ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ ಮೂರನೇ ಬಾರಿಗೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ

|
Google Oneindia Kannada News

ನವದೆಹಲಿ, ನವೆಂಬರ್ 02: ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸತತ ಮೂರನೇ ಬಾರಿಗೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಪರಿಷ್ಕರಣೆ ಮಾಡಿವೆ. ಆರಂಭದಿನದಂದು ಸಬ್ಸಿಡಿ ರಹಿತ 14.2 ಕೆ.ಜಿ ಅಡುಗೆ ಅನಿಲ ಸಿಲಿಂಡರ್ ಬೆಲೆ ತುಸು ಏರಿಕೆಯಾಗಿದೆ. ನವೆಂಬರ್ 01ರಂದು ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆ 76.50 ರು ಏರಿಕೆ ಮಾಡಿ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೆಷನ್(ಐಒಸಿ) ಆದೇಶ ನೀಡಿದೆ.

ಜುಲೈ ಹಾಗೂ ಆಗಸ್ಟ್ ಎಲ್ ಪಿ ಜಿ ಬೆಲೆ 100 ಹಾಗೂ 62 ರು ಕಡಿತಕೊಂಡಿತ್ತು. ಅಕ್ಟೋಬರ್ ತಿಂಗಳಿನಲ್ಲಿ 14.2 ಕೆ.ಜಿ ಎಲ್ ಪಿಜಿ ಸಿಲಿಂಡರ್ ಸರಾಸರಿ 13.5 ರು ಏರಿಕೆ ಕಂಡಿತ್ತು. ಸೌದಿ ಅರೇಬಿಯಾದ ತೈಲ ಘಟಕದ ಮೇಲೆ ದಾಳಿ, ಯುಎಸ್ಎ ಹಾಗೂ ಚೀನಾ ನಡುವಿನ ವ್ಯಾಪಾರ ವಹಿವಾಟು, ಎಲ್ಲವೂ ತೈಲ ಬೇಡಿಕೆ ಮೇಲೆ ಪರಿಣಾಮ ಬೀರಿದ್ದು ಸುಳ್ಳಲ್ಲ.

ಅಕ್ಟೋಬರ್ 01ರಿಂದ ದೆಹಲಿಯಲ್ಲಿ, 14.2 ಕೆ.ಜಿ ಸಬ್ಸಿಡಿ ರಹಿತ ಅನಿಲ ಸಿಲಿಂಡರ್ ಬೆಲೆ 605 ರೂಪಾಯಿ (590ರು ಈ ಹಿಂದಿನ ದರ) ಯಾಗಿದೆ.19 ಕೆ.ಜಿ ಸಿಲಿಂಡರ್ ಬೆಲೆ 1085 ರೂಪಾಯಿಯಾಗಿದೆ. ಮುಂಬೈಯಲ್ಲಿ ಸಬ್ಸಿಡಿ ರಹಿತ ಅನಿಲ ಸಿಲಿಂಡರ್ ಬೆಲೆ 574.5ರು ಕೋಲ್ಕತ್ತಾದಲ್ಲಿ 630 ರೂಪಾಯಿ ಹಾಗೂ ಚೆನ್ನೈನಲ್ಲಿ 620 ರೂಪಾಯಿಯಾಗಿತ್ತು.

ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆ ತುಸು ಏರಿಕೆಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆ ತುಸು ಏರಿಕೆ

ನವೆಂಬರ್ 01 ರಿಂದ 14.2 ಕೆ.ಜಿ ಸಬ್ಸಿಡಿ ರಹಿತ ಅನಿಲ ಸಿಲಿಂಡರ್ ದೆಹಲಿಯಲ್ಲಿ 681.50 ರು(605 ರು ಈ ಹಿಂದಿನ ದರ), ಮುಂಬೈಯಲ್ಲಿ ಸಬ್ಸಿಡಿ ರಹಿತ ಅನಿಲ ಸಿಲಿಂಡರ್ ಬೆಲೆ 651ರು ಕೋಲ್ಕತ್ತಾದಲ್ಲಿ706 ರೂಪಾಯಿ ಹಾಗೂ ಚೆನ್ನೈನಲ್ಲಿ 696 ರೂಪಾಯಿಯಾಗಿದೆ.

ತೈಲ ಪೂರೈಕೆಯಲ್ಲಿ ವ್ಯತ್ಯಯ

ತೈಲ ಪೂರೈಕೆಯಲ್ಲಿ ವ್ಯತ್ಯಯ

ಸೌದಿ ತೈಲ ಘಟಕದ ಮೇಲೆ ಡ್ರೋನ್ ದಾಳಿ ಬಳಿಕ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಆದರೆ, ಭಾರತಕ್ಕೆ ಅಗತ್ಯ ಇಂಧನ ಪೂರೈಸುವ ಭರವಸೆಯನ್ನು ಸೌದಿ ಅರೇಬಿಯಾ ನೀಡಿದೆ. ಈ ನಡುವೆ ಒಎನ್‌ಜಿಸಿ ಮತ್ತು ಆಯಿಲ್ ಇಂಡಿಯಾ ಲಿಮಿಟೆಡ್ (ಐಒಸಿಎಲ್) ಉತ್ಪಾದಿಸುವ ನೈಸರ್ಗಿಕ ಅನಿಲದ ಬೆಲೆ ಇಳಿಕೆಯಾಗಿದೆ. ಹೊಸ ಬೆಲೆಯ ಸರಾಸರಿ ದರ ಅಕ್ಟೋಬರ್ ಒಂದರಿಂದ ಇನ್ನು ಆರು ತಿಂಗಳು ಜಾರಿಯಲ್ಲಿರಲಿದೆ. ನೈಸರ್ಗಿಕ ಅನಿಲ ಬೆಲೆಗಳನ್ನು ಪ್ರತಿ ಆರು ತಿಂಗಳಿಗೊಮ್ಮೆ ನಿಗದಿಪಡಿಸಲಾಗುತ್ತದೆ. ಪ್ರತಿ ವರ್ಷ ಏಪ್ರಿಲ್ 1 ಮತ್ತು ಅಕ್ಟೋಬರ್ 1 ರಂದು ಅನಿಲ ಬೆಲೆಗಳನ್ನು ಬದಲಾಯಿಸಲಾಗುತ್ತದೆ.

ಆಗಸ್ಟ್ ತಿಂಗಳಿನಲ್ಲಿ ಇಳಿಕೆಯಾಗಿದ್ದ ದರ

ಆಗಸ್ಟ್ ತಿಂಗಳಿನಲ್ಲಿ ಇಳಿಕೆಯಾಗಿದ್ದ ದರ

ಆಗಸ್ಟ್ 01ರಂದು ಗೃಹ ಬಳಕೆಯ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಇಳಿಕೆಯಾಗಿತ್ತು. ಪ್ರತಿ ಸಿಲಿಂಡರ್ ಬೆಲೆಯಲ್ಲಿ 62.5 ರು ಇಳಿಕೆಯಾಗಿದ್ದು, 637 ರೂ.ನಿಂದ 574.5 ರೂ. ಗೆ ಇಳಿಕೆ ಮಾಡಲಾಗಿತ್ತು. ಜೂನ್ 02ರಂದು ಸಬ್ಸಿಡಿ ರಹಿತ ಗ್ಯಾಸ್ ಬೆಲೆ 25 ರೂ. ಏರಿಕೆಯಾಗಿತ್ತು. ಸಬ್ಸಿಡಿ ಇರುವ ಗ್ಯಾಸ್ ಸಿಲಿಂಡರ್ ಬೆಲೆ 1.23 ರೂ.ಏರಿಕೆಯಾಗಿತ್ತು ಸತತ ನಾಲ್ಕನೇ ಬಾರಿಗೆ ಎಲ್ ಪಿಜಿ ಬೆಲೆ ಏರಿಕೆಯಾಗಿತ್ತು

ಕಳೆದ ವರ್ಷ ನವೆಂಬರ್ ನಲ್ಲಿ ಅಧಿಕ ದರವಿತ್ತು

ಕಳೆದ ವರ್ಷ ನವೆಂಬರ್ ನಲ್ಲಿ ಅಧಿಕ ದರವಿತ್ತು

ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ದರದಲ್ಲಿ 250ರು ಕಡಿಮೆ ಕಂಡು ಬರುತ್ತದೆ. ನವೆಂಬರ್ 2018ರಲ್ಲಿ ಎಲ್ ಪಿ ಜಿ ಸಿಲಿಂಡರ್ ದರ ದೆಹಲಿಯಲ್ಲಿ 939ರು ತನಕ ಏರಿತ್ತು. ಆದರೆ, ಈಗ ಯುಎಸ್ ಡಾಲರ್ ಹಾಗೂ ರುಪಾಯಿ ನಡುವಿನ ಬೆಲೆ ವ್ಯತ್ಯಾಸ, ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಆಧಾರವಾಗಿಟ್ಟುಕೊಂಡು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಬೆಲೆ ನಿಗದಿ ಮಾಡಿವೆ. ಸಬ್ಸಿಡಿದಾರರು ವಾರ್ಷಿಕ ಗೃಹಬಳಕೆಯ 12 ಸಿಲಿಂಡರ್(14.2 ಕೆಜಿ ) ನಂತರ ಬಳಸುವ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ಮೇಲೆ ಜಿಎಸ್ ಟಿ ಕೂಡಾ ಅನ್ವಯವಾಗಲಿದ್ದು, ಸಿಲಿಂಡರ್ ಬೇಲೆ ಏರಿಳಿತಕ್ಕೆ ಕಾರಣವಾಗಲಿದೆ.

ಆರು ತಿಂಗಳಿಗೊಮ್ಮೆ ನಿಗದಿ

ಆರು ತಿಂಗಳಿಗೊಮ್ಮೆ ನಿಗದಿ

ಗಮನಿಸಿ: ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಪ್ರತಿ ತಿಂಗಳ ಮೊದಲ ದಿನದಂದು ಇಂಧನ ದರ, ಸಬ್ಸಿಡಿ ರಹಿತ ಎಲ್ ಪಿಜಿ, ಜೆಟ್ ಇಂಧನ, ಸೀಮೆಎಣ್ಣೆ ಬೆಲೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ. ಬೆಲೆ ಏರಿಕೆ ಹಾಗೂ ಇಳಿಕೆ ಎಲ್ಲವೂ ಜಾಗತಿಕ ಮಾರುಕಟ್ಟೆ ದರದ ಮೇಲೆ ಅವಲಂಬಿತವಾಗಿರುತ್ತದೆ. ಇದಲ್ಲದೆ ಆರು ತಿಂಗಳಿಗೊಮ್ಮೆ ನೈಸರ್ಗಿಕ ಅನಿಲದ ಸರಾಸರಿ ದರ ನಿಗದಿಪಡಿಸಲಾಗುತ್ತದೆ.

English summary
In its monthly revision, prices of non-subsidized 14.2 kg LPG (liquid petroleum gas) cylinders were raised by Rs 76.50 by the state-owned Indian Oil Corporation Limited (IOC) across major Indian cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X