ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ಮಹೀಂದ್ರಾ XUV700 ಫ್ರೀಡಂ ಡ್ರೈವ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 12: ಹೊಸದಾಗಿ ಅನಾವರಣಗೊಂಡಿರುವ ಮಹೀಂದ್ರಾ XUV700ದ (ಉಚ್ಚಾರ- ಎಸ್‌ಯುವಿ 7ಒಒ) ಪ್ರಚಾರ ಅಭಿಯಾನ ಉದ್ದೇಶದ 'ಫ್ರೀಡಂ ಡ್ರೈವ್' ಈಗ ಬೆಂಗಳೂರು ಮಹಾನಗರ ತಲುಪಿದೆ. 'ಫ್ರೀಡಂ ಡ್ರೈವ್' ಅಭಿಯಾನವು XUV700 ದ ಸಂಭ್ರಮಚಾರಣೆ ಉದ್ದೇಶದ ಪರಿಕಲ್ಪನೆಯಾಗಿದೆ.

ಉತ್ತರ, ಪಶ್ಚಿಮ, ದಕ್ಷಿಣ ಮತ್ತು ಪೂರ್ವ ವಲಯಗಳಿಂದ ಆರಂಭಗೊಂಡಿರುವ ಒಟ್ಟು 80 ವಾಹನಗಳ 'ಫ್ರೀಡಂ ಡ್ರೈವ್' ಮುಂದಿನ 25 ದಿನಗಳಲ್ಲಿ ದೇಶದ 20 ಮಹಾನಗರಗಳಿಗೆ ಭೇಟಿ ನೀಡಲಿದೆ.
ಚೆನ್ನೈನ ಮಹೀಂದ್ರಾ ಸಂಶೋಧನಾ ಕೇಂದ್ರದಿಂದ 2021ರ ಸೆಪ್ಟೆಂಬರ್ 4ರಂದು ಈ 'ಫ್ರೀಡಂ ಡ್ರೈವ್'ಗೆ ಚಾಲನೆ ನೀಡಲಾಗಿದೆ. XUV700 ವಾಹನಗಳು ತಮ್ಮ ಈ ಸುದೀರ್ಘ ಪಯಣದ ಹಾದಿಯಲ್ಲಿ ಪ್ರಮುಖ ನಗರಗಳಲ್ಲಿ ತಾತ್ಕಾಲಿಕ ನಿಲುಗಡೆ ಹೊಂದಲಿವೆ. ಈ ಸಂದರ್ಭದಲ್ಲಿ ಪ್ರತಿಯೊಂದು ನಗರವು ನೀಡುವ ಅನನ್ಯ ಪ್ರಚಾರದೊಂದಿಗೆ ವಾಹನದ ವೈಭವವನ್ನು ವಾಹನ ಪ್ರೇಮಿಗಳು ಕಣ್ತುಂಬಿಕೊಳ್ಳಬಹುದು.

ವಾಹನ ಲೋಕದಲ್ಲಿ ಗಮನ ಸೆಳೆಯಬೇಕೆಂಬ ಉದ್ದೇಶದಿಂದಲೇ ಇದರ ವಿನ್ಯಾಸವನ್ನು ವಿಶೇಷವಾಗಿ ಸಿದ್ಧಪಡಿಸಿ ತಯಾರಿಸಲಾಗಿದೆ. ಇದಕ್ಕೆ ದೇಶದ ಎಲ್ಲ ಭಾಗಗಳಲ್ಲಿನ ವಾಹನ ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.

Mahindra Freedom Drive with the XUV700 makes a pitstop at Bengaluru

ಬೆಂಗಳೂರಿನಲ್ಲಿ ನಿಮಗೆ ಸಮೀಪದ ಷೋರೂಂಗಳಲ್ಲಿ ಈ ವಾಹನವನ್ನು ಹತ್ತಿರದಿಂದ ವೀಕ್ಷಿಸಬಹುದಾಗಿತ್ತು. ಬುಕಿಂಗ್ ಬೆಲೆ, ವಿಭಿನ್ನ ಮಾದರಿಗಳ ವಿವರಗಳನ್ನು ಸದ್ಯದಲ್ಲೇ ನೀಡಲಾಗುವುದು.
ಶನಿವಾರ, 11ನೇ ಸೆಪ್ಟೆಂಬರ್ ರಂದು ಬೆಂಗಳೂರಿನ ಅನಂತ್ ಕಾರ್ಸ್, ಸಿರೀಶ್ ಆಟೊ ಪ್ರೈವೇಟ್ ಲಿಮಿಟೆಡ್, ಪಿಪಿಎಸ್ ಮೋಟರ್ಸ್, ಇಂಡಿಯಾ ಗ್ಯಾರೇಜ್ ಡೀಲರ್‌ಶಿಪ್‌ಗಳಲ್ಲಿ ಪ್ರದರ್ಶನಕ್ಕಿಡಲಾಗಿತ್ತು.

XUV700ದ ಸಂವೇದನಾಶೀಲ ಮತ್ತು ಅತ್ಯಾಧುನಿಕ ಹೊರಭಾಗವು ಸ್ಪೋಟ್ರ್ಸ್ ಯುಟಿಲಿಟಿ ವೆಹಿಕಲ್‍ಗಾಗಿ (SUV) ಅತ್ಯಂತ ಗರಿಷ್ಠ ಮಟ್ಟದ ವೈಜ್ಞಾನಿಕವಾಯುಬಲದ (ಏರೊಡೈನಮಿಕ್) ವಿನ್ಯಾಸವನ್ನು ಒದಗಿಸುತ್ತದೆ. XUV700-ಇದು ಗ್ಯಾಸೋಲಿನ್ ಮತ್ತು ಸಂಪೂರ್ಣ ಅಲ್ಯುಮಿನಿಯಂ ಡೀಸೆಲ್ ಎಂಜಿನ್‍ಗಳಲ್ಲಿ ಹೊಸ ತಲೆಮಾರಿನ 6-ಸ್ಪೀಡ್ ಮ್ಯಾನುವಲ್ ಮತ್ತು ಆಟೊಮ್ಯಾಟಿಕ್ ಟ್ರಾನ್ಸಮಿಷನ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ. ಶಕ್ತಿಯುತ 2 ಲೀಟರ್ ಟರ್ಬೊ ಜಿಡಿಐ ಎಂಸ್ಟಾಲಿನ್ ಎಂಜಿನ್ (ಗ್ಯಾಸೋಲಿನ್) 1750 ಮತ್ತು 3000 ಆರ್‍ಪಿಎಂ ನಡುವೆ 380 ಎನ್‍ಎಂ ಸ್ಪೂಲ್ಸ್‌ಔಟ್ ಮತ್ತು 5,000 ಆರ್‍ಪಿಎಂನಲ್ಲಿ 200 ಪಿಎಸ್ ಅಭಿವೃದ್ಧಿಪಡಿಸುತ್ತದೆ.

ಈ ಎಂಜಿನ್ ಸಂಸ್ಕರಿಸಿದ ಮೋಟಾರಿಂಗ್ ಮತ್ತು ಲೀನಿಯರ್ ಶಕ್ತಿ ವಿತರಿಸುತ್ತದೆ. 2.2 ಲೀಟರ್ ಕಾಮನ್‍ರೇಲ್ ಟರ್ಬೊ ಡೀಸೆಲ್ ಎಂಹಾಕ್ ಎಂಜಿನ್ ಅದರ ಟಾರ್ಕ್‍ಗೆ ಹೆಸರುವಾಸಿಯಾಗಿದೆ. ಎರಡು ಟ್ಯೂನ್‍ಗಳಲ್ಲಿ ಲಭ್ಯವಿದೆ - 185 ಪಿಎಸ್ ಆವೃತ್ತಿ 420 ಎನ್‍ಎಂ (ಮ್ಯಾನುವಲ್) / 450 ಎನ್‍ಎಂ (ಆಟೊಮ್ಯಾಟಿಕ್) ಮತ್ತು 155 ಪಿಎಸ್ ವೇರಿಯಂಟ್ 360 ಎನ್‍ಎಂ (ಮ್ಯಾನುವಲ್ ಟ್ರಾನ್ಸ್‍ಮಿಷನ್). XUV700 - ಇದರ ಒಳಾಂಗಣವು ತುಂಬ ಆಕರ್ಷಕವಾಗಿದೆ. 10.25 ಇಂಚಿನ ಟ್ವಿನ್ ಫ್ಲೋಟಿಂಗ್ ಡಿಸ್‍ಪ್ಲೇ ಸ್ಕ್ರೀನ್, ಸಾಂಪ್ರದಾಯಿಕ ಕ್ಲಸ್ಟರ್ ವಿತ್ ಬಿನ್ಯಾಕಲ್ಸ್ ಬದಲಿಸಲಿದೆ. ಬೆಳಕಿನ ಛಾಯೆಯ ಹೊದಿಕೆಗಳು ಮತ್ತು ವಿಹಂಗಮ ಸ್ಕೈರೂಫ್- ಒಳಾಂಗಣವು ವಿಶಾಲವಾಗಿರುವಂತೆ ಮತ್ತು ಶಾಂತವಾಗಿರುವಂತೆ ಮಾಡುತ್ತದೆ.

Mahindra Freedom Drive with the XUV700 makes a pitstop at Bengaluru

Recommended Video

ಜಿಟಿಡಿ vs ಹೆಚ್ಡಿಡಿ !! ಗೆಲ್ಲೋದು ಯಾರು ? | Oneindia Kannada

ಸುರಕ್ಷತೆಯು XUV700ರ ಪ್ರಮುಖ ಸೌಲಭ್ಯಗಳಲ್ಲಿ ಒಂದಾಗಿದೆ. ಇದು ಹಲವಾರು ಬಗೆಯ ಸುರಕ್ಷತಾ ಸೌಲಭ್ಯಗಳನ್ನು ಒಳಗೊಂಡಿದೆ. XUV700 - ಇದು, ಮಹೀಂದ್ರಾದ ಹೊಸ ತಲೆಮಾರಿನ ಎಸ್‍ಯುವಿಗಳಲ್ಲಿ ಮೊದಲನೆಯದಾಗಿದೆ. ಇದನ್ನು XUV500 ನಂತಹ ಆದರ್ಶ ಎಸ್‍ಯುವಿಗಳಿಂದ ಸ್ಥಾಪಿತವಾದ ಪರಂಪರೆ ಆಧರಿಸಿ ತಯಾರಿಸಲಾಗಿದೆ. ಇದು ಈ ವಲಯದ ಎಸ್‍ಯುವಿಗಳಲ್ಲಿಯೇ ಮೊದಲನೇ ಬಾರಿಗೆ ಅಳವಡಿಸಿಕೊಂಡಿರುವ ಆ್ಯಡ್ರೆನಾಕ್ಸ್ ತಂತ್ರಜ್ಞಾನದಂತಹ ಹೊಸ ಸೌಲಭ್ಯಗಳನ್ನು ಹೊಂದಿದೆ. ಈ ಮೂಲಕ ಇದು ತನ್ಮಯಗೊಳಿಸುವಂತಹ ವೈಜ್ಞಾನಿಕ ಅನುಭವ ನೀಡಲಿದೆ.

English summary
In continuation of the Freedom Drive with the newly unveiled Mahindra XUV700 (pronounced as XUV, 7 double ‘Oh’) the truly majestic convoy rolled into buzzing city of Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X