ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಕ್ ಟಾಕ್ App ಮೇಲಿನ ನಿಷೇಧ ಹಿಂದಕ್ಕೆ, ಹೈಕೋರ್ಟ್ ಆದೇಶ

|
Google Oneindia Kannada News

ಚೆನ್ನೈ, ಏಪ್ರಿಲ್ 24: ಚೀನಾ ಮೂಲದ ಜನಪ್ರಿಯ ಮೊಬೈಲ್ ಅಪ್ಲಿಕೇಷನ್ ಟಿಕ್ ಟಾಕ್ ಮೇಲೆ ಹೇರಲಾಗಿದ್ದ ನಿಷೇಧವನ್ನು ಮದ್ರಾಸ್ ಹೈಕೋರ್ಟ್ ಬುಧವಾರದಂದು ಹಿಂಪಡೆದಿದೆ.

ಲೋಕಸಭೆ ಚುನಾವಣೆ ವಿಶೇಷ ಪುಟ

ಸುಪ್ರೀಂಕೋರ್ಟ್ ಆದೇಶದಂತೆ ಗೂಗಲ್ ಪ್ಲೇಸ್ಟೋರ್ ಹಾಗೂ ಆಪಲ್ ಸ್ಟೋರ್ ನಿಂದ ಟಿಕ್ ಟಾಕ್ ಅಪ್ಲಿಕೇಷನ್ ತೆಗೆದು ಹಾಕಲಾಗಿತ್ತು. ನಿಷೇಧ ತೆರವು ಬಳಿಕ ಶೀಘ್ರವೇ ಟಿಕ್ ಟಾಕ್ ಅಪ್ ಗ್ರಾಹಕರಿಗೆ ಲಭ್ಯವಾಗಲಿದೆ.

Madras High Court lifts ban on TikTok app

ಮದ್ರಾಸ್ ಹೈಕೋರ್ಟಿನ ಮಧುರೈ ಪೀಠವು ಟಿಕ್ ಟಾಕ್ ವಿಡಿಯೋ ಆಪ್ ಮೇಲಿನ ನಿಷೇಧ ಹಿಂಪಡೆದಿದೆ. ಟಿಕ್ ಟಾಕ್ ಆಪ್ ಬಳಸಿ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಲಾಗುತ್ತಿದ್ದು, ಅಶ್ಲೀಲ, ಅಸಭ್ಯ ವಿಡಿಯೋಗಳು ಹೆಚ್ಚಾಗಿವೆ. ಇದರಿಂದ ಮಕ್ಕಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ನಿಷೇಧ ಹೇರುವಂತೆ ಕೋರಲಾಗಿತ್ತು.

ಟಿಕ್ ಟಾಕ್ ಬ್ಯಾನ್?: ಆಪ್‌ ತೆಗೆದು ಹಾಕಲು ಗೂಗಲ್‌, ಆಪಲ್‌ಗೆ ಸೂಚನೆ ಟಿಕ್ ಟಾಕ್ ಬ್ಯಾನ್?: ಆಪ್‌ ತೆಗೆದು ಹಾಕಲು ಗೂಗಲ್‌, ಆಪಲ್‌ಗೆ ಸೂಚನೆ

ಟಿಕ್ ಟಾಕ್ ಆಪ್ ಪರಿಚಯಿಸಿರುವ ಚೀನಾ ಮೂಲದ ಬೈಟ್ ಡ್ಯಾನ್ಸ್ ಸಂಸ್ಥೆ ಪರ ಹಿರಿಯ ವಕೀಲ ಅಭಿಶೇಕ್ ಮನು ಸಿಂಘ್ವಿ ವಾದಿಸಿದರು. ಕೋಟ್ಯಂತರ ಜನ ಈ ಅಪ್ಲಿಕೇಷನ್ ಬಳಸುತ್ತಿದ್ದಾರೆ. ಈಗ ನಿಷೇಧ ಹೇರಿರುವುದರಿಂದ ನಮ್ಮ ಕಕ್ಷಿದಾರರಿಗೆ ದಿನಕ್ಕೆ 3 ಕೋಟಿ ರು ನಷ್ಟವಾಗುತ್ತಿದೆ ಎಂದಿದ್ದರು.

ಟಿಕ್‌ಟೊಕ್ ಆಪ್ ನಿಷೇಧಿಸಿ: ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಸೂಚನೆ ಟಿಕ್‌ಟೊಕ್ ಆಪ್ ನಿಷೇಧಿಸಿ: ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಸೂಚನೆ

2019ರಲ್ಲಿ ಪರಿಚಯವಾಗಿರುವ ಟಿಕ್ ಟಾಕ್ ವಿಡಿಯೋ ಅಪ್ಲಿಕೇಷನ್ ಆಗಿದ್ದು ಚೀನಾದ ಬೀಜಿಂಗ್ ಬೈಟ್ ಡ್ಯಾನ್ಸ್ ಕೋ ಸಂಸ್ಥೆಗೆ ಸೇರಿದೆ. ಕಳೆದ ಫೆಬ್ರವರಿ ತಿಂಗಳಿನಲ್ಲಿ 100 ಕೋಟಿ ಡೌನ್ ಲೋಡ್ ಆಗಿ ದಾಖಲೆ ಬರೆದಿದೆ.

English summary
The Madurai bench of the Madras High Court on Wednesday lifted the ban on TikTok video app which was in the news over concerns about access to pornographic content through it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X