ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವದೇಶಿ ನಿರ್ಮಿತ 'ಹೈಕ್' ಮೆಸೇಜಿಂಗ್ ಆಪ್ ಸ್ಥಗಿತ

|
Google Oneindia Kannada News

ನವದೆಹಲಿ, ಜನವರಿ 18: ವಾಟ್ಸಾಪ್‌ಗೆ ಪರ್ಯಾಯ ಎಂದು ಗುರುತಿಸಿಕೊಂಡಿದ್ದ, ಭಾರತೀಯರೇ ಅಭಿವೃದ್ಧಿಪಡಿಸಿದ್ದ 'ಹೈಕ್ ಸ್ಟಿಕ್ಕರ್ ಚಾಟ್' ಮೆಸೇಜಿಂಗ್ ಆಪ್ ಕೊನೆಯುಸಿರೆಳೆದಿದೆ. ತನ್ನ ಬಗೆಬಗೆಯ ಆಕರ್ಷಕ ಸ್ಟಿಕ್ಕರ್‌ಗಳಿಂದ ಹೆಚ್ಚು ಗಮನ ಸೆಳೆದಿದ್ದ ಹೈಕ್ ಆಪ್ ಪ್ಲೇ ಸ್ಟೋರ್‌ಗಳಿಂದ ಕಣ್ಮರೆಯಾಗಿದೆ.

ಸಾಫ್ಟ್ ಬ್ಯಾಂಕ್ ಗ್ರೂಪ್ ಕಾರ್ಪೊರೇಷನ್‌ನ ಸಹಯೋಗದಲ್ಲಿ ಭಾರ್ತಿ ಎಂಟರ್‌ಪ್ರೈಸಸ್ ಅಭಿವೃದ್ಧಿಪಡಿಸಿದ್ದ ಈ ಸಂದೇಶ ವಾಹಕ ಆಪ್ ಅನ್ನು ಮುಚ್ಚುತ್ತಿರುವುದಾಗಿ ಜನವರಿ 6ರಂದೇ ಅದರ ಸಂಸ್ಥಾಪಕ ಮತ್ತು ಸಿಇಒ ಕೆವಿನ್ ಭಾರ್ತಿ ಮಿತ್ತಲ್ ಟ್ವೀಟ್ ಮಾಡಿದ್ದರು. ವಾಟ್ಸಾಪ್‌ನ ಖಾಸಗಿತನದ ವಿವಾದ ಸೃಷ್ಟಿಯಾದ ಬಳಿಕ ಆ ಟ್ವೀಟ್ ವೈರಲ್ ಆಗಿದೆ. ಹೈಕ್ ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಪ್ಲೇ ಸ್ಟೋರ್‌ಗಳಿಂದ ತೆಗೆದುಹಾಕಲಾಗಿದೆ.

ವಾಟ್ಸಾಪ್ ಗ್ರೂಪಿನಿಂದ ಸಿಗ್ನಲ್ APP ಗ್ರೂಪಿಗೆ ಜಂಪ್ ಹೇಗೆ?ವಾಟ್ಸಾಪ್ ಗ್ರೂಪಿನಿಂದ ಸಿಗ್ನಲ್ APP ಗ್ರೂಪಿಗೆ ಜಂಪ್ ಹೇಗೆ?

'ಜನವರಿ 2021ರಿಂದ ಸ್ಟಿಕ್ಕರ್ ಚಾಟ್ ಅನ್ನು ಅಂತ್ಯಗೊಳಿಸುತ್ತಿದ್ದೇವೆ ಎಂದು ಇಂದು ನಾವು ಪ್ರಕಟಿಸುತ್ತಿದ್ದೇವೆ. ನಮಗೆ ನಿಮ್ಮ ನಂಬಿಕೆ ನೀಡಿದ್ದಕ್ಕಾಗಿ ಧನ್ಯವಾದಗಳು. ನೀವು ಇಲ್ಲದೆ ನಾವು ಇಲ್ಲಿರಲು ಸಾಧ್ಯವಿರುತ್ತಿರಲಿಲ್ಲ' ಎಂದು ಮಿತ್ತಲ್ ಟ್ವೀಟ್ ಮಾಡಿದ್ದರು.

Made In India Messaging App Hike Officially Shuts Down

ಸುಮಾರು 1.4 ಬಿಲಿಯನ್ ಡಾಲರ್ ವೆಚ್ಚದ ಈ ಸ್ಟಾರ್ಟ್‌ಅಪ್, ತನ್ನ ಆಪ್ ಅನ್ನು ಮುಚ್ಚುತ್ತಿರುವುದಕ್ಕೆ ಹೆಚ್ಚಿನ ವಿವರಣೆ ನೀಡಿಲ್ಲ. ಕೋಟ್ಯಧಿಪತಿ ಕೆವಿನ್ ಭಾರ್ತಿ ಮಿತ್ತಲ್ ಅವರು 2012ರಲ್ಲಿ ಆರಂಭಿಸಿದ ಈ ಆಪ್, ವಾಟ್ಸಾಪ್‌ಗೆ ಪೈಪೋಟಿ ನೀಡುವ ನಿರೀಕ್ಷೆ ಹೊಂದಿದ್ದರೂ, ಅದರ ಸ್ಪರ್ಧೆ ಎದುರಿಸುವಷ್ಟು ಶಕ್ತವಾಗಿರಲಿಲ್ಲ.

ಹೊಸ ನೀತಿ ಬಗ್ಗೆ ವಾಟ್ಸಾಪ್ ಒತ್ತಡ ಹೇರುವಂತಿಲ್ಲ: ಹೈಕೋರ್ಟ್ಹೊಸ ನೀತಿ ಬಗ್ಗೆ ವಾಟ್ಸಾಪ್ ಒತ್ತಡ ಹೇರುವಂತಿಲ್ಲ: ಹೈಕೋರ್ಟ್

ಬಳಕೆದಾರರು ಆಪ್ಲಿಕೇಷನ್‌ನಲ್ಲಿರುವ ತಮ್ಮ ದತ್ತಾಂಶಗಳನ್ನು ಡೌನ್‌ಲೋಡ್ ಮಾಡಿಕೊಂಡು ಉಳಿಸಿಕೊಳ್ಳಬಹುದು. ಜನವರಿ 14ರ ರಾತ್ರಿ 11.59ರಿಂದ ತಮ್ಮ ಚಾಟ್‌ಗಳನ್ನು ಇತರೆ ಮೆಸೇಜಿಂಗ್ ಆಪ್‌ಗಳಿಗೆ ವರ್ಗಾವಣೆ ಮಾಡಿಕೊಳ್ಳುವಂತೆ ಕಂಪೆನಿ ಮನವಿ ಮಾಡಿತ್ತು. ಆದರೆ ಕಂಪೆನಿಯ ಇತರೆ ಆಪ್‌ಗಳು ಮುಂದುವರಿಯಲಿವೆ. ವೈನ್ ಮತ್ತು ರಷ್ ಆಪ್‌ಗಳ ಮೇಲೆ ಹೆಚ್ಚು ಗಮನ ಹರಿಸುವುದಾಗಿ ಮಿತ್ತಲ್ ತಿಳಿಸಿದ್ದಾರೆ.

English summary
Made in India messaging app Hike Sticker Chat has officially shut down and was removed from Google Play Store and Apple App Store.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X