ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿ-ಎಸ್ ಯುವಿಗೆ ನಿಸಾನ್ ಮ್ಯಾಗ್ನೈಟ್ ಎಂದು ಹೆಸರಿಟ್ಟ ನಿಸಾನ್!

|
Google Oneindia Kannada News

ಬೆಂಗಳೂರು, ಜುಲೈ 16: ನಿಸಾನ್ ಇಂಡಿಯಾ ಇಂದು ತನ್ನ ಬಹುನಿರೀಕ್ಷಿತ ಬಿ-ಎಸ್ ಯುವಿಯ ಪರಿಕಲ್ಪನೆಯನ್ನು ಪ್ರಕಟಿಸಿದೆ. ತಂತ್ರಜ್ಞಾನದಿಂದ ಶ್ರೀಮಂತಗೊಂಡ, ಮತ್ತು ಸ್ಟೈಲಿಶ್ ಬಿ-ಎಸ್ ಯುವಿಗೆ ನಿಸಾನ್ ಮ್ಯಾಗ್ನೈಟ್ ಎಂಬ ಹೆಸರಿಡಲಾಗಿದೆ. ಭಾರತದಲ್ಲಿ 2020 ನೇ ಸಾಲಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ.

Recommended Video

Oxford Covid Vaccine ಮಾನವ ಪ್ರಯೋಗದ ಪಲಿತಾಂಶ ಇಂದು | Oneindia Kannada

ಮ್ಯಾಗ್ನೆಟ್ ಅನ್ನು ಮ್ಯಾಗ್ನೆಟಿಕ್ ಮತ್ತು ಇಗ್ನೈಟ್ ಪದಗಳಿಂದ ಸಮ್ಮಿಳಿತಗೊಂಡಿದೆ. ಮ್ಯಾಗ್ನೆಟಿಕ್ ವಿನ್ಯಾಸ ಮತ್ತು ಗುಣಲಕ್ಷಣಗಳಿಂದ ಗ್ರಾಹಕರನ್ನು ಆಕರ್ಷಿಸಲಿದ್ದರೆ, ಭಾರತದಲ್ಲಿ ಹೊಸ ಯುಗವನ್ನು ಆರಂಭ ಮಾಡುವ ನಿಸಾನ್ ನ ಆಕಾಂಕ್ಷೆಯನ್ನು ಇಗ್ನೈಟ್ ಎತ್ತಿ ತೋರಿಸುತ್ತದೆ.

ನಿಸಾನ್ ದಟ್ಸನ್ ನಿಂದ ಹೊಚ್ಚ ಹೊಸ ರೆಡಿ-ಗೋ ಬಿಡುಗಡೆನಿಸಾನ್ ದಟ್ಸನ್ ನಿಂದ ಹೊಚ್ಚ ಹೊಸ ರೆಡಿ-ಗೋ ಬಿಡುಗಡೆ

ನಿಸಾನ್ ಮೋಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶ್ರೀವಾಸ್ತವ ಅವರು ಮಾತನಾಡಿ, ''ನಿಸಾನ್ ನ ಜಾಗತಿಕ ಎಸ್ ಯುವಿ ಡಿಎನ್ಎನಲ್ಲಿ ನಿಸಾನ್ ಮ್ಯಾಗ್ನೈಟ್ ಒಂದು ವಿಕಸನ ದಿಟ್ಟ ಹೆಜ್ಜೆಯಾಗಿದೆ. ಕಟ್ಟಿಂಗ್ ಹೆಡ್ಜ್ ತಂತ್ರಜ್ಞಾನವನ್ನು ಒಳಗೊಂಡಿರುವ ಈ ವಾಹನ ತನ್ನ ವಿಭಾಗದಲ್ಲಿ ಗೇಮ್ ಚೇಂಜರ್ ಆಗಲಿದೆ.

Made in India Nissan Magnite sub-compact SUV concept revealed

ಸಬ್-ಫೋರ್-ಮೀಟರ್ ವಿಭಾಗದಲ್ಲಿ ಇದೊಂದು ಬೋಲ್ಡ್ ಆದ ಆಫರ್ ಆಗಿದ್ದು, ಬಿ-ಎಸ್ ಯುವಿ ಉದ್ಯಮದಲ್ಲಿ ನಿಸಾನ್ ಮ್ಯಾಗ್ನೈಟ್ ಹೊಸ ವ್ಯಾಖ್ಯಾನ ಬರೆಯಲಿದೆ. ಈ ನಿಸಾನ್ ಮ್ಯಾಗ್ನೈಟ್ ಅನ್ನು ಮೇಕ್ ಇನ್ ಇಂಡಿಯಾ ಮೇಕ್ ಫಾರ್ ದಿ ವರ್ಲ್ಡ್ ತತ್ತ್ವದ ಆಧಾರದಲ್ಲಿ ತಯಾರಿಸಲಾಗುತ್ತಿದ್ದು, ಜಪಾನ್ ನಲ್ಲಿ ವಿನ್ಯಾಸಗೊಳಿಸಲಾಗಿದೆ. ಒಟ್ಟಾರೆ, ಭಾರತೀಯ ಗ್ರಾಹಕರ ನಿರೀಕ್ಷೆಗಳು ಮತ್ತು ಅಗತ್ಯತೆಗಳಿಗೆ ತಕ್ಕಂತೆ ವಾಹನವನ್ನು ತಯಾರಿಸಲಾಗುತ್ತಿದೆ'' ಎಂದು ತಿಳಿಸಿದರು.

Made in India Nissan Magnite sub-compact SUV concept revealed

ಶಕ್ತಿಶಾಲಿಯಾದ ಮತ್ತು ಡೈನಾಮಿಕ್ ರೋಡ್ ಪ್ರೆಸೆನ್ಸ್ ಅನ್ನು ನೀಡಲಿರುವುದರೊಂದಿಗೆ ಸ್ಟೈಲಿಶ್ ಆಗಿರುವ ನಿಸಾನ್ ಮ್ಯಾಗ್ನೈಟ್ ಪ್ರೀಮಿಯಂ ಆಫರ್ ಅನ್ನು ಒಳಗೊಂಡಿದೆ.

English summary
Nissan Magnite will be made in India and will be officially launched here in second half of FY 2020-21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X