ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದಲ್ಲಿ ಅರ್ಧದಷ್ಟು ಉದ್ಯೋಗಿಗಳನ್ನು ಕಡಿತಗೊಳಿಸಿದ ಮಹೀಂದ್ರಾ&ಮಹೀಂದ್ರಾ

|
Google Oneindia Kannada News

ವಾಷಿಂಗ್ಟನ್‌, ಜನವರಿ 14: ಭಾರತದ ಖ್ಯಾತ ವಾಹನ ತಯಾರಕ ಮಹೀಂದ್ರಾ&ಮಹೀಂದ್ರಾ ಉತ್ತರ ಅಮೆರಿಕಾದ ತನ್ನ ಉತ್ಪಾದನಾ ಘಟಕಗಳಲ್ಲಿ ಅರ್ಧದಷ್ಟು ಉದ್ಯೋಗಿಗಳನ್ನು ಕಡಿತಗೊಳಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

2020ರ ಆರಂಭದಲ್ಲಿ ಮಹೀಂದ್ರಾ&ಮಹೀಂದ್ರಾ ಉತ್ಪಾದನಾ ಘಟಕದಲ್ಲಿ 500ಕ್ಕೂ ಹೆಚ್ಚು ನೌಕರರು ಕೆಲಸ ಮಾಡುತ್ತಿದ್ದರು. ಆದರೆ ಇದರಲ್ಲಿ ಅರ್ಧದಷ್ಟು ಜನರು ಕೆಲಸ ಕಡೆದುಕೊಂಡಿರಬಹುದು ಎನ್ನಲಾಗಿದ್ದು ನಿಖರ ಸಂಖ್ಯೆಯನ್ನು ತಿಳಿಸಲಾಗಿಲ್ಲ.

ಅಪ್ರೆಂಟಿಸ್ ತರಬೇತಿಗಾಗಿ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಅಪ್ರೆಂಟಿಸ್ ತರಬೇತಿಗಾಗಿ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಕೋವಿಡ್-19 ಸಾಂಕ್ರಾಮಿಕ ರೋಗ ಮತ್ತು ಕಾನೂನಿಗೆ ಸಂಬಂಧಪಟ್ಟಂತೆ ಇರುವ ತೊಂದರೆಗಳನ್ನು ಇಟ್ಟುಕೊಂಡು ಲಾಭದಲ್ಲಿ ಇರುವ ಅಥವಾ ಮುಂದೆ ಲಾಭ ತಂದುಕೊಡಬಲ್ಲವುಗಳನ್ನು ಮಾತ್ರ ಉಳಿಸಿಕೊಳ್ಳುವ ಉದ್ದೇಶವನ್ನು ಕಂಪನಿಯು ಹೊಂದಿದೆ.

M&M Cuts Over Half Of North America Workforce: Report

2020ರ ಮಧ್ಯಭಾಗದಿಂದ ಮಹೀಂದ್ರಾ ಅಟೋಮೋಟಿವ್ ನಾರ್ತ್ ಅಮೆರಿಕದ (ಮನಾ) ನೂರಾರು ಕಾರ್ಮಿಕರನ್ನು ವಜಾಗೊಳಿಸುತ್ತಾ ಬಂದಿದೆ ಎಂದು ಮೂಲಗಳು ತಿಳಿಸಿವೆ. ಇದರಲ್ಲಿ ಕೆಲವು ಸಿಬ್ಬಂದಿಗಳನ್ನು ರಜೆ ಮೇಲೆ ಕಳುಹಿಸಲಾಗಿದೆ ಮತ್ತು ಇನ್ನೂ ಕೆಲವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

ಕೆಲಸ ಕಳೆದುಕೊಂಡ ಜನರಲ್ಲಿ ಎಂಜಿನಿಯರ್‌ಗಳು ಮತ್ತು ಉತ್ಪಾದನಾ ಘಟಕದಲ್ಲಿ ವಾಹನಗಳ ತಯಾರಿಕೆಯ ಕಾರ್ಮಿಕರು ಸೇರಿದ್ದಾರೆ. ಹಾಗೂ ಜೊತೆಗೆ ಅಧಿಕಾರಿಗಳನ್ನು ಒಳಗೊಂಡಿದೆ.

English summary
Indian automaker Mahindra & Mahindra Ltd has cut more than half of the workforce at its North American unit, two sources familiar with the matter told Reuters, due to the COVID-19 pandemic and an ongoing legal tussle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X