ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

7 ವರ್ಷದಲ್ಲಿ ಎಲ್‌ಪಿಜಿ ಬೆಲೆ ದುಪ್ಪಟ್ಟು, ತೈಲ ತೆರಿಗೆ ಸಂಗ್ರಹ 459% ಪಟ್ಟು ಹೆಚ್ಚು: ಪೆಟ್ರೋಲಿಯಂ ಸಚಿವ

|
Google Oneindia Kannada News

ನವದೆಹಲಿ, ಮಾರ್ಚ್ 9: ಅಡುಗೆ ಅನಿಲದ ಬೆಲೆ ಕಳೆದ ಏಳು ವರ್ಷಗಳಲ್ಲಿ ಎರಡುಪಟ್ಟು ಹೆಚ್ಚಾಗಿದ್ದು, ಪ್ರತಿ ಸಿಲಿಂಡರ್‌ಗೆ 819 ರೂ. ಆಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಗಳಲ್ಲಿನ ಹೆಚ್ಚಳದಿಂದ ಸಂಗ್ರಹವು ಸೇ 459ರಷ್ಟು ಏರಿಕೆಯಾಗಿದೆ ಎಂದು ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

ತೈಲ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಸೋಮವಾರ ವಿರೋಧಪಕ್ಷಗಳ ಸದಸ್ಯರು ಕೇಳಿದ ಅನೇಕ ಪ್ರಶ್ನೆಗಳಿಗೆ ಅವರು ಲಿಖಿತ ಉತ್ತರ ನೀಡಿದರು. 2014ರ ಮಾರ್ಚ್ 1ರಂದು ಅಡುಗೆ ಅನಿಲದ ಚಿಲ್ಲರೆ ಮಾರಾಟ ಬೆಲೆಯು ಪ್ರತಿ 14.2 ಕೆಜಿ ಸಿಲಿಂಡರ್ ಮೇಲೆ 410.5 ರೂ ಇತ್ತು. ಈಗ ಈ ತಿಂಗಳು ಅದೇ ಸಿಲಿಂಡರ್ ಬೆಲೆ 819ಕ್ಕೆ ತಲುಪಿದೆ ಎಂದು ಹೇಳಿದರು.

ಪೆಟ್ರೋಲ್, ಡೀಸೆಲ್ ದರ ಏರಿಕೆ: ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಮಲ್ಲಿಕಾರ್ಜುನ್ ಖರ್ಗೆಪೆಟ್ರೋಲ್, ಡೀಸೆಲ್ ದರ ಏರಿಕೆ: ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ

ಕಳೆದ ಕೆಲವು ವರ್ಷಗಳಿಂದ ಸಣ್ಣ ಪ್ರಮಾಣದಲ್ಲಿನ ಬೆಲೆ ಏರಿಕೆಯು ಅಡುಗೆ ಅನಿಲ ಸಿಲಿಂಡರ್ ಮೇಲಿನ ಸಬ್ಸಿಡಿಯನ್ನು ತೆಗೆದುಹಾಕಿದೆ. ಸೀಮೆ ಎಣ್ಣೆ ಮೇಲಿನ ಸಬ್ಸಿಡಿಯನ್ನೂ ತೆಗೆದುಹಾಕಲಾಗಿದೆ. ಮುಂದೆ ಓದಿ.

ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್

ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್

ಕಳೆದ ಕೆಲವು ತಿಂಗಳಿನಿಂದ ಸಬ್ಸಿಡಿಸಹಿತ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಹೆಚ್ಚಳವಾಗಿದೆ. 2020ರ ಡಿಸೆಂಬರ್ ತಿಂಗಳಲ್ಲಿ ಪ್ರತಿ ಸಿಲಿಂಡರ್ ಬೆಲೆ 594 ರೂ ಇದ್ದರೆ, ಈಗ ಅದು 819 ರೂ, ತಲುಪಿದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದರು.

ಸೀಮೆ ಎಣ್ಣೆ ದರ ಏರಿಕೆ

ಸೀಮೆ ಎಣ್ಣೆ ದರ ಏರಿಕೆ

ಇದೇ ರೀತಿ ನ್ಯಾಯಬೆಲೆ ಅಂಗಡಿಗಳ ಮೂಲಕ ಬಡವರಿಗೆ ಮಾರಾಟ ಮಾಡುತ್ತಿದ್ದ ಸೀಮೆ ಎಣ್ಣೆಯ ಬೆಲೆಯು 2014ರ ಮಾರ್ಚ್ ತಿಂಗಳಲ್ಲಿ ಪ್ರತಿ ಲೀಟರ್‌ಗೆ 14.96 ರೂ ಇತ್ತು. ಅದೀಗ ಲೀಟರ್‌ಗೆ 35.35 ರೂ ಆಗಿದೆ. ಪೆಟ್ರೋಲ್ ಮತ್ತು ಡೀಸೆಲ್‌ಗಳು ಸಹ ದೇಶದಲ್ಲಿ ಸಾರ್ವಕಾಲಿಕ ಏರಿಕೆ ಕಂಡಿವೆ ಎಂದರು.

ಮಾರ್ಚ್ 9: ಬಳ್ಳಾರಿಯಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಮಾರ್ಚ್ 9: ಬಳ್ಳಾರಿಯಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ

ಮಾರುಕಟ್ಟೆ ಆಧಾರಿಯ ಬೆಲೆ

ಮಾರುಕಟ್ಟೆ ಆಧಾರಿಯ ಬೆಲೆ

'ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು 2010ರ ಜೂನ್ 26 ಮತ್ತು 2014ರ ಅಕ್ಟೋಬರ್ 19ರಿಂದ ಕ್ರಮವಾಗಿ ಮಾರುಕಟ್ಟೆ ಆಧಾರಿತವಾಗುವಂತೆ ಸರ್ಕಾರ ಮಾಡಿತ್ತು. ಅಲ್ಲಿಂದ, ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪೆನಿಗಳು (ಒಎಂಸಿಗಳು) ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ತಮ್ಮ ಅಂತಾರಾಷ್ಟ್ರೀಯ ಉತ್ಪನ್ನ ಬೆಲೆಗಳು, ವಿನಿಮಯ ದರ, ತೆರಿಗೆ ರಚನೆ, ಒಳನಾಡು ಸಾಗಣೆ ಮತ್ತು ಇತರೆ ವೆಚ್ಚದ ಅಂಶಗಳಿಗೆ ಅನುಗುಣವಾಗಿ ನಿಗದಿಪಡಿಸುವ ನಿರ್ಧಾರ ತೆಗೆದುಕೊಳ್ಳುತ್ತವೆ' ಎಂದು ತಿಳಿಸಿದರು.

2.94 ಲಕ್ಷ ಕೋಟಿ ರೂ.ಗೆ ಹೆಚ್ಚಳ

2.94 ಲಕ್ಷ ಕೋಟಿ ರೂ.ಗೆ ಹೆಚ್ಚಳ

ಪೆಟ್ರೋಲ್ ಮತ್ತು ಡೀಸೆಲ್ ಒಟ್ಟಾರೆ ಚಿಲ್ಲರೆ ಮಾರಾಟ ದರವನ್ನು ತೆರಿಗೆಗಳು ನಿರ್ಧರಿಸುತ್ತಿವೆ. ಈ ಎರಡೂ ತೈಲಗಳ ಮಾರಾಟದ ತೆರಿಗೆಗಳಿಂದ 2013ರಲ್ಲಿ 52,537 ಕೋಟಿ ರೂ ಸಂಗ್ರಹಿಸಿದ್ದರೆ, 2019-20ರಲ್ಲಿ 2.13 ಲಕ್ಷ ಕೋಟಿ ರೂ ಸಂಗ್ರಹವಾಗಿತ್ತು. ಪ್ರಸಕ್ತ ಹಣಕಾಸು ವರ್ಷದ 11 ತಿಂಗಳಲ್ಲಿ 2.94 ಲಕ್ಷ ಕೋಟಿ ರೂ.ಗೆ ಈ ಸಂಗ್ರಹ ಹೆಚ್ಚಳ ಕಂಡಿದೆ ಎಂದು ಮಾಹಿತಿ ನೀಡಿದರು.

ಸುಂಕ ಸಂಗ್ರಹ ಭಾರಿ ಏರಿಕೆ

ಸುಂಕ ಸಂಗ್ರಹ ಭಾರಿ ಏರಿಕೆ

ಸರ್ಕಾರವು ಪ್ರಸ್ತುತ ಒಂದು ಲೀಟರ್ ಪೆಟ್ರೋಲ್ ಮೇಲೆ 32.90 ರೂ ಹಾಗೂ ಡೀಸೆಲ್ ಮೇಲೆ 31.80 ರೂ ಅಬಕಾರಿ ಸುಂಕ ವಿಧಿಸುತ್ತಿದೆ. 2018ರಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಲೀಟರ್‌ಗೆ 17.98 ರೂ ಇದ್ದರೆ, ಡೀಸೆಲ್ ಮೇಲೆ 13.83 ರೂ ಇತ್ತು ಎಂದು ಸಚಿವರು ತಿಳಿಸಿದರು.

ಪೆಟ್ರೋಲ್, ಡೀಸೆಲ್, ಎಟಿಎಫ್, ನೈಸರ್ಗಿಕ ಅನಿಲ ಮತ್ತು ಕಚ್ಚಾತೈಲಗಳಿಂದ ಕೇಂದ್ರ ಸರ್ಕಾರ ಸಂಗ್ರಹಿಸುವ ಒಟ್ಟಾರೆ ಅಬಕಾರಿ ಸುಂಕವು 2016-17ರಲ್ಲಿ 2.37 ಲಕ್ಷ ಕೋಟಿ ಇದ್ದರೆ, 2020-21ರ ಏಪ್ರಿಲ್-ಜನವರಿ ಅವಧಿಯಲ್ಲಿ 3.01 ಲಕ್ಷ ಕೋಟಿ ರೂ.ಗೆ ಹೆಚ್ಚಾಗಿದೆ ಎಂದರು.

English summary
Petroleum Minister Dharmendra Pradhan said, LPG worth double in 7 years; tax assortment on petrol, diesel jumps to 459%.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X