ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಡ್‌ನ್ಯೂಸ್: ಯಥಾಸ್ಥಿತಿ ಕಾಯ್ಡುಕೊಂಡ ಎಲ್‌ಪಿಜಿ ಸಿಲಿಂಡರ್ ಬೆಲೆ

|
Google Oneindia Kannada News

ನವದೆಹಲಿ, ಆಗಸ್ಟ್‌ 01: ದೇಶದ ತೈಲ ಮಾರುಕಟ್ಟೆ ಕಂಪನಿಗಳು ಆಗಸ್ಟ್‌ನಲ್ಲಿ ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆಗಳ ಪಟ್ಟಿ ಬಿಡುಗಡೆ ಮಾಡಿದ್ದು, ದೆಹಲಿ, ಕೊಲ್ಕತ್ತಾ ಹೊರತುಪಡಿಸಿ ದೇಶದ ಪ್ರಮುಖ ನಗರಗಳಲ್ಲಿ ಸಿಲಿಂಡರ್ ಬೆಲೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.

ಆಗಸ್ಟ್ 1 ರಂದು ಸಬ್ಸಿಡಿ ರಹಿತ ಎಲ್‌ಪಿಜಿ ಅಥವಾ ದ್ರವೀಕೃತ ಪೆಟ್ರೋಲಿಯಂ ಅನಿಲ ಬೆಲೆಗಳು ದೆಹಲಿ, ಕೋಲ್ಕತಾ ಹೊರತುಪಡಿಸಿ ಹೆಚ್ಚಿನ ಮಹಾನಗರಗಳಲ್ಲಿ ಬದಲಾಗದೆ ಉಳಿದಿವೆ. ಚಿಲ್ಲರೆ ದರವನ್ನು ಪ್ರತಿ ಸಿಲಿಂಡರ್‌ಗೆ 50 ಪೈಸೆ ಯಿಂದ 1 ರೂ. ಹೆಚ್ಚಿಸಲಾಗಿದೆ. ಪ್ರಸ್ತುತ, ದೇಶದಲ್ಲಿ ಎಲ್‌ಪಿಜಿ ಅಥವಾ ಅಡುಗೆ ಅನಿಲ ಬೆಲೆಗಳಲ್ಲಿನ ಯಾವುದೇ ಪರಿಷ್ಕರಣೆಗಳನ್ನು ತಿಂಗಳ ಮೊದಲ ದಿನದಲ್ಲಿ ಜಾರಿಗೆ ತರಲಾಗುತ್ತದೆ.

ವಾಟ್ಸಾಪ್ ಮೂಲಕ LPG ಸಿಲಿಂಡರ್ ಬುಕ್ ಮಾಡೋದು ಹೇಗೆ?ವಾಟ್ಸಾಪ್ ಮೂಲಕ LPG ಸಿಲಿಂಡರ್ ಬುಕ್ ಮಾಡೋದು ಹೇಗೆ?

ಸತತ ಮೂರು ತಿಂಗಳ ಕಡಿತದ ನಂತರ ಜೂನ್ ಮತ್ತು ಜುಲೈನಲ್ಲಿ ಅಡುಗೆ ಅನಿಲ ದರವನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸಲಾಯಿತು. ಆಗಸ್ಟ್ 1 ರಿಂದ ಜಾರಿಗೆ ಬರುವಂತೆ, ಸಬ್ಸಿಡಿ ರಹಿತ ಎಲ್‌ಪಿಜಿಯ ಬೆಲೆಯನ್ನು ಕೋಲ್ಕತ್ತಾದಲ್ಲಿ ಅಸ್ತಿತ್ವದಲ್ಲಿರುವ ಸಿಲಿಂಡರ್‌ಗೆ 620.50 ರೂ.ನಿಂದ 621 ರೂ.ಗೆ ಏರಿಸಲಾಗಿದೆ ಎಂದು ಎಲ್‌ಪಿಜಿ ಪೂರೈಸುವ ದೇಶದ ಅತಿದೊಡ್ಡ ಇಂಧನ ಚಿಲ್ಲರೆ ವ್ಯಾಪಾರಿ ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ ಅಂಕಿ ಅಂಶಗಳು ತಿಳಿಸಿವೆ.

LPG Cylinder Price Nearly Unchanged In Most Metros On Aug 1

ನಾಲ್ಕು ಮಹಾನಗರಗಳಲ್ಲಿ 14.2ಕೆಜಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಪ್ರಸ್ತುತ ಬೆಲೆಗಳು ಇಲ್ಲಿವೆ:

ನಗರ ಆಗಸ್ಟ್‌ 1ರಿಂದ ಹಳೆಯ ದರ
ದೆಹಲಿ 681.50 679.50
ಕೊಲ್ಕತ್ತಾ 621.00 620.50
ಮುಂಬೈ 594.00 594.00
ಬೆಂಗಳೂರು 597.00 597.00
ಚೆನ್ನೈ 610.50 610.50
ಹೈದ್ರಾಬಾದ್ 646.50 645.50
English summary
Non-subsidised LPG or liquefied petroleum gas prices were left unchanged in most metros on August 1, except Kolkata, where the retail rate was increased by 50 paise per cylinder.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X