಡ್: ಹೆಚ್ಚು ಚಾಲನಾ ಅನುಭವ ಒಳಗೊಳ್ಳುವ ದೃಷ್ಟಿಯಿಂದ ಗೇರ್ ಬದಲಾವಣೆಯ ಮೇಲಿನ ನಿಯಂತ್ರಣ.
3. ಅತ್ಯಾಧುನಿಕ ಕ್ರೀಪ್ ಕಾರ್ಯ: ಫಸ್ಟ್ ಮತ್ತು ರಿವರ್ಸ್ ಗೇರ್‍ನಲ್ಲಿ 1-ಪೆಡಲ್ ಚಾಲನೆ (ಆಕ್ಸಿಲರೇಟರ್ ಇನ್‍ಪುಟ್ ರಹಿತವಾಗಿ). ಇದು ದಟ್ಟಣೆಯ ನಗರ ಸಂಚಾರ ಮತ್ತು ಕಷ್ಟಕರ ಪಾರ್ಕಿಂಗ್ ವಾತಾವರಣದಲ್ಲಿ ಆರಾಮದಾಯಕವಾಗಿ ನಿರ್ವಹಿಸಲು ಸಹಕಾರಿಯಾಗಲಿದೆ.
4. ಎಲೆಕ್ಟ್ರಾನಿಕ್ ಸ್ಥಿರತೆ ನಿಯಂತ್ರಣ: ಎಲ್ಲ ಚಾಲನಾ ಪರಿಸ್ಥಿತಿಯಲ್ಲೂ ಪರಿಪೂರ್ಣ ನಿಯಂತ್ರಣ ಮತ್ತು ಸ್ಥಿರತೆ
5. ಹಿಲ್ ಸ್ಟಾರ್ಟ್ ಅಸಿಸ್ಟ್: ಇಳಿಜಾರಿನಲ್ಲಿ ಹೆಚ್ಚುವರಿ ಸುರಕ್ಷತೆ ಮತ್ತು ವಿಶ್ವಾಸದಿಂದಾಗಿ ಹಿಂದಕ್ಕೆ ಉರುಳುವುದನ್ನು ಇದು ತಡೆಯುತ್ತದೆ.
6. ಕಿಕ್‍ಡೌನ್ ಶಿಫ್ಟ್ಸ್: ಮತ್ತೊಂದು ವಾಹನವನ್ನು ಹಿಂದಿಕ್ಕಲು ಮತ್ತು ತ್ವರಿತ ವೇಗವರ್ಧನೆಗಾಗಿ ಅತ್ಯಧಿಕ ಪಿಕಪ್
7. ಅಳವಡಿಕೆ ಯೋಗ್ಯ ಪೆಡಲ್ ರೆಸ್ಪಾನ್ಸ್: ಆರಾಮದಾಯಕದಿಂದ ಹಿಡಿದು ಕ್ರೀಡೋತ್ಸಾಹದ ಚಾಲನಾ ಅಗತ್ಯತೆ ಮತ್ತು ಆಕ್ಸಿಲರೇಟರ್ ಇನ್‍ಪುಟ್‍ಗಳಿಗೆ ಅನುಸಾರವಾಗಿ ಸ್ವಯಂಚಾಲಿತ ಗೇರ್ ಶಿಫ್ಟ್ ಮ್ಯಾಪ್ ಆಯ್ಕೆಗೆ ಅವಕಾಶವಿದೆ.
8. ಟ್ಯಾಪ್ ಟೂ ಸ್ವಿಚ್: ಆಟೊ, ರಿವರ್ಸ್ ಅಥವಾ ಮ್ಯಾನ್ಯುಯಲ್ ವಿಧಾನಕ್ಕೆ ಒಂದೇ ಟ್ಯಾಪ್‍ನಲ್ಲಿ ಬದಲಾಗಲು ಅವಕಾಶ.
9. ಚಾಲನೆ ಮತ್ತು ರಿವರ್ಸ್ ಲಾಕೌಟ್: ರಿವರ್ಸ್ ಮತ್ತು ಚಾಲನಾ ಮೋಡ್‍ಗಳಿಗೆ ದಿಢೀರನೇ ಬದಲಾಗುವುದನ್ನು ನಿರ್ಬಂಧಿಸುವ ಸಲುವಾಗಿ ಹೆಚ್ಚುವರಿ ಸುರಕ್ಷಾ ಕ್ರಮವಾಗಿದ್ದು, ಇದಿಲ್ಲದಿದ್ದರೆ ವೇಗವು ಗಂಟೆಗೆ 5 ಕಿಲೋಮೀಟರ್‍ಗೆ ಕುಸಿಯುತ್ತದೆ.
10. ಬಾಗಿಲು ತೆರೆಯುವ ವೇಳೆ ಚಾಲನೆ ನಿಷ್ಕ್ರಿಯ: ಬಾಗಿಲುಗಳು ತೆರೆದಿದ್ದಾಗ ಆಟೊ/ ಮ್ಯಾನ್ಯುಯಲ್ ವಿಧಾನದಲ್ಲಿ ಕೂಡಾ ವಾಹನವು ಚಲಿಸುವುದನ್ನು ತಡೆಯುತ್ತದೆ.

 ಬ್ಲೂಸೆನ್ಸ್ ಪ್ಲಸ್- ಸಂಪರ್ಕಿತ ಎಸ್‍ಯುವಿ ತಂತ್ರಜ್ಞಾನ

ಬ್ಲೂಸೆನ್ಸ್ ಪ್ಲಸ್- ಸಂಪರ್ಕಿತ ಎಸ್‍ಯುವಿ ತಂತ್ರಜ್ಞಾನ

2. ಬ್ಲೂಸೆನ್ಸ್ ಪ್ಲಸ್- ಸಂಪರ್ಕಿತ ಎಸ್‍ಯುವಿ ತಂತ್ರಜ್ಞಾನ
ಡಬ್ಲ್ಯು8()) ಆಟೊಶಿಫ್ಟ್ ವಾಹನದಲ್ಲಿರುವ ಮಹೀಂದ್ರಾದ ಸಂಪರ್ಕಿತ ಎಸ್‍ಯುವಿ ತಂತ್ರಜ್ಞಾನವೆನಿಸಿದ ಬ್ಲೂಸೆನ್ಸ್ ಪ್ಲಸ್ ತಂತ್ರಜ್ಞಾನವು ಎಸ್‍ಯುವಿ ಮತ್ತು ಅದರ ಮಾಲೀಕರ ನಡುವೆ ಸಂಪರ್ಕಿತ ಅನುಭವವನ್ನು ಸೃಷ್ಟಿಸುತ್ತದೆ. ಇದು ವೈವಿಧ್ಯಮಯ ವಿಶೇಷತೆಗಳಾದ ದೂರಸಂವೇದಿ ವಾಹನ ನಿಯಂತ್ರಣ ವಿಶೇಷತೆಗಳನ್ನು (ಡೋರ್ ಲಾಕ್/ಅನ್‍ಲಾಕ್, ಫೈಂಡ್ ಮೈ ಎಕ್ಸ್‍ಯುವಿ300 ಇತ್ಯಾದಿ) ಹೊಂದಿದೆ.

ಅಂತೆಯೇ ಸ್ಥಳ ಆಧಾರಿತ ವಿಶೇಷತೆಗಳಾದ ಲೈವ್ ಟ್ರ್ಯಾಕಿಂಗ್ & ಶೇರಿಂಗ್, ಮಾರ್ಗ ವಿಮುಖವಾಗುವಿಕೆ, ಸುರಕ್ಷತೆ ಮತ್ತು ಸುಭದ್ರತಾ ವಿಶೇಷತೆಗಳಾದ ಜಿಯೊ ಫೆನ್ಸಿಂಗ್, ತುರ್ತು ಸಹಾಯ,ಮ ವಾಃನ ಮಾಹಿತಿ ಎಚ್ಚರಿಕೆಗಳಾದ ಟ್ಯಾಂಕ್ ಖಾಲಿಯಾಗಲು ಇರುವ ಅಂತರ, ಟೈರಿನ ಒತ್ತಡ, ಇತರ ವಿಶೇಷತೆಗಳಾದ ಇನ್ಫೋಟೈನ್‍ಮೆಂಟ್ ನಿಯಂತ್ರಣ, ದಾಖಲೆಗಳ ವ್ಯಾಲೆಟ್ ಮತ್ತಿತರ ಸೌಲಭ್ಯಗಳನ್ನು ಹೊಂದಿದೆ. ಬ್ಲೂಸೆನ್ಸ್ ಪ್ಲಸ್ ಆ್ಯಂಡ್ರಾಯ್ಡ್ ಮತ್ತು ಐಓಎಸ್‍ಗಳೆರಡಲ್ಲೂ ಲಭ್ಯ.
ಬ್ಲೂಸೆನ್ಸ್ ಪ್ಲಸ್ ಒಂದು ಸಮಗ್ರ ಸಂಪರ್ಕಿತ ಎಸ್‍ಯುವಿ ಪರಿಹಾರವಾಗಿದ್ದು, ಎಂಬೇಡೆಡ್ ಸಿಮ್‍ನಿಂದ ಚಾಲಿತವಾಗಿದೆ.

ಇದು ವಾಹನಗಳ ಮಾಲೀಕರು ಎಲ್ಲೇ ಇದ್ದರೂ ತಮ್ಮ ಎಕ್ಸ್‍ಯುವಿ300 ಜತೆ ನಿರಂತರ ಸಂಪರ್ಕದಲ್ಲಿರಲು ಅನುವು ಮಾಡಿಕೊಡುತ್ತದೆ. ಗ್ರಾಹಕರು ತಮ್ಮ ಸ್ಮಾರ್ಟ್‍ಫೋನ್ ಬಳಸಿಕೊಂಡು ತಮ್ಮ ಬೆರಳತುದಿಯಲ್ಲೇ ಎಲ್ಲ ಮಾಹಿತಿಗಳನ್ನು ಪಡೆಯಲು ಅವಕಾಶವಿದ್ದು, 40ಕ್ಕೂ ಹೆಚ್ಚು ವಿಶೇಷತೆಗಳನ್ನು ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

 ದೂರಸಂವೇದಿ ವಾಹನ ನಿಯಂತ್ರಣ ವಿಶೇಷತೆ

ದೂರಸಂವೇದಿ ವಾಹನ ನಿಯಂತ್ರಣ ವಿಶೇಷತೆ

ದೂರಸಂವೇದಿ ವಾಹನ ನಿಯಂತ್ರಣ ವಿಶೇಷತೆಗಳು
1. ರಿಮೋಟ್ ಡೋರ್ ಲಾಕ್/ ಅನ್‍ಲಾಕ್
2. ರಿಮೋಟ್ ಅಪಾಯದ ದೀಪ ಆನ್/ ಆಫ್
3. ಸರ್ಚ್ ಮೈ ಎಕ್ಸ್‍ಯುವಿ 300
4. ರಿಮೋಟ್ ಪಾರ್ಕ್ ಲ್ಯಾಂಪ್ ಆಫ್
ಸ್ಥಳ ಆಧರಿತ ವಿಶೇಷತೆಗಳು
5. ಲೈವ್ ವೆಹಿಕಲ್ ಟ್ರ್ಯಾಕಿಂಗ್
6. ಫೈಂಡ್ ಮೈ ಎಕ್ಸ್‍ಯುವಿ300
7. ಮಾರ್ಗ ವಿಮುಖ ಎಚ್ಚರಿಕೆ
8. ವಾಹನದ ಸ್ಥಳವಿವರ ಹಂಚಿಕೆ
9. ಸ್ಥಳದ ಬಗ್ಗೆ ಮಾಹಿತಿ ಹಂಚಿಕೆ
10. ಸ್ಥಳ & ಮಾರ್ಗಗಳ ವಿವರ ಕಾಪಾಡುವಿಕೆ
11. ಪಿಟ್‍ಸ್ಟಾಪ್
12. ಟರ್ನ್ ಬೈ ಟರ್ನ್ ಪಥದರ್ಶಕ ವ್ಯವಸ್ಥೆ
ಸುರಕ್ಷೆ & ಭದ್ರತಾ ಎಚ್ಚರಿಕೆಗಳು
13. ಅನಧಿಕೃತವಾಗಿ ವಾಹನವನ್ನು ಪ್ರವೇಶಿಸುವ ಬಗ್ಗೆ ಎಚ್ಚರಿಕೆ
14. ತುರ್ತುಸ್ಥಿತಿ ಎಚ್ಚರಿಕೆ
15. ಜಿಯೋ ಫೆನ್ಸಿಂಗ್
16. ಟೈಮ್ಸ್ ಫೆನ್ಸಿಂಗ್
17. ಬಾಗಿಲು ತೆರೆಯುವ ಎಚ್ಚರಿಕೆ
18. ಟೈರಿನ ಒತ್ತಡದ ಬಗ್ಗೆ ಎಚ್ಚರಿಕೆ
19. ಅಧಿಕ ವೇಗದ ಬಗ್ಗೆ ಎಚ್ಚರಿಕೆ
20. ಎಂಜಿನ್ ಉಷ್ಣತೆ ಹೆಚ್ಚಿದ ಬಗ್ಗೆ ಎಚ್ಚರಿಕೆ
21. ಸೀಟ್‍ಬೆಲ್ಟ್ ಎಚ್ಚರಿಕೆ
22. ಸಾಧನ ಅನ್‍ಪ್ಲಗ್ ಆದ ಬಗ್ಗೆ ಎಚ್ಚರಿಕೆ
ವಾಹನ ಮಾಹಿತಿ & ಎಚ್ಚರಿಕೆ
23. ಕಡಿಮೆ ಇಂಧನ ಎಚ್ಚರಿಕೆ
24. ಟ್ಯಾಂಕ್ ಖಾಲಿಯಾಗುವ ಮುನ್ನ ಕ್ರಮಿಸಬಹುದಾದ ದೂರ ಪರಿಶೀಲನೆ
25. ಪಾರ್ಕಿಂಗ್ ದೀಪ ಆನ್ ಇರುವ ಬಗ್ಗೆ ಎಚ್ಚರಿಕೆ
26. ವಾಹನ ಚಾಲನೆ ನಿಲುಗಡೆ ಎಚ್ಚರಿಕೆ
27. ಟೈರ್ ಒತ್ತಡ ಪರಿಶೀಲನೆ
28. ಡೋರ್ ಲಾಕ್ ಪರಿಶೀಲನೆ
29. ಓಟೋಮೀಟರ್ ಪರಿಶೀಲನೆ
30. ಎಸಿ ಮಾಹಿತಿ ಪರಿಶೀಲನೆ
31. ಎಂಜಿನ್ ನಿಷ್ಕ್ರಿಯ ಎಚ್ಚರಿಕೆ
ಕಾರಿನೊಳಗಿನ ನಿಯಂತ್ರಣ & ಇತರ ವಿಶೇಷತೆಗಳು
32. ಕಾರಿನ ಎಸಿ ನಿಯಂತ್ರಣಗಳು
33. ಕಾರಿನೊಳಗಿನ ಇನ್ಫೋಟೈನ್‍ಮೆಂಟ್ ಧ್ವನಿ ನಿಯಂತ್ರಣ
34. ದಾಖಲೆಗಳ ವ್ಯಾಲೆಟ್
35. ಇಂಧನ ದಿನಚರಿ
36. ಟ್ರಿಪ್ ಸಾರಾಂಶ
37. ಮೈಕಾರ್ ಇನ್ಫೋ
38. ವಿಮೆ ಅವಧಿ ಮುಗಿಯುವ ಬಗ್ಗೆ ಮಾಹಿತಿ
39. ಪಿಯುಸಿ ಅವಧಿ ಮುಗಿಯುವ ಬಗ್ಗೆ ಮಾಹಿತಿ
40. ಹವಾಮಾನ ಮಾಹಿತಿ
41. ಇ-ಮ್ಯಾನ್ಯುಯೆಲ್

 ಮಹೀಂದ್ರಾ ಬಗ್ಗೆ

ಮಹೀಂದ್ರಾ ಬಗ್ಗೆ

ಮಹೀಂದ್ರಾ ಸಮೂಹವು 19.4 ಶತಕೋಟಿ ಡಾಲರ್ ಮೌಲ್ಯದ ಕಂಪನಿಗಳ ಸಮೂಹವಾಗಿದ್ದು, ವಿನೂತನ ಸಂಚಾರ ಪರಿಹಾರಗಳ ಮೂಲಕ ಜನರ ಏಳಿಗೆಯನ್ನು ಸಾಧ್ಯವಾಗಿಸಿ, ಗ್ರಾಮೀಣ ಸಮೃದ್ಧಿಗೆ ಚಾಲನೆ ನೀಡಿದೆ. ಜತೆಗೆ ನಗರ ಜೀವನವನ್ನು ವಿಸ್ತೃತಗೊಳಿಸಿದ್ದು, ಹೊಸ ವಹಿವಾಟುಗಳನ್ನು ಪೋಷಿಸಿ, ಸಮುದಾಯಗಳಿಗೆ ನೆರವಾಗುತ್ತಿದೆ.

ಬಳಕೆ ವಾಹನಗಳ ವರ್ಗದಲ್ಲಿ, ಮಾಹಿತಿ ತಂತ್ರಜ್ಞಾನ, ಹಣಕಾಸು ಸೇವೆಗಳು ಮತ್ತು ರಜಾಕಾಲದ ತಾಣಗಳ ಮಾಲೀಕತ್ವದಲ್ಲಿ ಭಾರತದಲ್ಲಿ ಅಗ್ರಗಣ್ಯ ಸ್ಥಾನವನ್ನು ಹೊಂದಿದೆ. ಜತೆಗೆ ಜಾಗತಿಕವಾಗಿ ಇದು ಗಾತ್ರದಲ್ಲಿ ವಿಶ್ವದ ಅತಿದೊಡ್ಡ ಟ್ರ್ಯಾಕ್ಟರ್ ಕಂಪನಿಯಾಗಿದೆ. ಇದು ನವೀಕರಿಸಬಹುದಾದ ಇಂಧನ, ಕೃಷಿ ವಹಿವಾಟು, ಲಾಜಿಸ್ಟಿಕ್ಸ್ ಮತ್ತು ರಿಯಲ್ ಎಸ್ಟೇಟ್ ಅಭಿವೃದ್ಧಿಯಲ್ಲೂ ಪ್ರಬಲ ಸ್ಥಾನ ಹೊಂದಿದೆ. ಭಾರತದಲ್ಲಿ ಕೇಂದ್ರ ಕಚೇರಿ ಹೊಂದಿರುವ ಮಹೀಂದ್ರಾ ಸಮೂಹ 100ಕ್ಕೂ ಹೆಚ್ಚು ದೇಶಗಳಲ್ಲಿ ಅಸ್ತಿತ್ವ ಹೊಂದಿ 2,56,000 ಮಂದಿ ಉದ್ಯೋಗಿಗಳನ್ನು ಹೊಂದಿದೆ.

English summary
Mahindra & Mahindra Ltd. (M&M), a part of the US $19.4 billion Mahindra Group, today announced the introduction of Petrol AutoSHIFT, its auto transmission technology, on the XUV300.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X