ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷಾರಂಭದಲ್ಲೇ ಬ್ರೇಕಪ್: ಮಹೀಂದ್ರಾ- ಫೋರ್ಡ್ JV ಇಲ್ಲ

|
Google Oneindia Kannada News

ನವದೆಹಲಿ, ಜ .1: ಭಾರತದ ಮಹೀಂದ್ರಾ ಹಾಗೂ ಮಹೀಂದ್ರಾ ಲಿಮಿಟೆಡ್ ಹಾಗೂ ಫೋರ್ಡ್ ಮೋಟರ್ ಕೋ ಜಂಟಿ ಪಾಲುದಾರಿಕೆ(Joint Venture) ಮಾತುಕತೆ ಮುರಿದು ಬಿದ್ದಿದೆ. ಈ ಮೂಲಕ 2021 ವರ್ಷಾರಂಭದಲ್ಲೇ ಆಟೋಮೊಬೈಲ್ ಕ್ಷೇತ್ರದ ಮೊದಲ ಬ್ರೇಕಪ್ ಇದೆನಿಸಿದೆ. ಕೊವಿಡ್ 19 ಆರ್ಥಿಕ ಸಂಕಷ್ಟ ಇನ್ನೂ ಮುಂದುವರೆದಿರುವುದರಿಂದ ಮಹೀಂದ್ರಾ ಜೊತೆಗೆ ಪಾಲುದಾರಿಕೆ ಸದ್ಯವಿಲ್ಲ ಎಂದು ಫೋರ್ಡ್ ಸಂಸ್ಥೆ ಹೇಳಿದೆ.

"ಕಳೆದ ವರ್ಷ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ಪರಿಸ್ಥಿತಿ ಏನು ಬದಲಾಗಿಲ್ಲ, ಜಾಗತಿಕ ಆರ್ಥಿಕ ಪರಿಸ್ಥಿತಿ ಸುಧಾರಿಸದ ಹೊರತೂ ಹೊಸ ಪಾಲುದಾರಿಕೆ ಸಾಧ್ಯವಿಲ್ಲ'' ಎಂದು ಫೋರ್ಡ್ ವಕ್ತಾರ ಟಿ. ಆರ್ ರೇಡ್ ಹೇಳಿದ್ದಾರೆ.

ಕೊವಿಡ್19 ಹೊಡೆತ: ಮಹೀಂದ್ರಾ ಸಂಸ್ಥೆಗೆ 3,255 ಕೋಟಿ ರು ನಷ್ಟಕೊವಿಡ್19 ಹೊಡೆತ: ಮಹೀಂದ್ರಾ ಸಂಸ್ಥೆಗೆ 3,255 ಕೋಟಿ ರು ನಷ್ಟ

ಡಿಸೆಂಬರ್ 31, 2020ಕ್ಕೆ ಮಹೀಂದ್ರಾ ಹಾಗೂ ಫೋರ್ಡ್ JV ಅಂತಿಮಗೊಳ್ಳಬೇಕಿತ್ತು. ಉಭಯ ಸಂಸ್ಥೆಗಳು ಒಪ್ಪಂದ ಕೊನೆಯಾಗಿಸಲು ನಿರ್ಧರಿಸಿ ಪ್ರತ್ಯೇಕ ಪ್ರಕಟಣೆ ಹೊರಡಿಸಿವೆ.

Mahindra-Ford joint venture plans called off

 2021ರ ಜನವರಿ 1ರಿಂದ ತನ್ನ ವಾಹನಗಳ ಬೆಲೆ ಹೆಚ್ಚಿಸುವುದಾಗಿ ಘೋಷಿಸಿದ ಮಹೀಂದ್ರಾ & ಮಹೀಂದ್ರಾ 2021ರ ಜನವರಿ 1ರಿಂದ ತನ್ನ ವಾಹನಗಳ ಬೆಲೆ ಹೆಚ್ಚಿಸುವುದಾಗಿ ಘೋಷಿಸಿದ ಮಹೀಂದ್ರಾ & ಮಹೀಂದ್ರಾ

ಸ್ಫೋರ್ಟ್ಸ್ ಯುಟಿಲಿಟಿ ವೆಹಿಕಲ್, ಎಲೆಕ್ಟ್ರಿಕ್ ವೆಹಿಕಲ್ ಉತ್ಪಾದನೆಯಲ್ಲಿ ಮಹೀಂದ್ರಾ ಜೊತೆ ಕೈ ಜೋಡಿಸಲು ಫೋರ್ಡ್ ಮುಂದಾಗಿತ್ತು. ಫೋರ್ಡ್ ಜೊತೆಗಿನ ಜಂಟಿ ಪಾಲುದಾರಿಕೆ ಮುರಿದು ಬಿದ್ದರೂ ಎಲೆಕ್ಟ್ರಿಕ್ SUV ಉತ್ಪಾದನೆಯಲ್ಲಿ ಯಾವುದೇ ವಿಳಂಬವಾಗುವುದಿಲ್ಲ, ಎಲ್ಲಾ ವಾಹನಗಳ ಉತ್ಪಾದನೆ, ಮಾರಾಟ ಎಂದಿನಂತೆ ನಡೆಯಲಿದೆ ಎಂದು ಮಹೀಂದ್ರಾ ವಕ್ತಾರರು ಹೇಳಿದ್ದಾರೆ.

English summary
Ford Motor Co said on Thursday it was calling off its automotive joint venture with India's Mahindra and Mahindra Ltd due to the challenges caused by the COVID-19 pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X