ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಜಿನ್‌ನಲ್ಲಿ ದೋಷ: 1,577 ಥಾರ್ ಕಾರುಗಳನ್ನು ಹಿಂಪಡೆದ ಮಹೀಂದ್ರಾ

|
Google Oneindia Kannada News

ನವದೆಹಲಿ, ಫೆಬ್ರವರಿ 04: ಮಹೀಂದ್ರಾ ಕಂಪನಿಯ ಅತ್ಯಂತ ಜನಪ್ರಿಯ ಎಸ್‌ಯುವಿ ಥಾರ್ ಕಾರುಗಳು ಅನೇಕ ದಾಖಲೆಗೆ ಕಾರಣವಾಗಿದ್ದು, ಅತ್ಯಂತ ಬೇಡಿಕೆ ಹೊಂದಿರುವ ಸಂದರ್ಭದಲ್ಲಿ ಹೊಸ ಡೀಸೆಲ್ ಎಂಜಿನ್ ಕಾರುಗಳಲ್ಲಿ ದೋಷ ಪತ್ತೆಯಾಗಿದೆ.

ಥಾರ್ ಕಾರಿನ ಡೀಸೆಲ್ ಮಾದರಿಯಲ್ಲಿನ ಕ್ಯಾಮ್‌ಶಾಫ್ಟ್ಸ್‌ಗಳ ದೋಷದಿಂದ ಎಂಜಿನ್ ಕಾರ್ಯಕ್ಷಮತೆ ಪರಿಣಾಮ ಬೀರುತ್ತಿದ್ದು, ಈ ಕುರಿತು ಗ್ರಾಹಕರ ದೂರುಗಳಿಗೆ ಸ್ವಂದಿಸಿರುವ ಕಂಪನಿಯು 1,577 ಯುನಿಟ್ ಮಾದರಿಗಳಲ್ಲಿನ ತಾಂತ್ರಿಕ ದೋಷವನ್ನು ಪತ್ತೆಹಚ್ಚಿದೆ.

ಹೊಚ್ಚ ಹೊಸ ಎಸ್ ಯುವಿ ಮಹೀಂದ್ರಾ XUV300 ಮಾರುಕಟ್ಟೆಗೆಹೊಚ್ಚ ಹೊಸ ಎಸ್ ಯುವಿ ಮಹೀಂದ್ರಾ XUV300 ಮಾರುಕಟ್ಟೆಗೆ

ಆಫ್ ರೋಡ್ ಕಾರುಗಳಲ್ಲೇ ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಈ ನ್ಯೂ ಜನರೇಷನ್ ಥಾರ್ ಕಾರಿನ ಡೀಸೆಲ್ ಮಾದರಿಯ ಎಂಜಿನ್‌ನಲ್ಲಿ ತಾಂತ್ರಿಕ ಸಮಸ್ಯೆ ಪತ್ತೆಯಾಗಿರುವ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಅಧಿಕೃತ ಡೀಲರ್ಸ್‌ಗಳಲ್ಲಿ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಸರಿಪಡಿಸಿಕೊಳ್ಳುವಂತೆ ಕಂಪನಿ ಮನವಿ ಮಾಡಿದೆ.

 Mahindra Recalls 1577 Units Of Diesel Thar After Faulty Engine Part

ಕ್ಯಾಮ್‌ಶಾಫ್ಟ್ಸ್‌ಗಳ ದೋಷವು ಕಾರುಗಳ ಪಿಕ್ಅಪ್ ಮೇಲೆ ಪರಿಣಾಮ ಉಂಟುಮಾಡುವುದಲ್ಲದೆ ಇಂಧನ ದಕ್ಷತೆಗೂ ಅದು ಹಿನ್ನಡೆ ಉಂಟು ಮಾಡಲಿದ್ದು, ಈಗಾಗಲೇ ಕಾರು ಹಿಂಪಡೆಯುವಿಕೆ ಅಭಿಯಾನದಲ್ಲಿ ತಾಂತ್ರಿಕ ದೋಷ ಸರಿಪಡಿಸಿಕೊಂಡಿರುವ ಗ್ರಾಹಕರು ಹೊಸ ಕಾರಿನ ಪರ್ಫಾಮೆನ್ಸ್ ಅನುಭವ ಹಂಚಿಕೊಳ್ಳಲಿದ್ದಾರೆ.

ಸೆಪ್ಟೆಂಬರ್ 7 ರಿಂದ 2020 ರ ಡಿಸೆಂಬರ್ 25 ರ ನಡುವೆ ತಯಾರಾದ 1,577 ಯುನಿಟ್ ಥಾರ್ ಡೀಸೆಲ್ ರೂಪಾಂತರಗಳ ಬ್ಯಾಚ್‌ನಲ್ಲಿ ಪೂರ್ವಭಾವಿ ಪರಿಶೀಲನೆ ಮತ್ತು ಕ್ಯಾಮ್‌ಶಾಫ್ಟ್ ಬದಲಿ ಕಾರ್ಯವನ್ನು ಕೈಗೊಳ್ಳುವುದಾಗಿ ಮಹೀಂದ್ರಾ ಕಂಪನಿ ತಿಳಿಸಿದೆ.

English summary
Mahindra & Mahindra Thursday said it is recalling 1,577 units of its SUV Thar with diesel powertrain to replace faulty camshaft, an engine part.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X