ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಡ್‌ ಇನ್ ಇಂಡಿಯಾ FAU-G ಗೇಮ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಪಟ್ಟಿಯಾಗಿದೆ

|
Google Oneindia Kannada News

ನವದೆಹಲಿ, ನವೆಂಬರ್ 30: ಪಬ್ಜಿ ಗೇಮ್ ನಿಷೇಧಗೊಂಡ ಬಳಿಕ ಅನೇಕ ದೇಸಿ ಆ್ಯಪ್‌ಗಳು ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿವೆ. ಇದರಲ್ಲಿ ಬೆಂಗಳೂರು ಮೂಲದ FAU-G ಕೂಡ ಒಂದಾಗಿದೆ. ಸದ್ಯ ಈ ಗೇಮ್‌ ಎಂದಿನಿಂದ ಮೊಬೈಲ್‌ನಲ್ಲಿ ಆಡಲು ಲಭ್ಯವಿದೆ ಎಂಬ ಸ್ಪಷ್ಟತೆ ಇಲ್ಲ. ಆದರೆ ಈ ಆನ್‌ಲೈನ್‌ ಗೇಮ್‌ ಅನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಪಟ್ಟಿ ಮಾಡಲಾಗಿದೆ.

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಪಟ್ಟಿ ಮಾಡಲಾಗಿದ್ದರೂ, ಇನ್‌ಸ್ಟಾಲ್‌ ಮಾಡಲು ಲಭ್ಯವಿಲ್ಲ. ಪ್ರಸ್ತುತ, ಸ್ಟುಡಿಯೋ ಎನ್‌ಕೋರ್ ಬಳಕೆದಾರರಿಗೆ ಆಟಕ್ಕೆ ಮೊದಲೇ ನೋಂದಾಯಿಸಲು ಮಾತ್ರ ಅವಕಾಶ ನೀಡುತ್ತಿದೆ. ಬಳಕೆದಾರರು ಮೊದಲೇ ನೋಂದಾಯಿಸಿದ ನಂತರ, ಆಟವನ್ನು ಪ್ರಾರಂಭಿಸಿದಂತೆ ಅವರಿಗೆ ನೋಟಿಫಿಕೇಶನ್ ಬರುತ್ತದೆ.

ಭಾರತದಲ್ಲಿ ಪಬ್ಜಿ ಬ್ಯಾನ್ ಎಫೆಕ್ಟ್‌: ಚೀನಾ ಕಂಪನಿ ಟೆನ್ಸೆಂಟ್‌ ಪಾಲುದಾರಿಕೆ ಕೊನೆಗೊಳಿಸಿದ ಪಬ್ಜಿ ಕಾರ್ಪ್ಭಾರತದಲ್ಲಿ ಪಬ್ಜಿ ಬ್ಯಾನ್ ಎಫೆಕ್ಟ್‌: ಚೀನಾ ಕಂಪನಿ ಟೆನ್ಸೆಂಟ್‌ ಪಾಲುದಾರಿಕೆ ಕೊನೆಗೊಳಿಸಿದ ಪಬ್ಜಿ ಕಾರ್ಪ್

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಪಟ್ಟಿ ಮಾಡಲಾಗಿರುವ ಪ್ರಕಾರ ಗೇಮ್‌ನಲ್ಲಿ ಯಾವ ಕತೆಯನ್ನು ಅನುಸರಿಸಲಿದೆ ಎಂಬುದನ್ನು ನೋಡಬಹುದು. ಭಾರತದ ಉತ್ತರ ಗಡಿಯಲ್ಲಿರುವ ಶಿಖರಗಳ ಸುತ್ತ ಆಟವನ್ನು ಹೊಂದಿಸಲಾಗಿದ್ದು, ಅಲ್ಲಿ ಎಲೈಟ್ ಫೈಟಿಂಗ್ ಗ್ರೂಪ್ ರಾಷ್ಟ್ರದ ಹೆಮ್ಮೆ ಮತ್ತು ಸಾರ್ವಭೌಮತ್ವವನ್ನು ರಕ್ಷಿಸುತ್ತದೆ.

Made In India App FAU-G Listed On Google Play Store

ವಿಶೇಷ ಅಂದರೆ ಭಾರತೀಯ ಗೇಮಿಂಗ್ ಉದ್ಯಮದ ಅನುಭವಿ ವಿಶಾಲ್ ಗೊಂಡಾಲ್ ಅವರನ್ನು ಹೂಡಿಕೆದಾರರೆಂದು ಪರಿಗಣಿಸುವ ಬೆಂಗಳೂರು ಮೂಲದ ಎನ್‌ಕೋರ್ ಗೇಮ್ಸ್‌ ಈ ಗೇಮ್ ಅನ್ನು ಸಿದ್ಧಪಡಿಸಿದ್ದು, ಯಾವಾಗ ಸಂಪೂರ್ಣವಾಗಿ ಲಭ್ಯವಿದೆ ಎಂಬುದನ್ನು ಖಚಿತಪಡಿಸಿಲ್ಲ.

ಫಿಯರ್‌ಲೆಸ್ ಆ್ಯಂಡ್ ಯೂನೈಟೆಡ್‌ ಗಾರ್ಡ್ಸ್ ಎಂಬ ಟ್ಯಾಗ್‌ಲೈನ್ ಹೊಂದಿರುವ ಈ ಗೇಮಿಂಗ್ ಅಪ್ಲಿಕೇಶನ್ ಹಲವು ವಿಶೇಷತೆಗಳಿಂದ ಕೂಡಿದ್ದು, ಭಾರತೀಯ ಸೈನಿಕರ ತ್ಯಾಗ ಮತ್ತು ಬಲಿದಾನದ ಬಗ್ಗೆಯೂ ಗೇಮ್‌ನಲ್ಲಿ ತಿಳಿಸಲಾಗುತ್ತದೆ ಎನ್ನಲಾಗಿದೆ. ಮತ್ತು ಗೇಮ್‌ ಬಳಕೆಯಿಂದ ಬರುವಂತಹ ನಿವ್ವಳ ಆದಾಯದಲ್ಲಿ ಶೇಕಡಾ 20ರಷ್ಟು ಆದಾಯವು ನೇರವಾಗಿ ಭಾರತ್‌ಕೀ ವೀರ್‌ ಟ್ರಸ್ಟ್‌ಗೆ ಜಮಾವಣೆಯಾಗಲಿದೆ ಎಂದು ಈ ಹಿಂದೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೇಳಿದ್ದಾರೆ.

English summary
Pubg alternative indian game Battle Royale game FAU-G has finally been listed on Google Play Store
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X