• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಹೀಂದ್ರಾ ಸಂಸ್ಥೆಯಿಂದ ಹೊಸ ''ಥಾರ್'' ಮಾರುಕಟ್ಟೆಗೆ ಎಂಟ್ರಿ

|

ನವದೆಹಲಿ, ಅ. 2: ಮಹೀಂದ್ರಾ ಅಂಡ್ ಮಹೀಂದ್ರಾ ಸಂಸ್ಥೆಯು ಶುಕ್ರವಾರದಂದು ಹೊಚ್ಚ ಹೊಸ ಮಾದರಿಯ ಕ್ರೀಡಾ ಉಪಯುಕ್ತ ವಾಹನ(SUV) ಥಾರ್ ಪರಿಚಯಿಸಿದೆ. ಎರಡು ಮಾದರಿಯಲ್ಲಿ ಎರಡು ಭಿನ್ನ ಬೆಲೆಯಲ್ಲಿ, ಪೆಟ್ರೋಲ್ ಹಾಗೂ ಡೀಸೆಲ್ ಎರಡೂ ಬಗೆಯಲ್ಲೂ ಈ ಥಾರ್ ಲಭ್ಯವಿರಲಿದೆ.

ಪೆಟ್ರೋಲ್ ಎಎಕ್ಸ್ ಟ್ರಿಮ್ಸ್ ಬೆಲೆ 9.8 ಲಕ್ಷ ರು, 10.65 ಲಕ್ಷ ಹಾಗೂ 11. 9 ಲಕ್ಷ ರು ಇದ್ದರೆ, ಡೀಸೆಲ್ ಆವೃತ್ತಿ ಬೆಲೆ 10.85 ಲಕ್ಷ ರು ನಿಂದ ಆರಂಭವಾಗಿ 12.10 ಲಕ್ಷ ರು ಹಾಗೂ 12.2 ಲಕ್ಷ ರು ತನಕ ಇದೆ.

ಬೆಂಗಳೂರಿಗೆ ಹೆಜ್ಜೆ ಇಡಲು ಯೋಜಿಸಿದೆ ಖ್ಯಾತ ಕಾರು ತಯಾರಕ ಟೆಸ್ಲಾ ಕಂಪನಿ

ಇದೇ ಪೆಟ್ರೋಲ್ ಎಲ್ ಎಕ್ಸ್ ಆವೃತ್ತಿ ಬೆಲೆ 12.49 ಲಕ್ಷ ರು ಹಾಗೂ ಡೀಸೆಲ್ ಬೆಲೆ 12.85 ಲಕ್ಷ ಹಾಗೂ 12. 95 ಲಕ್ಷ ರು ಇದೆ. ಪೆಟ್ರೋಲ್ ಆಟೋಮ್ಯಾಟಿಕ್ ಬೆಲೆ ಸ್ವಲ್ಪ ಹೆಚ್ಚಿದ್ದು 13.45 ಲಕ್ಷ ರು ಆಗಲಿದೆ. 2 ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್ ಡೀಸೆಲ್ ಮಾದರಿ 13.65 ಲಕ್ಷ ಹಾಗೂ 13.75 ಲಕ್ಷ ರು ಇದೆ.

4 ವ್ಹೀಲ್ ಡ್ರೈವ್ ಹಾಗೂ 2 ಲೀಟರ್ ಪವರ್ ಟ್ರೈನ್ ಪೆಟ್ರೋಲ್ ಇಂಜಿನ್ 150 ಬಿಎಚ್ ಪಿ ಪವರ್ ಹಾಗೂ 2.2 ಲೀ ಡೀಸೆಲ್ ಮಾದರಿ 130 ಬಿಎಚ್ ಪಿ ಪವರ್ ಹೊಂದಿದೆ. 17.7 ಸೆಂ. ಮೀ ಇನ್ಫೋಟೇನ್ಮೆಂಟ್ ಡಿಸ್ಪ್ಲೇ ,ಕ್ರೂಸ್ ನಿಯಂತ್ರಕಗಳನ್ನು ಒಳಗೊಂಡಿದೆ. ಶುಕ್ರವಾರದಿಂದಲೇ ಬುಕ್ಕಿಂಗ್ ಆರಂಭವಾಗಿದ್ದು, ಮುಂದಿನ ತಿಂಗಳಿನಿಂದ ಡೆಲಿವರಿ ನೀಡಲಾಗುವುದು ಎಂದು ಸಂಸ್ಥೆ ಹೇಳಿದೆ.

''ಮಹೀಂದ್ರಾ ಸಂಸ್ಥೆ ಇತಿಹಾಸದೊಂದಿಗೆ ಬೆರೆತಿರುವ ಥಾರ್ ವಾಹನವು ಸಂಪೂರ್ಣವಾಗಿ ನಾಸಿಕ್ ಘಟಕದಲ್ಲಿ ಉತ್ಪಾದಿಸಲಾಗಿದ್ದು, ಅನೇಕರ ಹೃದಯ ಗೆಲ್ಲುವ ನಿರೀಕ್ಷೆಯಿದೆ'' ಎಂದು ಎಂ ಅಂಡ್ ಎಂ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಪವನ್ ಗೋಯೆಂಕಾ ಹೇಳಿದ್ದಾರೆ.

English summary
Mahindra & Mahindra (M&M) on Friday launched the all-new version of its sports utility vehicle Thar, priced between Rs 9.8 lakh and Rs 13.75 lakh (ex-showroom). The company has introduced the model in two trims AX and LX with both petrol and diesel powertrain options.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X