ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಥಾರ್ ಸೇರಿದಂತೆ ಮಹೀಂದ್ರಾ ವಾಹನಗಳ ಬೆಲೆ ಏರಿಕೆ

|
Google Oneindia Kannada News

ನವದೆಹಲಿ, ಜನವರಿ 08: ತನ್ನ ಪ್ರಯಾಣಿಕರ ಮತ್ತು ವಾಣಿಜ್ಯ ವಾಹನಗಳ ಬೆಲೆಯನ್ನು ಮಹೀಂದ್ರಾ ಮತ್ತು ಮಹೀಂದ್ರಾ (ಎಂ & ಎಂ) ಇಂದಿನಿಂದಲೇ ಜಾರಿಗೆ ಬರುವಂತೆ ಶೇಕಡಾ 1.9ರಷ್ಟು ಏರಿಕೆ ಮಾಡಿದೆ.

ಸರಕುಗಳ ಬೆಲೆ ಏರಿಕೆ ಮತ್ತು ಇತರ ಹಲವಾರು ಇನ್ಪುಟ್ ವೆಚ್ಚಗಳಿಂದಾಗಿ ಬೆಲೆಗಳನ್ನು ಹೆಚ್ಚಿಸುವ ನಿರ್ಧಾರ ತೆಗೆದುಕೊಂಡಿದೆ. ವಿವಿಧ ಮಾಡೆಲ್ ಕಾರುಗಳು, ವಾಹನಗಳ ಆಧಾರದ ಮೇಲೆ ಬೆಲೆ ಏರಿಕೆ ವ್ಯತ್ಯಾಸವನ್ನು ನಾವು ಕಾಣಬಹುದಾಗಿದೆ.

ಲೋನ್ ಇಲ್ಲದೆ ಕಾರು ಸಿಗಲಿದೆ: ಮಾರುತಿ ಸುಜುಕಿ ಕಾರುಗಳಿಗೆ ಆಫರ್!ಲೋನ್ ಇಲ್ಲದೆ ಕಾರು ಸಿಗಲಿದೆ: ಮಾರುತಿ ಸುಜುಕಿ ಕಾರುಗಳಿಗೆ ಆಫರ್!

ಮಾದರಿ ಮತ್ತು ರೂಪಾಂತರವನ್ನು ಅವಲಂಬಿಸಿ ಎಂ & ಎಂ ವೈಯಕ್ತಿಕ ಮತ್ತು ವಾಣಿಜ್ಯ ವಾಹನಗಳ ಶ್ರೇಣಿಯ ಬೆಲೆಗಳನ್ನು, 4,500 ರೂಪಾಯಿಯಿಂದ 40,000 ರೂಪಾಯಿವರೆಗೆ ಹೆಚ್ಚಿಸುತ್ತದೆ ಎಂದು ಕಂಪನಿಯು ರೆಗ್ಯುಲೇಟರಿ ಫೈಲಿಂಗ್‌ನಲ್ಲಿ ತಿಳಿಸಿದೆ.

Mahindra Vehicles Get Costlier From Today: Details Here

ಹೊಸ ಥಾರ್‌ನ ಮಾಡೆಲ್‌ಗೂ ಬೆಲೆ ಏರಿಕೆಯಾಗಿದ್ದು , ಈಗಿನ ಬೆಲೆ ಹೆಚ್ಚಳವು ಡಿಸೆಂಬರ್ 1, 2020 ಮತ್ತು ಜನವರಿ 7, 2021 ರ ನಡುವೆ ಮಾಡಿದ ಎಲ್ಲಾ ಬುಕಿಂಗ್‌ಗಳಿಗೆ ಪರಿಣಾಮಕಾರಿಯಾಗಲಿದೆ ಎಂದು ಎಂ & ಎಂ ಹೇಳಿದೆ. ಜನವರಿ 8, 2021 ರಿಂದ ಹೊಸ ಥಾರ್‌ಗಾಗಿ ಎಲ್ಲಾ ಹೊಸ ಬುಕಿಂಗ್‌ಗಳು ವಿತರಣಾ ದಿನಾಂಕದಂದು ಅನ್ವಯವಾಗುವಂತೆ ಬೆಲೆಗಳನ್ನು ಹೊಂದಿರುತ್ತದೆ ಎಂದು ಕಂಪನಿ ತಿಳಿಸಿದೆ.

English summary
Mumbai-based automaker Mahindra & Mahindra (M&M) on Friday announced hike in prices of its range of personal and commercial vehicles by around 1.9% with immediate effect.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X