ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್‌ನಲ್ಲಿ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಬದಲಾವಣೆ ಇಲ್ಲ: ಪ್ರಮುಖ ನಗರಗಳ ದರ ಇಲ್ಲಿದೆ

|
Google Oneindia Kannada News

ನವದೆಹಲಿ, ಡಿಸೆಂಬರ್ 01: ದೇಶದ ತೈಲ ಮಾರುಕಟ್ಟೆ ಕಂಪನಿಗಳು ಡಿಸೆಂಬರ್‌ನಲ್ಲಿ ದೇಶದ ಪ್ರಮುಖ ನಗರಗಳಾದ ದೆಹಲಿ, ಕೋಲ್ಕತಾ, ಮುಂಬೈ ಮತ್ತು ಚೆನ್ನೈನಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಯಥಾಸ್ಥಿತಿ ಕಾಯ್ದುಕೊಂಡಿದೆ. ಜುಲೈನಿಂದ ಸತತ ಐದನೇ ತಿಂಗಳು ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ.

ಇಂಡಿಯನ್ ಆಯಿಲ್ ಕಾರ್ಪೊರೇಶನ್ ವೆಬ್‌ಸೈಟ್ ಪ್ರಕಾರ ದೆಹಲಿ ಮತ್ತು ಮುಂಬೈಯಲ್ಲಿ ಸಬ್ಸಿಡಿ ರಹಿತ 14 ಕೆಜಿ ಎಲ್‌ಪಿಜಿ ಸಿಲಿಂಡರ್ 594 ರೂ.ಗೆ ಮಾರಾಟವಾಗಿದ್ದರೆ, ಕೋಲ್ಕತ್ತಾದಲ್ಲಿ 620.50 ರೂ. ಚೆನ್ನೈನಲ್ಲಿ ಸಬ್ಸಿಡಿ ರಹಿತ 14 ಕೆಜಿ ಎಲ್‌ಪಿಜಿ ಸಿಲಿಂಡರ್ 610 ರೂ.ಗೆ ಮಾರಾಟವಾಗಿದೆ. ಇನ್ನು ಬೆಂಗಳೂರಿನಲ್ಲಿ ಎಲ್‌ಪಿಜಿ ದರವು 597 ರೂಪಾಯಿ ಮುಂದುವರಿದಿದೆ.

ದೇಶದಲ್ಲೇ ಅತಿದೊಡ್ಡ LPG ಸಿಲಿಂಡರ್ ಬುಕ್ಕಿಂಗ್ ವೇದಿಕೆಯಾದ ಪೇಟಿಎಂದೇಶದಲ್ಲೇ ಅತಿದೊಡ್ಡ LPG ಸಿಲಿಂಡರ್ ಬುಕ್ಕಿಂಗ್ ವೇದಿಕೆಯಾದ ಪೇಟಿಎಂ

ದೇಶದಲ್ಲಿ ಎಲ್‌ಪಿಜಿ ಅಥವಾ ಅಡುಗೆ ಅನಿಲ ಬೆಲೆಗಳಲ್ಲಿನ ಯಾವುದೇ ಪರಿಷ್ಕರಣೆಗಳನ್ನು ರಾಜ್ಯ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ತಿಂಗಳ ಮೊದಲ ದಿನದಲ್ಲಿ ಜಾರಿಗೆ ತರುತ್ತವೆ. ಭಾರತ್ ಗ್ಯಾಸ್, ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ಇದರಲ್ಲಿ ಸೇರಿವೆ.

LPG Cylinder Price Unchanged In December: Latest Rate Here

ಪ್ರಸ್ತುತ, ಸರ್ಕಾರವು ಪ್ರತಿ ಮನೆಗೆ 12 ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡುತ್ತದೆ. ಈ ಸಬ್ಸಿಡಿಯನ್ನು ಸಿಲಿಂಡರ್ ಖರೀದಿಸಿದ ನಂತರ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಸರಾಸರಿ ಅಂತರರಾಷ್ಟ್ರೀಯ ಎಲ್‌ಪಿಜಿ ಬೆಲೆಗಳಲ್ಲಿನ ಏರಿಳಿತ ಮತ್ತು ವಿದೇಶಿ ವಿನಿಮಯ ದರದ ಕಾರಣ ಸಬ್ಸಿಡಿ ತಿಂಗಳಿಂದ ತಿಂಗಳಿಗೆ ಬದಲಾಗುತ್ತದೆ.

ಎಲ್‌ಪಿಜಿ ಸಿಲಿಂಡರ್ ಬೆಲೆಗಳನ್ನು ಸರಾಸರಿ ಅಂತರರಾಷ್ಟ್ರೀಯ ಎಲ್‌ಪಿಜಿ ಬೆಲೆಗಳಲ್ಲಿನ ವ್ಯತ್ಯಾಸಗಳು ಮತ್ತು ಯುಎಸ್ ಡಾಲರ್ ಮತ್ತು ರೂಪಾಯಿ ವಿನಿಮಯ ದರಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

English summary
Non-subsidised LPG or liquefied petroleum gas prices were left unchanged in December
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X