ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್19 ಹೊಡೆತ: ಮಹೀಂದ್ರಾ ಸಂಸ್ಥೆಗೆ 3,255 ಕೋಟಿ ರು ನಷ್ಟ

|
Google Oneindia Kannada News

ನವದೆಹಲಿ, ಜೂನ್ 14: ಕೊರೊನಾವೈರಸ್ ಜಾಗತಿಕ ಮಹಾಮಾರಿ ಮಹೀಂದ್ರಾ ಅಂಡ್ ಮಹೀಂದ್ರಾ ಸಂಸ್ಥೆಗೆ ಕಳೆದ ತ್ರೈಮಾಸಿಕದಲ್ಲಿ ಭಾರಿ ಆರ್ಥಿಕ ಹೊಡೆತ ಬಿದ್ದಿದೆ. ಮಾರ್ಚ್ 31, 2020ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಮಹೀಂದ್ರಾ ಸಂಸ್ಥೆಗೆ 3,255 ಕೋಟಿ ರು ನಷ್ಟ ಉಂಟಾಗಿದೆ. ಮಹೀಂದ್ರಾ ವೆಹಿಕಲ್ ಮ್ಯಾನುಫಾಕ್ಚರರ್ಸ್ ಲಿಮಿಟೆಡ್ (ಎಂವಿಎಂಎಲ್) ಜನವರಿ-ಮಾರ್ಚ್ ಅವಧಿಯಲ್ಲಿ 2018-19ರಲ್ಲಿ 969.25 ನಿವ್ವಳ ಲಾಭ ಗಳಿಸಿದೆ.

ಆದಾಯ: 4ನೇ ತ್ರೈಮಾಸಿಕದಲ್ಲಿ ಕಳೆದ ವರ್ಷ 13,807.88 ಕೋಟಿ ರು ಆದಾಯ ಗಳಿಸಿದ್ದ ಸಂಸ್ಥೆ ಈ ವರ್ಷ 9,004.72 ಕೋಟಿ ರು ಮಾತ್ರ ಗಳಿಸಲು ಸಾಧ್ಯವಾಗಿದೆ.

ಟ್ರ್ಯಾಕ್ಟರ್‌ಗಳನ್ನು ಬಾಡಿಗೆ ನೀಡಲು ಮಹೀಂದ್ರಾ ಕಂಪನಿ ಯೋಜನೆಟ್ರ್ಯಾಕ್ಟರ್‌ಗಳನ್ನು ಬಾಡಿಗೆ ನೀಡಲು ಮಹೀಂದ್ರಾ ಕಂಪನಿ ಯೋಜನೆ

ನೈರ್ಮಲ್ಯೀಕರಣ ಮತ್ತು ಸ್ವಚ್ಛ ಭಾರತದಂತಹ ಆಂದೋಲನವನ್ನು ಹೆಚ್ಚಿಸಿ,ಪ್ರವಾಸಕ್ಕಾಗಿ ಚೀನಾವನ್ನು ಹುಡುಕುವ ಪ್ರವಾಸಿಗರಿಗೆ ಭಾರತವನ್ನು ಹುಡುಕುವ ರೀತಿಯಲ್ಲಿ ಆಕರ್ಷಿಸಬೇಕು.-ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ ವಸ್ತುಗಳಿಗೆ ಪರ್ಯಾಯ ಮಾರ್ಗಗಳನ್ನು, ಹೂಡಿಕೆದಾರರನ್ನು ಪ್ರೋತ್ಸಾಹಿಸಬೇಕಿದೆ. -ಸರ್ಕಾರವು ಕಡಿಮೆ ಬೆಲೆ ಇರುವ ತೈಲ ಬಳಕೆಗೆ ಪ್ರೋತ್ಸಾಹಿಸಬೇಕು. ಆಗ ಬೇಡಿಕೆಯನ್ನು ಪೂರೈಸಲು ಸಾಧ್ಯ. ಕೊರೊನಾ ಎನ್ನುವುದು ಜಾಗತಿಕ ಬಿಕ್ಕಟ್ಟು ನಾವು ಅದನ್ನು ಹೋಗಲಾಡಿಸಲು ಪಣ ತೊಡಬೇಕು , ಸಿಕ್ಕ ಅವಕಾಶಗಳಲ್ಲಿ ಅನ್ವೇಷಣೆ ನಡೆಸಬೇಕು ಎಂದು ಸಂಸ್ಥೆ ಮುಖ್ಯಸ್ಥ ಆನಂದ್ ಮಹೀಂದ್ರಾ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

 ಶೇ 47ರಷ್ಟು ಮಾರಾಟ ಕುಸಿತ

ಶೇ 47ರಷ್ಟು ಮಾರಾಟ ಕುಸಿತ

ಮಾರಾಟ ವರದಿ: 4ನೇ ತ್ರೈಮಾಸಿಕದಲ್ಲಿ ಶೇ 47ರಷ್ಟು ಮಾರಾಟ ಕುಸಿತವಾಗಿದ್ದು, 86,351 ವಾಹನಗಳನ್ನು ಮಾತ್ರ ಮಾರಾಟ ಮಾಡಲು ಸಾಧ್ಯವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,63,937 ವಾಹನಗಳನ್ನು ಮಾರಾಟ ಮಾಡಲಾಗಿತ್ತು.

 2019-20 ಅವಧಿಯ ವಾರ್ಷಿಕ ಲಾಭ

2019-20 ಅವಧಿಯ ವಾರ್ಷಿಕ ಲಾಭ

ವಾರ್ಷಿಕ ಲಾಭ: 2019-20 ಅವಧಿಯಲ್ಲಿ ನಿವ್ವಳ ಲಾಭ 739. 71 ಕೋಟಿ ರುಗಳಿಕೆಯಾಗಿದೆ. 2018-19 ವರ್ಷದಲ್ಲಿ ಇದೇ ಅವಧಿಯಲ್ಲಿ 5,401.18 ಕೋಟಿ ರು ಗಳಿಕೆಯಾಗಿತ್ತು.

1 ರು ಇಡ್ಲಿ 'ಅಜ್ಜಿ' ಬಾಳಲ್ಲಿ ಬೆಳಕು ಮೂಡಿಸಿದ ಆನಂದ್ ಮಹೀಂದ್ರಾ ಟ್ವೀಟ್1 ರು ಇಡ್ಲಿ 'ಅಜ್ಜಿ' ಬಾಳಲ್ಲಿ ಬೆಳಕು ಮೂಡಿಸಿದ ಆನಂದ್ ಮಹೀಂದ್ರಾ ಟ್ವೀಟ್

 2019-20 ಅವಧಿಯಲ್ಲಿಆದಾಯ

2019-20 ಅವಧಿಯಲ್ಲಿಆದಾಯ

ವಾರ್ಷಿಕ ಆದಾಯ: 2019-20 ಅವಧಿಯಲ್ಲಿಆದಾಯ 44,865.521 ಕೋಟಿ ರು ಗಳಿಕೆಯಾಗಿದೆ. 2018-19 ವರ್ಷದಲ್ಲಿ ಇದೇ ಅವಧಿಯಲ್ಲಿ 52,848.21 ಕೋಟಿ ರು ಗಳಿಕೆಯಾಗಿತ್ತು.

 ಮಹೀಂದ್ರಾ ಸಂಸ್ಥೆ ನಷ್ಟಕ್ಕೆ ಕಾರಣವೇನು?

ಮಹೀಂದ್ರಾ ಸಂಸ್ಥೆ ನಷ್ಟಕ್ಕೆ ಕಾರಣವೇನು?

"ಕೊವಿಡ್ 19 ಪರಿಸ್ಥಿತಿ, ಬಿಎಸ್ 6 ಗುಣಮಟ್ಟಕ್ಕಾಗಿ ಬದಲಾವಣೆ, ಲಾಕ್ಡೌನ್ ಎಲ್ಲವೂ ಸಂಸ್ಥೆಯ ನಷ್ಟಕ್ಕೆ ಕಾರಣವಾಗಿದೆ. ಮುಂಬರುವ ದಿನಗಳಲ್ಲಿ ಮಾರಾಟ ಪ್ರಗತಿ ಕಾಣುವ ಅಶಯವಿದೆ, ಗ್ರಾಮೀಣ ಪ್ರದೇಶದಲ್ಲಿ ಟ್ರ್ಯಾಕ್ಟರ್ ಗಾಗಿ ಬೇಡಿಕೆ ಹೆಚ್ಚುತ್ತಿದೆ'' ಎಂದು ಮಹೀಂದ್ರಾ ಸಂಸ್ಥೆ ಹೇಳಿದೆ.

ಕಾರು ತಯಾರಿಕೆ ಬಿಟ್ಟು ವೆಂಟಿಲೇಟರ್ಸ್ ತಯಾರಿಕೆಗೆ ಮುಂದಾದ ಮಹೀಂದ್ರಾಕಾರು ತಯಾರಿಕೆ ಬಿಟ್ಟು ವೆಂಟಿಲೇಟರ್ಸ್ ತಯಾರಿಕೆಗೆ ಮುಂದಾದ ಮಹೀಂದ್ರಾ

English summary
Mahindra & Mahindra (M&M) on Friday reported a consolidated net loss of Rs 3,255.02 crore for the quarter ended on March 31, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X