ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಟೋಬರ್ 20ರ ತನಕ ಭಾರತಕ್ಕೆ ಲುಫ್ತಾನ್ಸಾ ವಿಮಾನ ಹಾರಾಟವಿಲ್ಲ!

|
Google Oneindia Kannada News

ನವದೆಹಲಿ, ಸೆ.30: ಜರ್ಮನ್ ವಿಮಾನಯಾನ ಸಂಸ್ಥೆ ಲುಫ್ತಾನ್ಸಾ ಭಾರತಕ್ಕೆ ತೆರಳುವ ಎಲ್ಲಾ ವಿಮಾನಗಳನ್ನು ಅಕ್ಟೋಬರ್ 20ರ ತನಕ ತಡೆ ಹಿಡಿದಿದೆ. ಏರ್ ಬಬ್ಬಲ್ ಕುರಿತಂತೆ ಕೇಂದ್ರ ವಿಮಾನಯಾನ ಇಲಾಖೆ ಹಾಗೂ ಸಂಸ್ಥೆ ನಡುವೆ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಕಂಡು ಬಂದಿದೆ. ಸೆಪ್ಟೆಂಬರ್ 30ರಿಂದ ಅಕ್ಟೋಬರ್ 20ರ ತನಕ ನಿಗದಿಯಾಗಿದ್ದ ಎಲ್ಲಾ ವಿಮಾನ ಹಾರಾಟ ಕ್ಯಾನ್ಸಲ್ ಆಗಲಿದೆ ಎಂದು ಸಂಸ್ಥೆ ಪ್ರಕಟಿಸಿದೆ.

ಜರ್ಮನಿ ಹಾಗೂ ಭಾರತ ನಡುವಿನ ತಾತ್ಕಾಲಿಕ ಪ್ರಯಾಣ ಒಪ್ಪಂದ ಕುರಿತಂತೆ ಮಾತುಕತೆ ಫಲಪ್ರದವಾಗಿಲ್ಲ, ವಿಶೇಷ ವಿಮಾನಯಾನ ಸೌಲಭ್ಯ ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳಲಿದೆ, ಕೇಂದ್ರ ಸರ್ಕಾರವು ಸಂಸ್ಥೆ ನೀಡಿದ್ದ ಆಫರ್ ಒಪ್ಪಿಕೊಳ್ಳದ ಕಾರಣ ಜರ್ಮನಿ ಹಾಗೂ ಭಾರತ ನಡುವೆ ಸೆ. 30 ರಿಂದ ಅಕ್ಟೋಬರ್ 20ರ ತನಕ ವಿಮಾನಯಾನ ಇರುವುದಿಲ್ಲ ಎಂದು ಸಂಸ್ಥೆ ಹೇಳಿದೆ.

ಯುಎಸ್ , ಯುಕೆ, ಯುಎಇ, ಮಾಲ್ಡೀವ್ಸ್, ಫ್ರಾನ್ಸ್, ಜರ್ಮನಿ, ಕೆನಡಾ, ಕತಾರ್, ಬಹರೇನ್, ನೈಜೀರಿಯಾ, ಇರಾಕ್, ಅಫ್ಘಾನಿಸ್ತಾನ ಹಾಗೂ ಜಪಾನ್ ದೇಶಗಳ ಜೊತೆ ಭಾರತ ಸರ್ಕಾರವು ಏರ್ ಬಬ್ಬಲ್ ಒಪ್ಪಂದ ಹೊಂದಿದೆ. ಏರ್ ಬಬ್ಬಲ್ ಕಾರಿಡಾರ್ ಮೂಲಕ ಎರಡು ದೇಶಗಳ ನಡುವಿನ ಮಾನ್ಯತೆ ಪಡೆದ ವಿಮಾನಯಾನ ಸಂಸ್ಥೆಗಳು ಯಾವುದೇ ನಿರ್ಬಂಧವಿಲ್ಲದೆ ವಿಮಾನ ಹಾರಾಟ ನಡೆಸಬಹುದಾಗಿದೆ.

Lufthansa Cancels All Scheduled India Flights

ಕೊರೊನಾವೈರಸ್ ಲಾಕ್ಡೌನ್ ಸಂದರ್ಭದಲ್ಲಿ ಏರ್ ಬಬ್ಬಲ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಆದರೆ, ಜರ್ಮನಿ ಹಾಗೂ ಭಾರತ ನಡುವಿನ ಈ ಏರ್ ಬಬ್ಬಲ್ ಒಪ್ಪಂದ ಜುಲೈ ತಿಂಗಳಿನಲ್ಲಿ ಆಗಿದ್ದು, ಭಾರತ ವಿಮಾನ ಸಂಸ್ಥೆಗಳಿಗೆ ಜರ್ಮನಿಯಲ್ಲಿ ನಿರ್ಬಂಧವಿದೆ ಈ ಮೂಲಕ ಲುಫ್ತಾನ್ಸಾಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಲುಫ್ತಾನಾದ ತಾತ್ಕಾಲಿಕ ಪ್ರಯಾಣ ವ್ಯವಸ್ಥೆಯನ್ನು ಅಂಗೀಕರಿಸಿಲ್ಲ.

Recommended Video

corona timeಅಲ್ಲು income ಜೋರು | Oneindia Kannada

ಭಾರತದ ವಿಮಾನ ಸಂಸ್ಥೆಗಳಿಗೆ ವಾರಕ್ಕೆ 3 ರಿಂದ 4 ವಿಮಾನ ಹಾರಾಟ ಸಿಕ್ಕರೆ ಲುಫ್ತಾನ್ಸಾಗೆ ವಾರಕ್ಕೆ 20 ವಿಮಾನ ಹಾರಾಟ ಅವಕಾಶ ಸಿಕ್ಕಿದೆ ಎಂದು ಡಿಜಿಸಿಎ ಹೇಳಿದೆ.

English summary
The flights to India are cancelled between 30 September and 20 October due to rejection of the airline's planned flight schedule for October by Indian authorities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X