ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್19 ಲಾಕ್ ಡೌನ್ ನಡುವೆ ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಕೆ

|
Google Oneindia Kannada News

ನವದೆಹಲಿ, ಏಪ್ರಿಲ್ 1: ಕೊರೊನಾವೈರಸ್ ಸೋಂಕು ತಡೆಗಟ್ಟಲು ದೇಶದೆಲ್ಲೆದೆ ಲಾಕ್ ಡೌನ್ ಜಾರಿಯಲ್ಲಿದೆ. ಇಂದಿನಿಂದ ತೈಲ ಬೆಲೆ ಏರಿಕೆ ಕಂಡಿದೆ. ಆದರೆ, ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ತಗ್ಗಿಸಲಾಗಿದೆ. ಪ್ರತಿ ತಿಂಗಳ ಆರಂಭದಲ್ಲಿ ಬೆಲೆ ಪರಿಷ್ಕರಣೆ ಮಾಡಲಾಗುತ್ತದೆ. ಅದರಂತೆ, ಸತತ ಎರಡು ತಿಂಗಳಿನಿಂದ ಎಲ್ಪಿಜಿ ಬಳಕೆದಾರರಿಗೆ ಸಿಹಿ ಸುದ್ದಿ ಸಿಕ್ಕಿದೆ.

ಮಾರ್ಚ್ ತಿಂಗಳ ಆರಂಭದಲ್ಲೇ ಎಲ್ ಪಿಜಿ ಗ್ರಾಹಕರಿಗೆ ಶುಭ ಸುದ್ದಿ ಸಿಕ್ಕಿತ್ತು. ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ತಗ್ಗಿಸಲಾಗಿದೆ. ಸಬ್ಸಿಡಿರಹಿತ ಎಲ್ ಪಿಜಿ ಸಿಲಿಂಡರ್ ಬೆಲೆಗಳನ್ನು ಮಾರ್ಚ್ 01ರಿಂದ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 53 ರೂ. ನಷ್ಟು ಇಳಿಕೆ, ಇದೇ ರೀತಿ 19 ಕೆಜಿ ವಾಣಿಜ್ಯ ಸಿಲಿಂಡರ್ ಸಹ 84.50 ರೂ.ಗಳಿಂದ ಅಗ್ಗವಾಗಿತ್ತು.

ಈಗ ಕಳೆದ ಕೆಲ ವಾರಗಳಿಂದ ಜಾಗತಿಕವಾಗಿ ಕಚ್ಚಾತೈಲ ಬೆಲೆ ಇಳಿಕೆಯಾಗಿರುವುದರಿಂದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಒಸಿ), ಏಪ್ರಿಲ್ 1 ರಿಂದ ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಕೆ ಮಾಡಿ ಆದೇಶಿಸಿದೆ. 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 61.5ರಷ್ಟು ಇಳಿಕೆಯಾಗಿದ್ದು, 805.5 ರು ಬದಲಿಗೆ 744 ರು ನೀಡಿದರೆ ಸಾಕು.

LPG cylinders cheaper by up to Rs 65, second price cut in two months

ಇದೇ ರೀತಿ ಕೋಲ್ಕತಾದಲ್ಲಿ 774.5(ಕಳೆದ ತಿಂಗಳ ದರ 839.5 ರು), ಮುಂಬೈ 714.5 ರು(776.5 ರು), ಚೆನ್ನೈ 761.5 ರು (826 ರು) ಹಾಗೂ ಬೆಂಗಳೂರು 802.7 ರು(862.50ರು). ನಿಮ್ಮ ನಗರದಲ್ಲಿ ಎಲ್ಪಿಜಿ, ಪೆಟ್ರೋಲ್, ಡೀಸೆಲ್ ದರವನ್ನು ತಿಳಿಯಲು ಕ್ಲಿಕ್ ಮಾಡಿ (https://kannada.goodreturns.in/lpg-price.html)

ಗಮನಿಸಿ: ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಪ್ರತಿ ತಿಂಗಳ ಮೊದಲ ದಿನದಂದು ಇಂಧನ ದರ, ಸಬ್ಸಿಡಿ ರಹಿತ ಎಲ್ ಪಿಜಿ, ಜೆಟ್ ಇಂಧನ, ಸೀಮೆಎಣ್ಣೆ ಬೆಲೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ. ಬೆಲೆ ಏರಿಕೆ ಹಾಗೂ ಇಳಿಕೆ ಎಲ್ಲವೂ ಜಾಗತಿಕ ಮಾರುಕಟ್ಟೆ ದರದ ಮೇಲೆ ಅವಲಂಬಿತವಾಗಿರುತ್ತದೆ. ಇದಲ್ಲದೆ ಆರು ತಿಂಗಳಿಗೊಮ್ಮೆ ನೈಸರ್ಗಿಕ ಅನಿಲದ ಸರಾಸರಿ ದರ ನಿಗದಿಪಡಿಸಲಾಗುತ್ತದೆ.

English summary
Amid the nationwide coronavirus lockdown, in its monthly revision, prices of non-subsidized 14.2 kg LPG (liquid petroleum gas) cylinders were cut by an average of Rs 63 on Wednesday by the state-owned Indian Oil Corporation Limited (IOC).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X