ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಸಿಐಸಿಐ: ಕೆವಿ ಕಾಮತ್ ಸ್ಥಾನಕ್ಕೆ ಎಂಕೆ ಶರ್ಮ

By Mahesh
|
Google Oneindia Kannada News

ನವದೆಹಲಿ, ಜೂ.10: ಬ್ರಿಕ್ಸ್ ಬ್ಯಾಂಕಿನ ಮುಖ್ಯಸ್ಥಾರಾಗಿ ಕೆ.ವಿ. ಕಾಮತ್ ಅವರು ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಐಸಿಐಸಿಐ ಬ್ಯಾಂಕಿ ನೂತನ ಕಾರ್ಯಕಾರಿಯೇತರ ಅಧ್ಯಕ್ಷರಾಗಿ ಎಂಕೆ ಶರ್ಮ ಅವರನ್ನು ನೇಮಿಸಿದೆ.

ಬ್ಯಾಂಕಿನ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಮುಂದಿನ ಐದು ವರ್ಷಗಳ ಅವಧಿಗೆ ಕಾರ್ಯಕಾರಿಯೇತರ ಅಧ್ಯಕ್ಷರಾಗಿ ಎಂ.ಕೆ. ಶರ್ಮಾ ಅವರ ನೇಮಕಾತಿಯನ್ನು ಅನುಮೋದಿಸಲಾಗಿದೆ ಎಂದು ಐಸಿಐಸಿಐ ಬ್ಯಾಂಕ್ ಬಿಎಸ್ ಇಗೆ ತಿಳಿಸಿದೆ. [ಬ್ರಿಕ್ಸ್ ಬ್ಯಾಂಕ್ ಮುಖ್ಯಸ್ಥರಾಗಿ ಕನ್ನಡಿಗ ಕಾಮತ್]

M.K. Sharma is ICICI Bank Chairman

ಎಂಕೆ ಶರ್ಮ ಅವರ ನೇಮಕಾತಿಗೆ ಭಾರತೀಯ ರಿಸರ್ವ್ ಬ್ಯಾಂಕಿನ (ಆರ್​ಬಿಐ) ಪೂರ್ವಾನುಮೋದನೆ ಸಿಗಬೇಕಿದೆ. ಜುಲೈ 1ರಿಂದ ಜಾರಿಗೆ ಬರುವ ಸಾಧ್ಯತೆಯಿದೆ. 2003 ರಿಂದ 2011ರ ತನಕ ಐಸಿಐಸಿಐ ಬ್ಯಾಂಕಿನ ಬೋರ್ಡ್ ಸದಸ್ಯರಾಗಿ, ಸ್ವತಂತ್ರ ನಿರ್ದೇಶಕರಾಗಿ ಶರ್ಮ ಕಾರ್ಯ ನಿರ್ವಹಿಸಿದ್ದಾರೆ.

ಐಸಿಐಸಿಐ ಬ್ಯಾಂಕಿನ ಅಂಗವಾದ ಲೊಮ್ಬಾರ್ಡ್ ಇನ್ಸುರೆನ್ಸ್ ಹಾಗೂ ಪ್ರುಡೆನ್ಷಿಯಲ್ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಗಳಿಗೆ ಶರ್ಮ ನಿರ್ದೇಶಕರಾಗಿದ್ದಾರೆ. ಐಸಿಐಸಿಐ ಸಿಇಒ, ಚೇರ್ಮನ್ ಆಗಿ ಕಾರ್ಯ ನಿರ್ವಹಿಸಿ ಈಗ ಬ್ರಿಕ್ಸ್ ಬ್ಯಾಂಕಿನ ಮುಖ್ಯಸ್ಥರಾಗಿರುವ ಕೆವಿ ಕಾಮತ್ ಅವರಿಗೆ ಐಸಿಐಸಿಐ ಬೋರ್ಡ್ ಅಭಿನಂದನೆ ಸಲ್ಲಿಸಿದೆ.

ಕನ್ನಡಿಗ ಕೆ.ವಿ ಕಾಮತ್ ಅವರನ್ನು ಇನ್ಫೋಸಿಸ್ ನಾನ್ ಎಕ್ಸಿಕ್ಯೂಟಿವ್ ಚೇರ್ ಮನ್ ಸ್ಥಾನದಿಂದ ಇತ್ತೀಚೆಗೆ ಅಧಿಕೃತವಾಗಿ ತೆರವು ಮಾಡಲಾಯಿತು. ಆರ್. ಶೇಷಸಾಯಿ ಅವರ ಸ್ಥಾನಕ್ಕೆ ನೇಮಕವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.(ಪಿಟಿಐ)

English summary
ICICI Bank on Tuesday appointed M. K. Sharma as the non-executive Chairman of the Board for a period of five years, in place of K. V. Kamath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X